ಬೆಂಗಳೂರು : Ashok Reaction : ಚಾಮರಾಜಪೇಟೆಯ ಈದ್ಗಾ ಮೈದಾನದ ಮಾಲೀಕತ್ವದ ವಿಚಾರದಲ್ಲಿ ಉಂಟಾಗಿರುವ ಗಲಾಟೆಯು ಹೈಕೋರ್ಟ್ ಮೆಟ್ಟಿಲೇರಿದ್ದು ಈ ಸಂಬಂಧ ಅರ್ಜಿ ಆಲಿಸಿದ ಹೈಕೋರ್ಟ್ ಗಣೇಶೋತ್ಸವವನ್ನು ಆಚರಿಸಲು ಅವಕಾಶವನ್ನು ನೀಡದೇ ಯತಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶವನ್ನು ನೀಡಿತ್ತು. ಈ ವಿಚಾರವಾಗಿ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರ ಮತ್ತು ಆವರಣದ ನವೀಕೃತ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಗಣೇಶೋತ್ಸವಕ್ಕೆ ಎದುರಾಗಿರುವ ಈ ವಿಘ್ನ ಶೀಘ್ರದಲ್ಲೇ ನಿವಾರಣೆ ಆಗಲಿದೆ ಎಂದು ಭರವಸೆಯನ್ನು ನೀಡಿದರು.
ವಿವಾದಿತ ಚಾಮರಾಜಪೇಟೆ ಮೈದಾನದ ಬಗ್ಗೆ ರಾಜ್ಯ ಹೈಕೋರ್ಟ್ ನೀಡಿರುವ ಆದೇಶ ನಮಗೆ ಸಂತೋಷವನ್ನು ತಂದಿದೆ. ನಮ್ಮ ಸರ್ವಜನಾಂಗದ ದೇಶವಾಗಿದೆ. ಅಲ್ಲದೇ ಅರ್ಜಿ ಮರುಪರಿಶೀಲನೆ ಮಾಡಬಹುದು ಎಂದು ಕೋರ್ಟ್ ಹೇಳಿದೆ. ಚಾಮರಾಜಪೇಟೆಯ ಸರ್ವೆ ನಂ 40 ಗುಟ್ಟಹಳ್ಳಿಯಲ್ಲಿ ನವೆಂಬರ್ 1 ರಂದು 75 ವರ್ಷದ ನಂತರ ಕನ್ನಡ ಬಾವುಟ ರಾರಾಜಿಸಲಿದೆ.ಕನ್ನಡದ ಅಸ್ಮಿತೆಯನ್ನು ಕಾಪಾಡಲು ನಮ್ಮ ಸರ್ಕಾರ ಎಂದಿಗೂ ಸಿದ್ಧ ಎಂದು ಹೇಳಿದ್ದಾರೆ.
ಚಾಮರಾಜಪೇಟೆ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರವನ್ನು ಪ್ರಕಟಿಸಲಿದೆ. ಸಿಎಂ ಬೊಮ್ಮಾಯಿ ಹಾಗೂ ಪ್ರಭುಲಿಂಗ ನಾವಡಿಗೆ ಜೊತೆಯಲ್ಲಿ ಈ ಸಂಬಂಧ ಚರ್ಚೆ ನಡೆಸುತ್ತೇವೆ. ಈ ಜಾಗ ಕಂದಾಯ ಇಲಾಖೆಗೆ ಸೇರಿದ್ದಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ ಎಂದು ಹೇಳಿದರು.
ಪ್ರಸ್ತುತ ನಮ್ಮ ಎದುರಿಗೆ ಗಣೇಶೋತ್ಸವ ಆಚರಣೆಯ ಮನವಿ ಬಂದಿದೆ. ನಾವು ಈ ಬಗ್ಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳುತ್ತೇವೆ. ಈ ವಿಘ್ನಗಳೆಲ್ಲ ಶೀಘ್ರದಲ್ಲಿಯೇ ನಿವಾರಣೆ ಯಾಗಲಿದೆ. ಹಿಂದೊಮ್ಮೆ ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಯಾರೂ ಒಪ್ಪಿರಲಿಲ್ಲ. ನಾವು ಬರೋದೇ ಇಲ್ಲ ಅಂತಾ ಪಟ್ಟು ಹಿಡಿದಿದ್ದರು. ಆದರೆ ಆಗ ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದ ನಾನು ಪಟ್ಟು ಹಿಡಿದು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇಲ್ಲಿ ಆಯೋಜನೆ ಮಾಡಿದ್ದೆ. ಕೆಂಪೇಗೌಡರ ಈ ನಾಡಿನಲ್ಲಿ ಕನ್ನಡದ ಅಸ್ತಿತ್ವ ಹಾಗೂ ಅಸ್ಮಿತೆ ಎಂದಿಗೂ ಜಾಗೃತವಾಗಿರುತ್ತೆ. ಆ ಕಾರ್ಯಕ್ರಮ ಎಷ್ಟು ಒಳ್ಳೆಯ ರೀತಿಯಲ್ಲಿ ಮೂಡಿ ಬಂತು ಅಂದರೆ ಅದೊಂದು ದಾಖಲೆಯೇ ಆಯ್ತು ಎಂದು ಹೇಳಿದರು .
ಇದನ್ನು ಓದಿ : 6 people of same family dead : ಒಂದೇ ಕುಟುಂಬದ 6 ಮಂದಿ ) ಅನುಮಾನಾಸ್ಪದ ಸಾವು
R Ashok Reaction on Idgha Maidan Court Judgement