ಬೆಂಗಳೂರು : Idli ATM : ಎಟಿಎಂ ಗಳಲ್ಲಿ ಹಣ ಡ್ರಾ ಮಾಡೋದು, ಕಾಯಿನ್ ಹಾಕಿ ಕುಡಿಯುವ ನೀರು ಪಡೆಯೋದು, ಜ್ಯೂಸ್ ಪಡೆಯೋದು, ಕಾಸು ಕೊಟ್ಟು ಸ್ಯಾನಿಟರಿ ಪ್ಯಾಡ್ ಪಡೆಯೋ ಆಧುನಿಕ ವ್ಯವಸ್ಥೆಯನ್ನು ನಾವು ನೋಡಿದ್ದೇವೆ. ಆದರೆ ಇದು ನಿಮ್ಮ ಹಸಿವನ್ನು ನೀಗಿಸಬಲ್ಲ ಎಟಿಎಂ. ಅರ್ರೇ ಇದೇನಿದು ಹಸಿವು ನೀಗಿಸೋ ಎಟಿಎಂ ಅಂತ ಕೇಳ್ತಿದ್ದೀರಾ? ಇಲ್ಲಿ ನೀವು ಹಣ ಹಾಕಿ ಬಿಸಿ ಬಿಸಿಯಾದ ಇಡ್ಲಿ, ವಡೆ ಪಡೆಯಬಹುದು.
ಹೌದು ಸಿಲಿಕಾನ್ ಸಿಟಿಯಲ್ಲಿ ಇರೋ ಹಣದ ಎಟಿಎಂಗಳ ಬಳಿಕ ಈಗ ಇಡ್ಲಿ ಎಟಿಎಂ ಸದ್ದು ಮಾಡಲಾರಂಭಿಸಿದೆ. ಸ್ಟಾರ್ಟ್ ಅಪ್ ಸಂಸ್ಥೆಯಾಗಿರೋ ಪ್ರೆಶ್ ಹಾಟ್ ( Freshhot) ಎಂಬ ಆಹಾರ ಕಂಪನಿ ಇಂತಹದೊಂದು ಪ್ರಯೋಗಕ್ಕೆ ಮುಂದಾಗಿದೆ. ಎಟಿಎಂ ಮೆಶಿನ್ ಹೋಲುವ ಮೆಶಿನ್ ವೊಂದನ್ನು ನಗರದ ಎರಡು ಕಡೆಗಳಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ ನೀವು ನಿಮ್ಮ ಮೊಬೈಲ್ ನಲ್ಲಿ ಸ್ಕ್ಯಾನ್ ಮಾಡಬಹುದು. ಆಗ ಸಿಗೋ ಮೆನುದಲ್ಲಿ ನೀವು ನಿಮಗೆ ಬೇಕಾದ ಆಹಾರ ಪದಾರ್ಥ ಸೆಲೆಕ್ಟ್ ಮಾಡಿ ಆರ್ಡರ್ ಮಾಡಬೇಕು. ಬಳಿಕ ನೀವು ಹಣ ಪೇ ಮಾಡಿದ ಮೇಲೆ ಅಲ್ಲಿಯೇ ಬಿಸಿ ಬಿಸಿಯಾದ ಇಡ್ಲಿ ಸಿದ್ಧವಾಗುತ್ತದೆ.
ಅಷ್ಟೇ ಅಲ್ಲ ಇಡ್ಲಿ ಜೊತೆ ಚಟ್ನಿ ಕೂಡ ಇಕೋ ಪ್ರೆಂಡ್ಲಿ ವ್ಯವಸ್ಥೆಯಲ್ಲಿ ಪ್ಯಾಕ್ ಆಗಿ ಬರಲಿದೆ. ಅಲ್ಲಿಯೇ ಕೂತು ಇಡ್ಲಿ ಸವಿಯುವ ಅವಕಾಶವೂ ಇದೆ. ಉದ್ಯಮಿಗಳಾದ ಶರಣ್ ಹೀರೇಮಠ್ ಹಾಗೂ ಸುರೇಶ್ ಚಂದ್ರಶೇಖರ್ ಇಬ್ಬರೂ ಸೇರಿ ಈ ಇಡ್ಲಿ ಉದ್ಯಮವನ್ನು ಆರಂಭಿಸಿದ್ದಾರೆ. ಸುರೇಶ್ ಚಂದ್ರಶೇಖರ ತಮ್ಮ ಮಗಳ ಅನಾರೋಗ್ಯದ ಸಂದರ್ಭದಲ್ಲಿ ಮಧ್ಯರಾತ್ರಿ ಇಡ್ಲಿಗಾಗಿ ನಗರದ ಎಲ್ಲೆಡೆ ಓಡಾಡಿದ್ದರಂತೆ. ಆದರೂ ಸಿಕ್ಕಿರಲಿಲ್ಲವಂತೆ. ಅಲ್ಲದೇ ಶರಣ್ ಹಿರೇಮಠಟ್ರಿಪ್ ವೇಳೆ ಹೊರಗಡೆಯಿಂದ ಅವಧಿ ಮೀರಿದ ಇಡ್ಲಿ ತಿಂದು ಅನರೋಗ್ಯಕ್ಕಿಡಾಗಿದ್ದರಂತೆ.
ಇದರಿಂದ ಪ್ರೇರೇಪಿತರಾದ ಇಬ್ಬರು ಉದ್ಯಮಿಗಳು ಈಗ ಪ್ರೆಶ್ ಇಡ್ಲಿ ಸಪ್ಲೈ ಮಾಡಲು ಇಡ್ಲಿ ಎಟಿಎಂ ಸಿದ್ಧಪಡಿಸಿದ್ದಾರೆ. ಪ್ರೆಶ್ ಹಾಟ್ ರೋಬೋಟಿಕ್ ಇಡ್ಲಿ ಉದ್ಯಮವು ಈಗ ಸದ್ಯ ಬೆಂಗಳೂರಿನ ಎರಡು ಸ್ಥಳದಲ್ಲಿ ಲಭ್ಯವಾಗುತ್ತಿದ್ದು, ಸದ್ಯದಲ್ಲೇ ಬೆಂಗಳೂರಿನ ಇತರ ಬಸ್ ನಿಲ್ದಾಣ, ಮಾಲ್ ಗಳಲ್ಲಿ ಕೂಡ ಈ ಉದ್ಯಮ ವಿಸ್ತರಣೆಯಾಗಲಿದೆ. ಇಡ್ಲಿ ಎಟಿಎಂ ಹೇಗೆ ಕಾರ್ಯನಿರ್ವಹಿಸಲಿದೆ ಎಂಬ ವಿಡಿಯೋ ಟ್ವಿಟರ್ ನಲ್ಲಿ ಸಖತ್ ವೈರಲ್ ಆಗಿದ್ದು ನೀವೊಮ್ಮೆ ಈ ವಿಡಿಯೋ ನೋಡಲು ಬರೆಯಬೇಡಿ.
ಇದನ್ನೂ ಓದಿ : Operation Demolishan : ಬೆಂಗಳೂರಲ್ಲಿ ಆಪರೇಶನ್ ಡೆಮೋಲಿಶನ್ : ಪೆಟ್ರೋಲ್ ಸುರಿದು ದಂಪತಿ ಆತ್ಮಹತ್ಯೆ ಯತ್ನ
Idli ATM in Bengaluru 24×7 service viral video