
ಬೆಂಗಳೂರು : ರಾಂಪ್ ಮೇಲೆ ಲಲನೆಯರ ಕ್ಯಾಟ್ ವಾಕ್, ಬಣ್ಣ ಬಣ್ಣ ತೊಡುಗೆಯಲ್ಲಿ ಮಿಂಚಿದ ಚೆಂದುಳ್ಳಿ ಚೆಲುವೆಯರು. ಯುವತಿಯ ರನ್ನೇ ನಾಚಿಸುವಂತೆ ಹೆಜ್ಜೆ ಹಾಕಿದ ಮಾಡೆಲ್ ಗಳು. ಹೌದು, ಇದೆಲ್ಲಾ ಸಿಲಿಕಾನ್ ಸಿಟಿ ಬೆಂಗಳೂರಿನ ತಾಜ್ ವೆಸ್ಟೆಂಟ್ ಹೋಟೆಲ್ ನಲ್ಲಿ ನಡೆದ ಫ್ಯಾಷನ್ ಶೋ ಝಲಕ್.

ಆರ್ಚಿಡ್ ಇವೆಂಟ್ಸ್ ಇಂಟರ್ ನ್ಯಾಷನ್ ವತಿಯಿಂದ ಯುನಿವಸಲ್ ಪೆಜೆಂಟ್ರಿ -2020 ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಯುವಕ ಯುವತಿಯರು ಕಲರ್ಫುಲ್ ಆಗಿ ಮಿಂಚಿದರು. ಸಂಜೆಯ ಸಮಯದಲ್ಲಿ ನಡೆದ ಕಾರ್ಯಕ್ರಮ ಎಲ್ಲರನ್ನೂ ತನ್ನತ್ತ ಸೆಳೆಯಿತು.

ಹಲವಾರು ಸುತ್ತುಗಳಲ್ಲಿ ನಡೆದ ಫ್ಯಾಷನ್ ಶೋನಲ್ಲಿ ರಾಂಪ್ ವಾಕ್ ಮೂಲಕ ತಮ್ಮ ವ್ಯಕ್ತಿತ್ವವನ್ನು ಬಿಂಬಿಸಿಕೊಂಡು ಹಲವಾರು ಬಿರುದು, ಪ್ರಶಸ್ತಿ, ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಮಿಸ್ಟರ್ ಅಂಡ್ ಮಿಸ್ ವಲ್ರ್ಡ್ ನೋಬಲ್ ಕಿಂಗ್ ಆಗಿ ಭರತ್, ಸುಶ್ಮಿತಾ, ಮಿಸ್ಟರ್ ಅಂಡ್ ಮಿಸ್ ಟಾಪ್ ಮಾಡೆಲ್ ಯೂನಿವರ್ಸ್ ಆಗಿ ಶಿ ಮತ್ತು ಶ್ವೇತಾ, ಮಿಸ್ಟರ್ ಅಂಡ್ ಮಿಸ್ ರನ್ ವೇ ಮಾಡೆಲ್ ಯೂನಿವರ್ಸ್ ಆಗಿ ಸತ್ಯ ಮತ್ತು ಸೌಂದರ್ಯ ಹೊರ ಹೊಮ್ಮಿದ್ದಾರೆ.

ಮಿಸ್ಟರ್ ಅಂಡ್ ಮಿಸ್ ಟಾಪ್ ಮಾಡೆಲ್ ಇಂಟರ್ ನ್ಯಾಷನ್ ಆಗಿ ಕೇಶವ್ ತೇಜಸ್ವಿನಿ, ಮಿಸ್ಟರ್ ಅಂಡ್ ಮಿಸ್ ಟೂರಿಸಂ ಇಂಟರ್ ನ್ಯಾಷನಲ್ ಆಗಿ ಅಕ್ಷಯ್ ನವಂಮ್ ಸಿಂಗ್ ಪಡೆದುಕೊಂಡಿದ್ದಾರೆ.

ಐಪಿಎಸ್ ಪೋಲೀಸ್ ಅಧಿಕಾರಿ ಜೆ.ಅರ್ಜುನ್ ಚಕ್ರವರ್ತಿ ಮುಖ್ಯ ಅತಿಥಿಯಾಗಿದ್ದರು. ತೀರ್ಪುಗಾರರಾಗಿ ನಟಿ ಶಿಲ್ಪಾ ದಾಸ್, ಕೊರಿಯೋ ಗ್ರಾಫರ್ ಸರಿತಾ ಕೊಟಾರಿ, ನಟಿ ರಮ್ಯಾ ಬಾರ್ನ, ಫಿಟ್ನೆಸ್ ಎಕ್ಸ್ಫರ್ಟ್ ಜ್ಯೋಸ್ನಾ ವೆಂಕಟೇಶ್ ಭಾಗವಹಿಸಿದ್ದರು.

ಕಾರ್ಯಕ್ರಮದ ಆಯೋಜಕರಾದ ಮಧುಸೂಧನ್ ಉತ್ತಮ ಪ್ರತಿಭೆಗಳನ್ನು ಫ್ಯಾಷನ್ ಲೋಕಕ್ಕೆ ಪರಿಚಯಿಸುವುದಲ್ಲದೇ, ಹೊಸ ಮುಖ ಗಳಿಗೂ ಫ್ಯಾಷನ್ ಶೋ ಮೂಲಕ ಅವರಿಗೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

ಕರ್ನಾಟಕ ಸೇರಿದಂತೆ ಭಾರತದ ಇತರ ರಾಜ್ಯದ ಯುವಕ ಯುವತಿಯರು ಸ್ಪರ್ಧಿಸಿದ್ದಾರೆ ಎಂದಿದ್ದಾರೆ.




