ಬೆಂಗಳೂರು : ರಾಜ್ಯದ ಕೊರೋನಾ ಕೇಸ್ ಗಳು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ ಮಹತ್ವದ ಸಭೆ ( emergency meeting ) ನಡೆಸಲಿದ್ದಾರೆ. ಸಿಎಂ ನಡೆಸುವ ಸಭೆ ಹಾಗೂ ಕೈಗೊಳ್ಳುವ ನಿರ್ಣಯದತ್ತ ರಾಜ್ಯದ ಚಿತ್ತ ನೆಟ್ಟಿದೆ. ಈ ಮಧ್ಯೆ ರಾಜ್ಯ ರಾಜಧಾನಿಗೆ ವೀಕೆಂಡ್ ಕರ್ಪ್ಯೂ ಹಾಗೂ ನೈಟ್ ಕರ್ಪ್ಯೂನಿಂದ ಮುಕ್ತಿ ಸಿಗಬಹುದು ಎಂಬ ನೀರಿಕ್ಷೆಯಲ್ಲಿ ಜನರಿದ್ದರೇ, ನಿರ್ಬಂಧ ಸಡಿಲಿಸಿ ಬೆಂಗಳೂರು ನೈಟ್ ಲೈಫ್ ಗೆ ಅವಕಾಶ ಕಲ್ಪಿಸಬೇಕೆಂದು ವ್ಯಾಪಾರ, ಉದ್ದಿಮೆದಾರರು ಒತ್ತಾಯಿಸುತ್ತಿದ್ದಾರೆ. ಆದರೆ ಬೆಂಗಳೂರಲ್ಲಿ ಹೆಚ್ಚುತ್ತಿರುವ ಕೊರೊನಾ ಪಾಸಿಟಿವಿಟಿ ದರವನ್ನು ( Corona positivity rate ) ನೋಡಿದ್ರೆ ರಿಲ್ಯಾಕ್ಸ್ ಸಿಗೋದು ಡೌಟ್ ಎನ್ನಲಾಗುತ್ತಿದೆ.
ಆದರೆ ಸಿಲಿಕಾನ್ ಸಿಟಿಯ ಕಳೆದ ಒಂದು ವಾರದ ಕೊರೋನಾ ಪಾಸಿಟಿವಿಟಿ ದರವನ್ನು ಗಮನಿಸಿದ್ರೇ ಇವೇರಡು ಕೂಡ ಕಷ್ಟ ಸಾಧ್ಯ ಎನ್ನಲಾಗುತ್ತಿದೆ. ಕಠಿಣ ನಿಯಮಗಳಿಗೆ ಸೂಚನೆ ನೀಡಿದ್ದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನಾ ಸೋಂಕು ಹೆಚ್ಚಳವಾದರೆ ಕರ್ಫ್ಯೂ ತೆರವು ಬೇಡ ಎಂದಿತ್ತು. ಕಳೆದ ಏಳು ದಿನಗಳ ಪಾಸಿಟಿವಿಟಿ ಲೆಕ್ಕ ಗಮನಿಸಿದ್ರೇ,
ಬಿಬಿಎಂಪಿಯ ಎಂಟು ವಲಯಗಳಲ್ಲೂ ಹದ್ದು ಮೀರಿ ಪಾಸಿಟಿವಿಟಿ ದರ ದಾಖಲಾಗಿರೋದು ಕಂಡುಬರುತ್ತಿದೆ. ಕಳೆದ ಒಂದು ವಾರದಲ್ಲಿ
ಆರ್ ಆರ್ ನಗರ – 31.60%
ಯಲಹಂಕ – 27.80%
ದಕ್ಷಿಣ ವಲಯ – 25.80%
ಪೂರ್ವ ವಲಯ – 25.76%
ದಾಸರಹಳ್ಳಿ – 22.86%
ಮಹಾದೇವಪುರ – 21.21%
ಬೊಮ್ಮನಹಳ್ಳಿ – 21.14%
ಪಶ್ಚಿಮ ವಲಯ – 16.83%. ಪಾಸಿಟಿವಿಟಿ ದರ ದಾಖಲಾಗಿದ್ದು,
ಒಟ್ಟಾರೆ ಬೆಂಗಳೂರಿನಲ್ಲಿ 25.76% ನಷ್ಟು ಪಾಸಿಟಿವಿಟಿ ದರವಿದೆ.
ಹೀಗಾಗಿ ಇಂದಿನ ಸಭೆಯಲ್ಲಿ ಈ ವಿಚಾರದ ಮೇಲೆ ಚರ್ಚೆಯಾಗುವ ಸಾಧ್ಯತೆ ಇದ್ದು ವೀಕೆಂಡ್ ಕರ್ಫ್ಯೂ ಹೊರತಾಗಿ ಉಳಿದಂತೆ ಮತ್ತಷ್ಟು ಕಠಿಣ ಕ್ರಮ ಜಾರಿಮಾಡುವ ಸಾಧ್ಯತೆ ಇದೆ. ಅಲ್ಲದೇಜನವರಿ 31ರ ವರೆಗೆ ಕೊರೋನಾ ನೈಟ್ ಕರ್ಫ್ಯೂ ಕಟ್ಟು ನಿಟ್ಟಾಗಿ ಪಾಲನೆ ಆದೇಶಿಸಲಾಗುತ್ತದೆ ಎನ್ನಲಾಗಿದೆ. ಹೋಟೆಲ್, ಬಾರ್, ಪಬ್ ಸೇರಿದಂತೆ ಇನ್ನಿತರ ಆಹಾರೋದ್ಯಮ ಕ್ಷೇತ್ರಗಳಿಗೆ 50-50 ರೂಲ್ಸ್ ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಬೆಂಗಳೂರಿಗೆ ರಿಲ್ಯಾಕ್ಸ್ ಸಿಗೋದು ಬಹುತೇಕ ಅನುಮಾನ ಎಂದೇ ಹೇಳಲಾಗುತ್ತಿದೆ.
ಒಂದೊಮ್ಮೆ ಬೆಂಗಳೂರಿನಲ್ಲಿ ನಿಯಮಗಳನ್ನು ಸಡಿಲಿಸಿದ್ರೇ ಮತ್ತೆ ನೈಟ್ ಲೈಫ್, ಶಾಪಿಂಗ್ ಪ್ರೋಗ್ರಾಂಗಳು ಆರಂಭವಾಗುವ ಸಾಧ್ಯತೆ ಇದೆ. ಇದರಿಂದ ಮತ್ತೆ ಸಾರ್ವಜನಿಕ ಸ್ಥಳದಲ್ಲಿ ಜನಸಂದಣಿ ಉಂಟಾಗಲಿದ್ದು ಕೊರೋನಾ ಕೇಸ್ ಗಳು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಸಿಎಂ ಸಭೆ ( emergency meeting ) ಮತ್ತಷ್ಟು ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಕೊರೋನಾ ಮೂರನೇ ಅಲೆಗೆ ನಲುಗಿದ ಖಾಕಿ ಪಡೆ : ಸಿಲಿಕಾನ್ ಸಿಟಿಯಲ್ಲಿ 1234 ಪೊಲೀಸರಿಗೆ ಸೋಂಕು
ಇದನ್ನೂ ಓದಿ : ದೇಶದಲ್ಲಿ ಮತ್ತೆ ಮಹಾಮಾರಿ ಸ್ಫೋಟ: ಒಂದೇ ದಿನದಲ್ಲಿ 3.47 ಲಕ್ಷ ಹೊಸ ಪ್ರಕರಣ ವರದಿ
( Corona positivity rate increase Bangalore, today cm Basavaraj Bommai call emergency meeting)