ಸೋಮವಾರ, ಜೂನ್ 16, 2025
HomeNational5000 ಕಿ.ಮೀ ವೇಗ, ಭೂಮಿ ಸುತ್ತಲು ಕೇವಲ 7 ಗಂಟೆ ! ಏನಿದು ಹೈಪರ್‌ಸಾನಿಕ್ ವಿಮಾನ

5000 ಕಿ.ಮೀ ವೇಗ, ಭೂಮಿ ಸುತ್ತಲು ಕೇವಲ 7 ಗಂಟೆ ! ಏನಿದು ಹೈಪರ್‌ಸಾನಿಕ್ ವಿಮಾನ

ಹೈಪರ್‌ಸಾನಿಕ್‌ ವಾಣಿಜ್ಯ ವಿಮಾನವನ್ನು ಅಭಿವೃದ್ದಿ ಪಡಿಸುತ್ತಿದೆ. ಈ ವಿಮಾನ ಕೇವಲ ಒಂದು ಗಂಟೆ ಅವಧಿಯಲ್ಲಿ ಪ್ಯಾರಿಸ್‌ನಿಂದ ಬೀಜಿಂಗ್‌ ನಡುವಿನ ಪ್ರಯಾಣವನ್ನು ಕೇವಲ ಒಂದು ಗಂಟೆಯಲ್ಲಿ ಪೂರ್ಣಗೊಳಿಸಲಿದೆ.

- Advertisement -

Hypersonic Aircraft : ಅಮೇರಿಕಾ, ಚೀನಾ ಮತ್ತು ರಷ್ಯಾ ವಿಶ್ವದ ಸೂಪರ್‌ ಪವರ್‌ಗಳು. ಸಿದ್ದ ಉತ್ಪನ್ನಗಳ ಜೊತೆಗೆ ಕಚ್ಚಾ ವಸ್ತುಗಳನ್ನು ಪೂರೈಸುವ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮೆರೆದಿವೆ. ಹೈಪರ್‌ ಸಾನಿಕ್‌ ಕ್ಷಿಪಣಿಗಳನ್ನು ಅಭಿವೃದ್ದಿ ಪಡಿಸಿದ ಬಳಿಕ ಇದೀದ ಚೀನಾ ಹೈಪರ್‌ ಸಾನಿಕ್‌ ವಿಮಾನ ನಿರ್ಮಾಣಕ್ಕೆ ಮುಂದಾಗಿದೆ. ಒಂದೊಮ್ಮೆ ಈ ವಿಮಾನ ಸಿದ್ದವಾದ್ರೆ ಇಡೀ ವಿಶ್ವ ಸುತ್ತಲು ಕೇವಲ 7 ಗಂಟೆಗಳ ಅವಧಿ ಸಾಕು.

ಬೀಜಿಂಗ್ ಮೂಲದ ಸ್ಪೇಸ್ ಟ್ರಾನ್ಸ್‌ಪೋರ್ಟೇಶನ್ ಕಂಪೆನಿಯು ಯುನ್ಕ್ಸಿಂಗ್ ಮೂಲ ಮಾದರಿ ವಿಮಾನವನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಇದು ಶಬ್ದದ ವೇಗಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚು, ಅಂದ್ರೆ ಮ್ಯಾಕ್ 4 ವೇಗದಲ್ಲಿ ಹಾರಬಲ್ಲ ವಾಣಿಜ್ಯ ವಿಮಾನ. ಹೈಪರ್‌ಸಾನಿಕ್ ವಿಮಾನದ ವೇಗ ಗಂಟೆಗೆ 3,069 ಮೈಲುಗಳು, ಸರಿಸುಮಾರು 5,000 ಕಿ.ಮೀ. ಆಗಿರುತ್ತದೆ.

ಸೂಪರ್‌ಸಾನಿಕ್ ಕಾನ್ಕಾರ್ಡ್ ಗಂಟೆಗೆ 2,000 ಕಿ.ಮೀ. ವೇಗದಲ್ಲಿ ಹಾರಬಲ್ಲದು, ಇದು ಶಬ್ದದ ವೇಗಕ್ಕಿಂತ ಎರಡು ಪಟ್ಟು ಹೆಚ್ಚು. ವರದಿಗಳ ಪ್ರಕಾರ, ಚೀನಾದ ಹೈಪರ್‌ಸಾನಿಕ್ ವಿಮಾನವು ಲಂಡನ್‌ನಿಂದ ನ್ಯೂಯಾರ್ಕ್‌ಗೆ ಕೇವಲ ಒಂದೂವರೆ ರಿಂದ ಎರಡು ಗಂಟೆಗಳಲ್ಲಿ ಪ್ರಯಾಣಿಸಬಹುದು.

5000 km speed just 7 hours to circle the earth What is a hypersonic aircraft in Kannada News

ಬೀಜಿಂಗ್ ಮೂಲದ ಕಂಪನಿ ಲಿಂಗ್‌ಕಾಂಗ್ ಟಿಯಾನ್ಸಿಂಗ್ ಟೆಕ್ನಾಲಜಿ ಹೈಪರ್‌ಸಾನಿಕ್ ವಿಮಾನವನ್ನು ಅಭಿವೃದ್ಧಿಪಡಿಸುತ್ತಿದೆ. ತಮ್ಮ ಯುನ್ಕ್ಸಿಂಗ್ ವಿಮಾನದ ಮೂಲಮಾದರಿಯು ವಾರಾಂತ್ಯದಲ್ಲಿ ಯಶಸ್ವಿ ಹಾರಾಟ ನಡೆಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೇ ನವೆಂಬರ್‌ನಲ್ಲಿ ಹೆಚ್ಚಿನ ಎಂಜಿನ್ ಪರೀಕ್ಷೆಗೆ ಮುಂದಾಗಿದೆ. ಮಹತ್ವಾಕಾಂಕ್ಷೆಯ ಯೋಜನೆಯು 2027 ರ ವೇಳೆಗೆ ಪೂರ್ಣ ಗಾತ್ರದ ಸೂಪರ್‌ಸಾನಿಕ್ ಪ್ಯಾಸೆಂಜರ್ ಜೆಟ್‌ನ ಚೊಚ್ಚಲ ಹಾರಾಟದ ಗುರಿಯನ್ನು ಹೊಂದಿದೆ. ಈ ಹೆಚ್ಚು ನಿರೀಕ್ಷಿತ ವಿಮಾನವು ಮ್ಯಾಕ್ 4 ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Also Read : ದುಬೈನಲ್ಲಿ 6 ವರ್ಷಗಳ ಯುವಕ ದಿಗ್ಬಂಧನಕ್ಕೆ ಮುಕ್ತಿ ದೊರಕಿಸಿದ ಶಾಸಕ ಸುನಿಲ್‌ ಕುಮಾರ್‌

2027ಕ್ಕೆ ಹೈಪರ್‌ಸಾನಿಕ್ ವಿಮಾನ (Hypersonic Aircraft ) ಹಾರಾಟ

ಹೈಪರ್‌ಸಾನಿಕ್ ವಿಮಾನವು (Hypersonic Aircraft ) ಪ್ಯಾರಿಸ್‌ನಿಂದ ಬೀಜಿಂಗ್ ನಡುವಿನ ಪ್ರಯಾಣವನ್ನು ಕೇವಲ ಒಂದು ಗಂಟೆಯಲ್ಲಿ ಮತ್ತು ಬೀಜಿಂಗ್‌ನಿಂದ ನ್ಯೂಯಾರ್ಕ್ ನಡುವಿನ ಪ್ರಯಾಣವನ್ನು ಎರಡು ಗಂಟೆಗಳಲ್ಲಿ ಪೂರ್ಣಗೊಳಿಸಬಹುದು ಎಂದು ಕಂಪನಿ ಹೇಳಿದೆ. ಒಂದೊಮ್ಮೆ ಈ ವಿಮಾನ ಯಶಸ್ವಿಯಾದರೆ ಕಳೆದ 25 ವರ್ಷಗಳಲ್ಲಿ ಚೀನಾ ನಿರ್ಮಿಸಿದ ಮೊದಲ ಸೂಪರ್‌ಸಾನಿಕ್ ಪ್ರಯಾಣಿಕ ವಿಮಾನವಾಗಲಿದೆ. ಕಾನ್ಕಾರ್ಡ್ ವಿಮಾನ ತನ್ನ ಕೊನೆಯ ಹಾರಾಟವನ್ನು 2003 ರಲ್ಲಿ ಮಾಡಿತು.

Also Read : Ration Card ekyc : ಜೂನ್‌ 30 ಕೊನೆಯ ದಿನ : ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್‌ ಕಾರ್ಡ್‌

ಯುಎಸ್ ಮೂಲದ ವೀನಸ್ ಏರೋಸ್ಪೇಸ್, ​​ಪ್ರಸ್ತುತ ಮ್ಯಾಕ್ 6 ಅನ್ನು ಸಾಧಿಸಬಹುದು ಎಂದು ವಿಶ್ವಾಸದಿಂದ ಹೇಳಿಕೊಳ್ಳುವ ಜೆಟ್ ಎಂಜಿನ್ ಅನ್ನು ರೂಪಿಸುವ ಕೆಲಸದಲ್ಲಿದೆ. ಒಂದೊಮ್ಮೆ ಇದು ಸಾಧ್ಯವಾದ್ರೆ ಹೈಪರ್‌ಸಾನಿಕ್ ಆರ್ಥಿಕತೆಗೆ ಸಂಭಾವ್ಯವಾಗಿ ಬಾಗಿಲು ತೆರೆಯಬಹುದು. ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾದ ಮಾಲೀಕ ಎಲಾನ್ ಮಸ್ಕ್, ಸೂಪರ್‌ಸಾನಿಕ್ ಜೆಟ್‌ನಲ್ಲಿ ತನ್ನ ಆಸಕ್ತಿಯ ಬಗ್ಗೆ ಸುಳಿವು ನೀಡಿದ್ದಾರೆ.

5000 km speed just 7 hours to circle the earth ! What is a hypersonic aircraft in Kannada News

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular