ಮಂಗಳವಾರ, ಏಪ್ರಿಲ್ 29, 2025
Homekarnatakaನಾರಾಯಣ ನೇತ್ರಾಲಯ ಭುಜಂಗ ಶೆಟ್ಟಿ ಇನ್ನಿಲ್ಲ

ನಾರಾಯಣ ನೇತ್ರಾಲಯ ಭುಜಂಗ ಶೆಟ್ಟಿ ಇನ್ನಿಲ್ಲ

- Advertisement -

ಬೆಂಗಳೂರು : ನಾರಾಯಣ ನೇತ್ರಾಲಯದ ಪ್ರಖ್ಯಾತ ನೇತ್ರ ತಜ್ಞ ಡಾ. ಭುಜಂಗ ಶೆಟ್ಟಿ (Dr K Bhujang Shetty passes away) ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಭುಜಂಗ ಶೆಟ್ಟಿ ಅವರಿಗೆ 69 ವರ್ಷ ವಯಸ್ಸಾಗಿತ್ತು, ಇಂದು ಆಸ್ಪತ್ರೆಗೆ ಬಂದು ರೋಗಿಗಳಿಗೆ ಚಿಕಿತ್ಸೆ ನೀಡಿ ಮನೆಗೆ ತೆರಳಿದ್ದರು. ಸಂಜೆ 6 ಗಂಟೆ ಸುಮಾರಿಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಕರೆತರಲಾಗಿದೆ. ಆದರೆ ಆಸ್ಪತ್ರೆಗೆ ಕರೆತಂದರೂ ಕೂಡ ಡಾ.ಭುಜಂಗ ಶೆಟ್ಟಿ ಅವರು ಬದುಕುಳಿಯಲಿಲ್ಲ. ಮೃತ ದೇಹವನ್ನು ಸದ್ಯ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಆಸ್ಪತ್ರೆಯಿಂದ ಮನೆಗೆ ತೆರಳಿದ ನಂತರದಲ್ಲಿ ಸಂಜೆಯ ವೇಳೆ ಮನೆಯ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆಯಲ್ಲಿ ಎದೆನೋವು ಕಾಣಿಸಿಕೊಂಡಿತ್ತು. ನಂತರ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ನಾರಾಯಣ ನೇತ್ರಾಲಯದ ಮುಖ್ಯಸ್ಥರಾಗಿರುವ ಡಾ.ಭುಜಂಗ ಶೆಟ್ಟಿ ಅವರು ಡಾ.ರಾಜ್‌ ಕುಮಾರ್‌ ನೇತ್ರದಾನ ಸಂಸ್ಥೆ ಸ್ಥಾಪಿಸಿ ಬಹುದೊಡ್ಡ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ 1978ರಲ್ಲಿ ಎಂಬಿಬಿಎಸ್ ಶಿಕ್ಷಣ ಪೂರೈಸಿದರು. 1982 ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನ ಮಿಂಟೋ ಆಪ್ತಾಲ್ಮಿಕ್ ಆಸ್ಪತ್ರೆಯಲ್ಲಿ ನೇತ್ರಶಾಸ್ತ್ರದ ರೆಸಿಡೆನ್ಸಿ ಮಾಡಿದ್ದರು. ಎಂಬತ್ತರ ದಶಕದಲ್ಲಿ ಸಣ್ಣ ಕ್ಲಿನಿಕ್‌ ಆರಂಭಿಸುವ ಮೂಲಕ ವೈದ್ಯ ವೃತ್ತಿಯನ್ನು ಆರಂಭಿಸಿದ್ದರು. ನಂತರ ಹಂತ ಹಂತವಾಗಿ ಅಭಿವೃದ್ದಿ ಯನ್ನು ಹೊಂದಿದ ಬಳಿಕ ನಾರಾಯಣ ನೇತ್ರಾಲಯವನ್ನು ಆರಂಭಿಸಿದ್ದರು. ಇಂದು ನಾರಾಯಣ ನೇತ್ರಾಲಯ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾಗಿದೆ. ಅಲ್ಲದೇ ಭುಜಂಗ ಶೆಟ್ಟಿ ಅವರು ನಿಪುಣ ಕಣ್ಣಿನ ಪೊರೆ ಮತ್ತು ಫಾಕೋಎಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಇದನ್ನೂ ಓದಿ : CET Exam 2023 : ಸಿಇಟಿ ಪರೀಕ್ಷೆ ಹಿನ್ನೆಲೆ ಪರೀಕ್ಷಾ ಪ್ರಾಧಿಕಾರದಿಂದ ಮಹತ್ವದ ಘೋಷಣೆ

ಇದನ್ನೂ ಓದಿ : Big Breaking : 2000 ರೂಪಾಯಿ ನೋಟ್‌ ಹಿಂಪಡೆದ ಆರ್‌ಬಿಐ

ಇದನ್ನೂ ಓದಿ : ಬಾಲಕಿಯ ಪ್ರೀತಿಗಾಗಿ 14 ವರ್ಷದ ಸಹಪಾಠಿಯನ್ನೇ ಕೊಂದ ಸ್ನೇಹಿತರು

ಇದನ್ನೂ ಓದಿ : ಕುಡಿದ ಮತ್ತಲ್ಲಿ ಅಡ್ಡಾಡಿದ್ದಿ ಕಾರು ಚಲಾಯಿಸಿ ಅಪಘಾತ : ಮಹಿಳೆಯಿಂದ ಚಾಲಕನಿಗೆ ಚಪ್ಪಲಿ ಸೇವೆ

Narayana Nethralaya head famous ophthalmologist Dr K Bhujang Shetty passes away

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular