ಬೆಂಗಳೂರು : ನಿರರ್ಗಳ ಮಾತು, ಸ್ಪಷ್ಟ ನಿರೂಪಣೆಯ ಮೂಲಕ ಮನೆ ಮಾತಾಗಿರುವ ರಿಪಬ್ಲಿಕ್ ಕನ್ನಡ (Republic Kannada) ಸುದ್ದಿವಾಹಿನಿಯ ಖ್ಯಾತ ಯುವ ನಿರೂಪಕ ರಂಜಿತ್ ಶಿರಿಯಾರ (Ranjit Shiriyar) ದಿ ನ್ಯೂ ಇಂಡಿಯಾ ಟೈಮ್ಸ್ ನೀಡುವ ಅತ್ಯುನ್ನತ ಸೌತ್ ಇಂಡಿಯಾ ಬೆಸ್ಟ್ ಆಂಕರ್ ಪ್ರಶಸ್ತಿಯನ್ನು ( South India Best Anchor Award) ಪಡೆದುಕೊಂಡಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಿರಿಯಾರ ಅನ್ನೋ ಪುಟ್ಟ ಗ್ರಾಮದಲ್ಲಿ ಜನಿಸಿದ ರಂಜಿತ್ ಶಿರಿಯಾರ್‌ಗೆ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ. ಸದ್ಯ ಕನ್ನಡ ಸುದ್ದಿವಾಹಿನಿಗಳಲ್ಲಿ ಅತ್ಯಂತ ಬೇಡಿಕೆಯ ಯುವ ನಿರೂಪಕ ಅಂದೇ ಖ್ಯಾತಿ ಪಡೆದಿರುವ ರಂಜಿತ್ ಶಿರಿಯಾರ್ ಅವರ ಮಾಧ್ಯಮ ಜರ್ನಿ ಸುಲಭದ್ದಾಗಿರಲಿಲ್ಲ.

ಕುಂದಾಪುರ ತಾಲೂಕಿನ ಹೆಸ್ಕತ್ತೂರು ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದ್ದ ರಂಜಿತ್ ಶಿರಿಯಾರ ಬಾರಕೂರಿನ ರುಕ್ಮಿಣಿ ಶೆಡ್ತಿ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪೂರೈಸಿದ್ದರು. ಕಾಲೇಜು ದಿನಗಳಿಂದಲೇ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಿದ್ದ ರಂಜಿತ್ ಶಿರಿಯಾರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಉಡುಪಿ ಜಿಲ್ಲಾ ಸಂಚಾಲಕರಾಗಿ ಸಾಕಷ್ಟು ಜನಪರ, ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದರು. ಪದವಿ ಶಿಕ್ಷಣದ ಬಳಿಕ ಮಾರ್ಕೆಟಿಂಗ್ ವೃತ್ತಿಯನ್ನು ಆರಿಸಿಕೊಂಡಿದ್ದ ರಂಜಿತ್‌ಗೆ ಮಾಧ್ಯಮ ಲೋಕದಲ್ಲಿ ಕೆಲಸ ಮಾಡಬೇಕು ಅನ್ನೋ ಹಂಬಲವಿತ್ತು.
ಇದನ್ನೂ ಓದಿ : Ration Card e- KYC : ರೇಷನ್ ಕಾರ್ಡ್‌ದಾರರ ಗಮನಕ್ಕೆ : ಅಗಸ್ಟ್ 31ರೊಳಗೆ ಇಕೆವೈಸಿ ಮಾಡಿಸದಿದ್ರೆ ಸಿಗಲ್ಲ ರೇಷನ್

ಅದೇ ಹೊತ್ತಲೇ ಮಂಗಳೂರಲ್ಲಿ ಆರಂಭಗೊಂಡ ಟಿವಿ೭ ವಾಹಿನಿಯ ಮೂಲಕವಾಗಿ ಮಾಧ್ಯಮ ಜಗತ್ತಿಗೆ ರಂಜಿತ್ ಶಿರಿಯಾರ ಎಂಟ್ರಿ ಕೊಟ್ಟಿದ್ದರು. ಆದರೆ ಟಿವಿ 7 ಲಾಂಚ್ ಆಗುವ ಮೊದಲೇ ಬಾಗಿಲು ಮುಚ್ಚಿತ್ತು. ಆ ಹೊತ್ತಿನಲ್ಲಿ ಕಷ್ಟ, ಸಂಕಷ್ಟಗಳ ಸರಮಾಲೆಯನ್ನೇ ಅನುಭವಿಸಿದ ರಂಜಿತ್, ಮಾಧ್ಯಮ ಲೋಕದಲ್ಲಿ ಬದುಕು ಕಟ್ಟಿಕೊಳ್ಳುವ ತನ್ನ ಛಲವನ್ನು ಬಿಡಲೇ ಇಲ್ಲ. ಬೆಂಗಳೂರಿನ ಮಯೂರ ವಾಹಿನಿಯಲ್ಲಿ ನಿರೂಪಕರಾಗಿ ಕೆಲಸಕ್ಕೆ ಸೇರಿಕೊಂಡ್ರು.

ಬೆಂಗಳೂರಿಗೆ ಎಂಟ್ರಿ ಕೊಟ್ಟ ನಂತರದಲ್ಲಿ ರಂಜಿತ್ ಶಿರಿಯಾರ ಹಿಂದಿರುಗಿ ನೋಡಿದ್ದೇ ಇಲ್ಲ. ಮಯೂರ ಟಿವಿಯ ನಂತರ ಸುದ್ದಿ ಟಿವಿ, ನ್ಯೂಸ್ ಎಕ್ಸ್ ಕನ್ನಡದಲ್ಲಿ ಕೆಲಸ ಮಾಡಿದ ಬಳಿಕ ಬಿಟಿವಿ ಯಲ್ಲಿ ಹಲವು ವರ್ಷಗಳ ಕಾಲ ನಿರೂಪಕರಾಗಿ ಕೆಲಸ ಮಾಡಿದ್ದಾರೆ. ರಿಪಬ್ಲಿಕ್ ಕನ್ನಡ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ : ಬೈಂದೂರು : ಮೆಹಂದಿ ಶಾಸ್ತ್ರದ ವೇಳೆ ಮದುಮಗ ಎಸ್ಕೇಪ್, ಮದುವೆ

ರಂಜಿತ್ ಶಿರಿಯಾರ್ ತಂದೆ ನಾರಾಯಣ್ ಹಾಗೂ ತಾಯಿ ಬಾಬಿ ಶಿರಿಯಾರದ ಹಾರ್ಯಾಡಿ ಬೆಟ್ಟಿನ ಗುಡ್ಡೆಮನೆಯಲ್ಲಿ ವಾಸವಾಗಿದ್ದಾರೆ. ಅಕ್ಕ ರೇಷ್ಮಾ ಅವರ ಮುದ್ದಿನ ತಮ್ಮನಾಗಿರುವ ರಂಜಿತ್ ಬೆಂಗಳೂರಿನಲ್ಲಿದ್ದರೂ ಕೂಡ ಕುಂದಾಪುರದ ಬಗೆಗಿನ ತಮ್ಮ ಪ್ರೇಮವನ್ನು ಮರೆತಿಲ್ಲ. ಕಳೆದ ಐದು ವರ್ಷಗಳ ಹಿಂದೆ ಹುಟ್ಟು ಹಾಕಿದ್ದ ಕುಂದಾಪುರಿಯನ್ಸ್ ತಂಡದಲ್ಲಿ ಇಂದು ನೂರಕ್ಕೂ ಅಧಿಕ ಸದಸ್ಯರಿದ್ದಾರೆ. ಕುಂದಾಪುರ ಹಾಗೂ ಕುಂದಾಪುರ ಕನ್ನಡ ಭಾಷೆಯ ಉಳಿವಿವಾಗಿ ಸದಾ ಹೋರಾಟವನ್ನೇ ನಡೆಸುತ್ತಿದ್ದಾರೆ. ಮಾತ್ರವಲ್ಲ ತಮ್ಮ ಸ್ನೇಹಿತರ ಒಳಗೂಡಿ ಹಲವು ಸಮಾಜಮುಖಿ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಂಜಿತ್ ಶಿರಿಯಾರ ಮಾಧ್ಯಮ ಲೋಕದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಇನ್ನಷ್ಟು ಪ್ರಶಸ್ತಿಗಳು ಅವರ ಮುಡಿಗೇರಿ ಅನ್ನೋದೇ ನ್ಯೂಸ್ ನೆಕ್ಸ್ಟ್‌ನ ಹಾರೈಕೆ.
South India Best Anchor Award to Republic Kannada Anchor Ranjit Shiriyar