ಬೆಂಗಳೂರು : ಭಾರತದಾದ್ಯಂತ 5ಜೀ ನೆಟ್ವರ್ಕ್ (5G test Namma metro) ಬಗ್ಗೆ ಚರ್ಚೆಗಳು ನಡೆದಿರುವಾಗಲೇ ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿ ನಲ್ಲಿ ನಮ್ಮ ಮೆಟ್ರೋದಲ್ಲಿ 5 ಜೀ ನೆಟ್ವರ್ಕ್ ಪರೀಕ್ಷೆ ನಡೆದಿದೆ. ಈಮಹತ್ವದ ವಿಚಾರವನ್ನು ಸ್ವತಃ ನಮ್ಮಮೆಟ್ರೋ ಸೋಷಿಯಲ್ ಮೀಡಿಯಾ ದಲ್ಲಿಹಂಚಿಕೊಂಡಿದೆ. ದೇಶದಲ್ಲೇ ಮೊದಲ ಬಾರಿಗೆ ಟೆಲಿಕಾಂ ರೆಗ್ಯುಲೇಟರಿ ಆಥಾರಿಟಿ ಆಫ್ ಇಂಡಿಯಾ ತನ್ನ ಪೈಲಟ್ ಪ್ರಾಜೆಕ್ಟ್ ನ ಅಡಿಯಲ್ಲಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ 5 ಜೀ ನೆಟ್ವರ್ಕ್ ಪರೀಕ್ಷೆ ( India’s first 5G network test) ನಡೆದಿದೆ. 5 ಜೀ ನೆಟ್ವರ್ಕ್ ನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಇದು 4 ಜೀ ನೆಟ್ವರ್ಕ್ ಗಿಂತಲೂ ವೇಗವಾಗಿ ಕೆಲಸ ಮಾಡುತ್ತದೆ ಎಂದು ನಮ್ಮಮೆಟ್ರೋ ಅಭಿಪ್ರಾಯಿಸಿದೆ.
ಟೆಲಿಕಾಂ ಕ್ಷೇತ್ರದಲ್ಲಿ ದೈತ್ಯ ಶಕ್ತಿಯಾಗಿ ಬೆಳೆದು ನಿಂತಿರುವ ಜಿಯೋ ಕಂಪನಿ ಬೆಂಗಳೂರಿನ ಅತ್ಯಂತ ಪ್ರಮುಖವಾದ , ನಗರದ ಹೃದಯಭಾಗದಲ್ಲಿರೋ ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ 5 ಜೀ ನೆಟ್ವರ್ಕ್ ಪರೀಕ್ಷಾರ್ಥವಾಗಿ ಆರಂಭಿಸಲಾಗಿದೆ. ಎಂ.ಜಿ.ರೋಡ್ ವ್ಯಾಪ್ತಿಯ ಮೆಟ್ರೋ ನಿಲ್ದಾಣದಲ್ಲಿ 200 ಮೀಟರ್ ವ್ಯಾಪ್ತಿಯಲ್ಲಿ 5 ಜೀ ನೆಟ್ವರ್ಕ್ ನ್ನು ಸ್ಥಾಪಿಸಿದೆ. ಪರೀಕ್ಷೆಯಲ್ಲಿ 1.45 ಜಿಬಿಪಿಎಸ್ ಡೌನ್ ಲೋಡ್ ಹಾಗೂ 65 ಎಂಬಿಪಿಎಸ್ ಅಪ್ಲೋಡ್ ವೇಗವನ್ನು ಸಾಧಿಸಿದ್ದು, ಇದು 4 ಜೀ ಗಿಂತಲೂ ವೇಗವಾಗಿ ಕೆಲಸ ಮಾಡಿದೆ ಎಂದು ನಮ್ಮಮೆಟ್ರೋ ಹೇಳಿಕೊಂಡಿದೆ.
ಈ ಬಗ್ಗೆ ವಿಸ್ಕೃತವಾಗಿ ಟ್ವೀಟ್ ಮಾಡಿರೋ ನಮ್ಮ ಮೆಟ್ರೋ, ಬಿಎಂಆರ್ ಸಿಎಲ್ 5 ಜೀ ನೆಟ್ವರ್ಕ್ ನ್ನು ಟೆಸ್ಟ್ ಮಾಡಿದ ದೇಶದ ಮೊದಲ ಮೆಟ್ರೋ ಎಂಬ ಖ್ಯಾತಿ ಪಡೆದುಕೊಂಡಿದೆ ಎಂದಿದೆ. ಇನ್ನು 5ಜೀ ನೆಟ್ವರ್ಕ್ ಪರೀಕ್ಷೆಗೆ ಜಿಯೋ ನೆಟ್ವರ್ಕ್ ಮಾಪನ ಅಳವಡಿಸಿದ್ದು, ಪರೀಕ್ಷಾರ್ಥವಾಗಿ ಈ ಅಳವಡಿಕೆ ನಡೆದಿದೆ. ಈ ಪರೀಕ್ಷೆಯೂ ಯಶಸ್ವಿಯಾಗಿದೆ ಎಂದು ಬಿ ಎಂ ಆರ್ ಸಿಎಲ್ ಎಂಡಿ ಅಂಜುಂ ಪರ್ವೇಜ್ ಮಾಹಿತಿ ನೀಡಿದ್ದಾರೆ. ಇನ್ನೂ ಈ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾದಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ 5 ಜೀ ನೆಟ್ವರ್ಕ್ ಲಭ್ಯವಾಗಲಿದೆ.
ಟ್ರಾಯ್ ಸಂಸ್ಥೆಯೂ ದೇಶದಾದ್ಯಂತ ಸರ್ಕಾರದ ಮೂಲಭೂತ ಸೌಕರ್ಯವಿರುವ ಕೆಲವು ವಿಮಾನ ನಿಲ್ದಾಣ, ಬಂದರು,ರೇಲ್ವೈ ನಿಲ್ದಾಣ ಹಾಗೂ ಮೆಟ್ರೋ ಮೊದಲಾದ ಕಡೆಗಳಲ್ಲಿ 5 ನೆಟ್ವರ್ಕ್ ಕಾರ್ಯನಿರ್ವಹಿಸುವಿಕೆ ಬಗ್ಗೆ ಪೈಲಟ್ ಯೋಜನೆ ಕೈಗೆತ್ತಿಕೊಂಡಿದೆ. ಈ ಪೈಕಿ ನಮ್ಮ ಮೆಟ್ರೋ ಎಂಜಿ ರಸ್ತೆಯಲ್ಲಿ ಪರೀಕ್ಷೆ ನಡೆಸಿದೆ.
ಇದನ್ನೂ ಓದಿ : big news : ದೇಶದ ಜನತೆಗೆ ಬಿಗ್ ಶಾಕ್ : ಶೀಘ್ರದಲ್ಲೇ ಏರಲಿದೆ ವಿದ್ಯುತ್ ದರ
ಇದನ್ನೂ ಓದಿ : Indian Passport : ಭಾರತೀಯ ಪಾಸ್ಪೋರ್ಟ್ ಎಷ್ಟು ಪ್ರಬಲವಾಗಿದೆ ಗೊತ್ತಾ! 60 ದೇಶಗಳಿಗೆ ಭಾರತೀಯರು ವೀಸಾ ಮುಕ್ತ ಪ್ರವೇಶವನ್ನು ಪಡೆಯಬಹುದು
India’s first 5G test Namma metro new Milestone