Kabul Evacuations : ತಾಯ್ನಾಡಿಗೆ ಮರಳಿದ 107 ಭಾರತೀಯರು : ಭಾರತಕ್ಕೆ ಕಾಲಿಟ್ಟು ಕಣ್ಣೀರಿಟ್ಟ ಅಪ್ಘಾನ್‌ ಸಂಸದ

ನವದೆಹಲಿ : ಅಫ್ಘಾನ್‌ ಹಿಂಸಾಚಾರದ ಬೆನ್ನಲ್ಲೇ ಭಾರತೀಯ ಸೇನೆಯ ವಿಮಾನ 107 ಭಾರತೀಯರು ಸೇರಿದಂತೆ ಒಟ್ಟು 168 ಜನರನ್ನು ಭಾರತಕ್ಕೆ ಕರೆತರಲಾಗಿದೆ. ಇದರಲ್ಲಿ 6 ಮಂದಿ ಕನ್ನಡಿಗರೂ ಇದ್ದಾರೆ. ಇನ್ನು ಭಾರತಕ್ಕೆ ಕಾಲಿಡುತ್ತಿದ್ದಂತೆಯೇ ಅಪ್ಘಾನ್‌ ಸಂಸದ ಕಣ್ಣೀರಿಟ್ಟಿದ್ದಾರೆ.

ಭಾರತೀಯ ವಾಯು ಸೇನೆಯ ಸಿ-17 ವಿಮಾನದ ಮೂಲಕ ಕಾಬೂಲ್‍ನಿಂದ ಹಿಂದನ್‌ ಏರ್‌ಪೋರ್ಸ್‌ ಬೇಸ್‌ನ ಗಾಜಿಯಾಬಾದ್‌ ಗೆ ಕರೆತರಲಾಗಿದೆ. ಇಂದು ಬೆಳಗ್ಗೆ107 ಜನ ಭಾರತೀಯರು ಸೇರಿ ಒಟ್ಟು 168 ಜನ ಭಾರತಕ್ಕೆ ಬಂದಿಳಿದಿದ್ದಾರೆ. ವಿದೇಶಾಂಗ ಸಚಿವಾಲಯದ ಅರಿಂದಮ್ ಬಾಗ್ಚಿ ಟ್ವೀಟ್‌ ಮೂಲಕ ಖಚಿತ ಪಡಿಸಿದ್ದಾರೆ.

ಅಪ್ಘಾನಿಸ್ತಾನದಲ್ಲಿ ಸಾವಿರಾರು ಮಂದಿ ಸಿಲುಕಿರುವ ಸಾಧ್ಯತೆಯಿದ್ದು, ಕೇಂದ್ರ ಸರಕಾರದ ಸೂಚನೆಯ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಕಾರ್ಯಾಚರಣೆಯನ್ನು ಕೈಗೊಂಡಿದೆ. ಭಾರತೀಯರ ಜೊತೆಗೆ ಆರು ಮಂದಿ ಕನ್ನಡಿಗರು ಕೂಡ ಸೇಫ್‌ ಆಗಿ ಭಾರತಕ್ಕೆ ಬಂದು ತಲುಪಿದ್ದಾರೆ. ಅಲ್ಲದೇ ಅಪ್ಘಾನಿಸ್ತಾನದ ಹಲವು ಮಂದಿ ಇದೇ ವಿಮಾನದಲ್ಲಿ ಭಾರತಕ್ಕೆ ಬಂದಿದ್ದಾರೆ ಅದ್ರಲ್ಲೂಅಫ್ಘಾನಿಸ್ತಾನದ ಸಂಸದ ನರೇಂದ್ರ ಸಿಂಗ್ ಖಲ್ಸಾ ಅವರು ಕಾಬೂಲ್‍ನಿಂದ ಭಾರತಕ್ಕೆ ಲ್ಯಾಂಡ್ ಆಗುತ್ತಿದ್ದಂತೆ ಭಾವುರಾಗಿ ಕಣ್ಣೀರಿಟ್ಟಿದ್ದಾರೆ. ಕಳೆದ 20 ವರ್ಷಗಳಿಂದ ಸಂಪಾದಿಸಿದ್ದನ್ನೂ ಕಳೆದುಕೊಂಡಿದ್ದೇವೆ ಎಂದಿದ್ದಾರೆ.

ಅಲ್ಲದೇ ಭಾರತೀಯರ ಪೈಕಿ ನೇಪಾಳದ ನಿವಾಸಿಗಳು ಕೂಡ ಭಾರತಕ್ಕೆ ಆಗಮಿಸಿದ್ದಾರೆ. ಅಲ್ಲದೇ ಈ ಹಿಂದೆ ಯುಎಸ್‌ ಹಾಗೂ ನಾಟೋ ವಿಮಾನದ ಮೂಲಕ ನೂರಕ್ಕೂ ಅಧಿಕ ಭಾರತೀಯರನ್ನು ಸ್ಥಳಾಂತರ ಮಾಡಲಾಗಿತ್ತು.

ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ತಾಲಿಬಾನಿಗಳು ತನ್ನ ಮನೆಯನ್ನು ಸುಟ್ಟು ಹಾಕಿದ್ದಾರೆ. ರಕ್ಷಣೆಗೆ ನಿಂತ ಭಾರತಕ್ಕೆ ನಾನು ಧನ್ಯವಾದ ಸಮರ್ಪಿಸುತ್ತೇನೆ ಎಂದು ಭಾರತಕ್ಕೆ ಬಂದ ಮಹಿಳೆ ಭಾವುಕರಾಗಿದ್ದಾರೆ.

ಇದನ್ನೂ ಓದಿ :  150 ಭಾರತೀಯರು ಸುರಕ್ಷಿತ : ಪಾಸ್‌ಪೋರ್ಟ್‌ ಪರಿಶೀಲಿಸಿದ ತಾಲಿಬಾನಿಗಳು

ಇದನ್ನೂ ಓದಿ : ಕತ್ತಲ ರಾತ್ರಿ ಆ ಗ್ರಾಮಕ್ಕೆ ಹೋದವರು ಹಿಂತಿರುಗಿ ಬಂದ ಮಾತೇ ಇಲ್ಲಾ : ಕುಲಧರ ಗ್ರಾಮವೆಂದ್ರೆ ರಾಜಸ್ತಾನದ ಜನ ಬೆಚ್ಚಿ ಬೀಳೋದ್ಯಾಕೆ !

Comments are closed.