ಬೆಂಗಳೂರು : ಸಿಲಿಕಾನ್ ಬೆಂಗಳೂರಿನಲ್ಲಿ ಕೆಲವು ಕಡೆಗಳಲ್ಲಿ ಬಾರೀ ಸದ್ದು ಕೇಳಿಬಂದಿದೆ. ಮಧ್ಯಾಹ್ನ 12.30ರ ಹೊತ್ತಲ್ಲಿ ಕೇಳಿಬಂದ ಶಬ್ಧಕ್ಕೆ ಸಿಲಿಕಾನ್ ಸಿಟಿ ಮಂದಿ ಬೆಚ್ಚಿಬಿದ್ದಿದ್ದಾರೆ.

ಬೆಂಗಳೂರು ನಗರದ ಜಯನಗರ, ಕುಮಾರ ಸ್ವಾಮಿ ಲೇಔಟ್, ಬಿಡದಿ, ಬನಶಂಕರಿ, ಬ್ಯಾಟರಾಯನಪುರ, ಆರ್ ಆರ್ ನಗರ, ನಾಗರಭಾವಿ, ಚಂದ್ರಾ ಲೇಔಟ್, ಮಾಗಡಿ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವು ಕಡೆಗಳಲ್ಲಿ ನಿಗೂಢ ಸದ್ದು ಕೇಳಿಬಂದಿದೆ.

ಬಂಡೆ ಸ್ಪೋಟದ ವೇಳೆಯಲ್ಲಿ ಕೇಳಿ ಬರುವ ಸದ್ದಿನಿಂತೆಯೇ ಶಬ್ದ ಕೇಳಿಬಂದಿದೆ. ಶಬ್ದದ ತೀವ್ರತೆಗೆ ಮನೆಯಲ್ಲಿನ ಕಿಟಕಿ ಬಾಗಿಲುಗಳು ಅಲುಗಾಡಿದೆ. ಬಹುತೇಕರಿಗೆ ಈ ಶಬ್ದದ ಅನುಭವವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಯೂ ತಮ್ಮ ಅನುಭವ ಹಂಚಿಕೊಳ್ಳುತ್ತಿ ದ್ದಾರೆ.

ಈ ಹಿಂದೆಯೂ ಕೂಡ ಬೆಂಗಳೂರಲ್ಲಿ ಇದೇ ರೀತಿಯ ಸದ್ದು ಕೇಳಿಬಂದಿದೆ. ಆದರೆ ನಿಗೂಢ ಸದ್ದಿನ ನಿಗೂಢತೆ ಮಾತ್ರ ಇನ್ನೂ ತಿಳಿದಿಲ್ಲ.