ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಭೀತಿ ಮತ್ತೊಮ್ಮೆ ಹೆಚ್ಚಿದೆ. ಹೀಗಾಗಿ ಸರ್ಕಾರ ವೀಕೆಂಡ್ ಹಾಗೂ ನೈಟ್ ಕರ್ಪ್ಯೂ ಮೂಲಕ ಪರಿಸ್ಥಿತಿ ನಿಯಂತ್ರಿಸುವ ಸರ್ಕಸ್ ಆರಂಭಿಸಿದೆ. ಇದರಿಂದ ಸಾರ್ವಜನಿಕರ ಜೀವನ, ಉದ್ದಿಮೆಗಳು ನಷ್ಟದ ಹಾದಿ ಹಿಡಿದಿದೆ. ಮಾತ್ರವಲ್ಲ ಇದರೊಂದಿಗೆ ಸರ್ಕಾರದ ಸಂಸ್ಥೆಗಳು ಸಾಲದ ಸುಳಿಗೆ ಸಿಲುಕುತ್ತಿವೆ. ಇದರಲ್ಲಿ ಮೊದಲ ಸ್ಥಾನದಲ್ಲಿದೆ ಬಿಎಂಟಿಸಿ. ಕೊರೋನಾದಿಂದ ಬಿಎಂಟಿಸಿ ಮತ್ತೆ ಕೋಟಿ ಕೋಟಿ ನಷ್ಟದ (No Income BMTC) ಸುಳಿಗೆ ಸಿಲುಕಿದ್ದು, ಸಂಬಳ ಕೊಡೋದು ಕಷ್ಟ ಎಂಬ ಸ್ಥಿತಿ ತಲುಪಿದೆ.
ರಾಜ್ಯದಲ್ಲಿ ಕೆಲ ತಿಂಗಳಿನಿಂದ ಇಳಿಮುಖವಾಗಿದ್ದ ಕೊರೋನಾ ಪ್ರಕರಣಗಳು ನಿಧಾನಕ್ಕೆ ಏರಿಕೆಯಾಗುತ್ತಿವೆ. ಮಾತ್ರವಲ್ಲ ಓಮೈಕ್ರಾನ್ ಕೂಡ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ ನೈಟ್ ಕರ್ಪ್ಯೂ ವೀಕೆಂಡ್ ಕರ್ಪ್ಯೂ ಮೂಲಕ ಜನರ ಓಡಾಟ ವನ್ನು ನಿರ್ಭಂದಿಸಲು ಸರ್ಕಾರ ಪ್ಲ್ಯಾನ್ ಮಾಡಿದೆ. ಹೀಗಾಗಿ ಜನರಿಲ್ಲದೇ ಬಿಕೋ ಎನ್ನುತ್ತಿರುವ ರಸ್ತೆಗಳಿಂದ ಬಿಎಂಟಿಸಿ ಕೂಡಾ ನಿಲ್ದಾಣ ಬಿಟ್ಟು ಹೊರಕ್ಕೆ ಬರುತ್ತಿಲ್ಲ.
ಹೀಗಾಗಿ ಪ್ರತಿನಿತ್ಯ ಬಿಎಂಟಿಸಿಗೆ ಕೋಟ್ಯಾಂತರ ರೂಪಾಗಿ ನಷ್ಟವಾಗುತ್ತಿದೆ. ಈಗಾಗಲೇ ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ಸಂಬಳವನ್ನು ಕೇವಲ 50ರಷ್ಟು ಮಾತ್ರ ನೀಡಲಾಗಿದೆ. ಬದುಕೋದೇ ಕಷ್ಟವಾಗಿದೆ ಎಂದು ಬಿಎಂಟಿಸಿ ನೌಕರರು ಕಣ್ಣೀರಿಡುತ್ತಿದ್ದಾರೆ. ಇದರ ಮಧ್ಯೆ ಕಳೆದ ಎರಡು ವಾರದಿಂದ ಬಿಎಂಟಿಸಿ ಬಸ್ ಗಳು ನಿಂತಲ್ಲೇ ನಿಂತಿವೆ. ಕಳೆದ ಒಂದು ತಿಂಗಳ ಹಿಂದಷ್ಟೇ ಚೇತರಿಸಿಕೊಂಡಿದ್ದ ಬಿಎಂಟಿಸಿ ಇತ್ತೀಚಿಗೆ ದಿನವೊಂದಕ್ಕೆ 3 ಕೋಟಿ 40 ಲಕ್ಷದಷ್ಟು ಹಣ ಸಂಪಾದಿಸುವ ಮೂಲಕ ಪ್ರತಿ ತಿಂಗಳು 100 ಸನಿಹದಲ್ಲಿ ಆದಾಯ ಪಡೆದು ಹಳೆಯ ಸಾಲ ತೀರಿಸಿಕೊಳ್ಳುವ ಭರವಸೆ ಮೂಡಿಸಿತ್ತು.ಆದರೆ ಈಗ ಮತ್ತೆ ಬಸ್ ಗಳು ಸಂಚಾರ ನಿಲ್ಲಿಸಿದ್ದು, ನಷ್ಟದ ಭೀತಿ ಎದುರಾಗಿದೆ.ವೀಕೆಂಡ್ ಕರ್ಪ್ಯೂ ವೇಳೆ ಬಿಎಂಟಿಸಿಗೆ ಅಂದಾಜು 2 ಕೋಟಿ ನಷ್ಟವಾಗಿದೆ ಎನ್ನಲಾಗಿದ್ದು, ಕರ್ಪ್ಯೂ ವೇಳೆ ಕೇವಲ 40 ಲಕ್ಷ ದಷ್ಟು ಆದಾಯ ಗಳಿಸಿದೆ
ಬಾಕಿ ದಿನಗಳಲ್ಲಿ ೫ ಸಾವಿರ ಬಸ್ ಗಳು ರಸ್ತೆಗಿಳಿದ್ರೇ ಲಾಕ್ ಡೌನ್ ವೇಳೆ ಕೇವಲ 700 ಬಸ್ ಗಳು ಮಾತ್ರ ಸಂಚಾರ ಮಾಡಿವೆ. ಇದರಿಂದ ಮತ್ತೆ ಬಿಎಂಟಿಸಿ ಆದಾಯ ಕೊರತೆಯ ಆತಂಕದಲ್ಲಿದೆ. ಈಗಾಗಲೇ ಕೊರೋನಾದ ಎಫೆಕ್ಟ್ ನಿಂದ ನೌಕರರಿಗೆ ಪೂರ್ತಿ ಸಂಬಳ ಕೊಡಲು ಕಷ್ಟವಾಗೋ ಸ್ಥಿತಿ ತಲುಪಿರುವ ಬಿಎಂಟಿಸಿ ಇನ್ನೊಂದಿಷ್ಟು ದಿನ ವೀಕೆಂಡ್, ನೈಟ್ ಕರ್ಪ್ಯೂ ಮುಂದುವರೆದರೇ ಅಕ್ಷರಷಃ ನಷ್ಟದಲ್ಲಿ ಮುಳುಗಿ ಹೋಗೋದ್ರಲ್ಲಿ ಅನುಮಾನವಿಲ್ಲ.
ಇದನ್ನೂ ಓದಿ : ವರ್ಕ್ ಫ್ರಮ್ ಹೋಮ್‌ನಲ್ಲಿ ಕಣ್ಣಿನ ಕಾಳಜಿ ಮಾಡಲು ಹೀಗೆ ಮಾಡಿ
ಇದನ್ನೂ ಓದಿ : ನಾರಾಯಣ ಗುರು ಸ್ತಬ್ದಚಿತ್ರ ವಿವಾದ : ತಿರಸ್ಕಾರವಾಗಲೆಂದೇ ನಿಯಮ ಗಾಳಿಗೆ ತೂರಿದ ಕೇರಳ ಸರಕಾರ
ಇದನ್ನೂ ಓದಿ : Dolo 650 : ಹುಬ್ಬೇರಿಸುತ್ತೆ ಕಳೆದ 2 ವರ್ಷಗಳಲ್ಲಿ ದೇಶದಲ್ಲಿ ಮಾರಾಟವಾದ ಡೋಲೋ 650 ಮಾತ್ರೆಗಳ ಸಂಖ್ಯೆ
( No income, no salary, this is the tears of the BMTC )