ಬೆಂಗಳೂರು : ಪದ್ಮಶ್ರೀ ಪ್ರಶಸ್ತಿ ವಿಜೇತ ಸಾಲುಮರದ ತಿಮ್ಮಕ್ಕ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಅವರು ಅಪೋಲೋ ಆಸ್ಪತ್ರೆಯಲ್ಲಿ ಹಾಸಿಗೆಗಾಗಿ ಪರದಾಟ ನಡೆಸಿದ್ದಾರೆ.

ಚಿಕಿತ್ಸೆಗೆಂದು ನಗರದ ಅಪೋಲೋ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳೇ ತುಂಬಿದ್ದರಿಂದಾಗಿ ನಾನ್ ಕೋವಿಡ್ ರೋಗಿಗಳಿಗೆ ಹಾಸಿಗೆ ಸಮಸ್ಯೆ ಎದುರಾಗಿದೆ. ಸಾಲುಮರದ ತಿಮ್ಮಕ್ಕ ಸಹ ಹಾಸಿಗೆಗಾಗಿ ಎರಡು ಗಂಟೆಗಳ ಕಾಲ ಪರದಾಟ ನಡೆಸ ಬೇಕಾಯಿತು.

ಶೌಚಾಲಯದಲ್ಲಿ ಬಿದ್ದು ಬೆನ್ನುಮೂಳೆ ಮುರಿತವಾಗಿದ್ದ ತಿಮ್ಮಕ್ಕ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದೀಗ ಅದೇ ಜಾಗದಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಕೊನೆಗೆ ತಿಮ್ಮಕ್ಕ ಅವರಿಗೆ ಬೆಡ್ ಹೊಂದಿಸಲು ವೈದ್ಯರು ಸಹ ಪ್ರಯತ್ನಿ ನಡೆಸಿದ್ದರು. ನಂತರ ಅವರಿಗೆ ಹಾಸಿಗೆ ಹೊಂದಿಸಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.
