Bangalore Powe Cut : ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಎರಡು ದಿನಗಳ ಕಾಲ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ( BESCOM) ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ವಿದ್ಯುತ್ ನಿರ್ವಹಣಾ ಕಾಮಗಾರಿಯ ಜೊತೆಗೆ ತಂತ್ರಜ್ಞಾನವನ್ನು ಮೇಲ್ಗರ್ಜೆ ಏರಿಸುವ ಕಾರ್ಯ ನಡೆಯುತ್ತಿದೆ. ಹೀಗಾಗಿ ಅಗಸ್ಟ್ 19 ಮತ್ತು 20 ರಂದು ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಅಗಸ್ಟ್ 19 ( ಸೋಮವಾರ) : ಈ ಏರಿಯಾದಲ್ಲಿ ಪವರ್ ಕಟ್
ಬೆಂಗಳೂರಿನಲ್ಲಿ ಅಗಸ್ಟ್ ೧೯ರಂದು ಬೆಳಗ್ಗೆ 10 ಗಂಟಯಿಂದ ಸಂಜೆ 6 ಗಂಟೆಯ ವರೆಗೆ ಯಲಹಂಕ ಸಮೀಪದ ಕೆಎಂಎಫ್ ಮದರ್ ಡೈರಿ, ಎನ್ಇಎಸ್ ರಸ್ತೆ, ಮೇಜರ್ ಉನ್ನಿ ಕೃಷ್ಣನ್ ರಸ್ತೆ, ಬಿ. ಸೆಕ್ಟರ್. ನ್ಯಾಯಂಗ ಬಡಲಾವಣೆ, ಮಾತೃಶ್ರೀ ಲೇಔಟ್ ಕನಕ ನಗರ, ಸೋಮೇಶ್ವರ ನಗರ, ಯಲಹಂಕ ಓಲ್ಟ್ ಟೌನ್, ಬಿಡಬ್ಲ್ಯೂ ಎಸ್‌ಎಸ್‌ಬಿ ಎಸ್‌ಟಿಪಿ, ಗಾಂಧಿನಗರ, ಜಕ್ಕಸಂದ್ರ, ಎಚ್‌ಎಸ್‌ಆರ್ 5 ವಲಯ, ಶಿಕ್ಷಕರ ಕಾಲೋನಿ, ಕೋರಮಂಗಲ ಎಕ್ಸ್‌ಟೆನ್ಶನ್, ವೆಂಕಟಾಪುರದ ಕೆಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಇದನ್ನೂ ಓದಿ : ಕರ್ನಾಟಕದಲ್ಲಿ20 ಲಕ್ಷ ಬಿಪಿಎಲ್ ಕಾರ್ಡ್ ರದ್ದು ! ಜಾರಿಯಾಯ್ತು ಹೊಸ ರೂಲ್ಸ್

ಅಗಸ್ಟ್ 20 ( ಮಂಗಳವಾರ) ಈ ಏರಿಯಾದಲ್ಲಿ ವಿದ್ಯುತ್ ಇರಲ್ಲ
ಸೋಮವಾರ ಮಾತ್ರವಲ್ಲದೇ ಮಂಗಳವಾರ ಕೂಡ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಮಂಗಳವಾರ ಕಡಿತವಾಗಲಿರುವ ಪ್ರದೇಶಗಳನ್ನು ನೋಡೋದಾದ್ರೆ, ತಲಘಟ್ಟಪುರ, ಕೋಣನಕುಂಟೆ, ಅವಲಹಳ್ಳಿ, ದೊಡ್ಡಕಲ್ಲಸಂದ್ರ, ಶ್ರೀನಿಧಿ ಲೇಔಟ್, ಸಲಾರ್‌ಪುರಿ ಟವರ್, ಬಿಗ್ ಬಜಾರ್, ಕೆಎಂಎಫ್ ಗೋಡಾನ್, ಅಕ್ಸೆಂಚರ್, ನ್ಯೂ ಮೈಕೋ ಲೇಔಟ್, ನಂಜಪ್ಪ ಲೇಔಟ್, ಬೆಂಗಳೂರು ಡೈರಿ, ಫೋರಂ ಮಾಲ್ ವಿಲ್ಸನ್ ಗಾರ್ಡನ್, ಲಕ್ಕಸಂದ್ರ, ನಿಮ್ಹಾನ್ಸ್ ಅಡ್ಮಿನ್ ಬ್ಲಾಕ್, ಕೋರಮಂಗಲ 3,4,5,6,7,8 ಬ್ಲಾಕ್. ಎನ್ಐಎನ್‌ಪಿ, ಸೇಂಟ್ ಜಾನ್ಸನ್ ಆಸ್ಪತ್ರೆ, ಹಳೆ ಮಡಿವಾಳ, ಮಡಿವಾಳ, ಒರಾಕಲ್, ಆಡುಗೋಡಿ, ಕೃಷ್ಣನಗರ ಕೈಗಾರಿಕಾ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ 4000 ರೂ. ಯಾವಾಗ ಸಿಗುತ್ತೆ ? ಇಲ್ಲಿದೆ ಬಿಗ್ ಅಪ್ಟೇಟ್ಸ್
ಎರಡು ದಿನಗಳ ಕಾಲ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಕೆಪಿಟಿಸಿಎಲ್ ವಿದ್ಯುತ್ ಲೈನ್‌ಗಳ ಆಧುನೀಕರಣ, ಭೂಮಿಯ ಒಳಗೆ ಓವರ್ ಹೆಡ್ ಲೈನ್‌ಗಳ ಅಳವಡಿಕೆ ಕಾರ್ಯ ನಡೆಯಲಿದೆ. ವಿದ್ಯುತ್ ಕಾರ್ಯದ ಜೊತೆಗೆ ಜಲಮಂಡಳಿಯು ಕೂಡ ಕೆಲವೊಂದು ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿದೆ ಎಂದು ತಿಳಿದು ಬಂದಿದೆ.
Power cut in Bangalore for 2 days in These Area