ಸೋಮವಾರ, ಏಪ್ರಿಲ್ 28, 2025
HomeNationalPolice Staff Bangalore Died : ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ : ಬೆಂಗಳೂರಿನ ಮೂವರು...

Police Staff Bangalore Died : ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ : ಬೆಂಗಳೂರಿನ ಮೂವರು ಪೊಲೀಸ್‌ ಸಿಬ್ಬಂದಿ ದುರ್ಮರಣ

- Advertisement -

ಬೆಂಗಳೂರು : ತನಿಖೆಯ ಸಂಬಂಧ ತೆರಳುತ್ತಿದ್ದ ವೇಳೆಯಲ್ಲಿ ಆಂಧ್ರ ಪ್ರದೇಶದ ಚಿತ್ತೂರು ಬಳಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಶಿವಾಜಿನಗರ ಠಾಣೆಯ ಮೂವರು ಪೊಲೀಸ್‌ ಸಿಬ್ಬಂದಿಗಳು (Police Staff Bangalore Died) ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪಿಎಸ್‌ಐ ಅವಿನಾಶ್‌, ಕಾನ್‌ಸ್ಟೇಬಲ್‌ ಅನಿಲ್‌ ಹಾಗೂ ಖಾಸಗಿ ಕಾರು ಚಾಲಕ ಸಾವನ್ನಪ್ಪಿದ್ದಾರೆ. ಮೃತ ಪೊಲೀಸ್‌ ಸಿಬ್ಬಂದಿಗಳು ಬೆಂಗಳೂರಿನ ಶಿವಾಜಿನಗರ ಪೊಲೀಸ್‌ ಠಾಣೆಯ ಸಿಬ್ಬಂದಿಗಳಾಗಿದ್ದಾರೆ. ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಪ್ರಕರಣವೊಂದರ ತನಿಖೆಯ ಹಿನ್ನೆಲೆಯಲ್ಲಿ ಪೊಲೀಸ್‌ ಸಿಬ್ಬಂದಿಗಳು ವಾಹನದಲ್ಲಿ ತೆರಳುತ್ತುದ್ದ ವೇಳೆಯಲ್ಲಿ ಈ ಅಪಘಾತ ಸಂಭವಿಸಿದೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಕಂಬನಿ ಮಿಡಿದಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವವರಿಗೆ ಸೂಕ್ತ ಚಿಕಿತ್ಸೆ ನೀಡುವ ಕುರಿತು ತುರ್ತು ಕ್ರಮಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಜೀನ್ಸ್​ ಪ್ಯಾಂಟ್​ ಧರಿಸಿದ್ದನ್ನು ವಿರೋಧಿಸಿದ್ದಕ್ಕೆ ಪತಿಯನ್ನೇ ಕೊಂದ ಪತ್ನಿ

ಕಾಲ ಎಷ್ಟೇ ಮುಂದುವರಿದಿದ್ದರೂ ಸಹ ಈಗಲೂ ಕೂಡ ಪತ್ನಿ ಇಂತದ್ದೇ ಬಟ್ಟೆಯನ್ನು ಧರಿಸಬೇಕು ಎಂಬ ಷರತ್ತುಗಳನ್ನು ವಿಧಿಸುವ ಪತಿಯಂದಿರು ನಮ್ಮ ದೇಶದಲ್ಲಿದ್ದಾರೆ. ನೀವು ಕೂಡ ನಿಮ್ಮ ಪತ್ನಿಗೆ ಆಕೆ ಇಷ್ಟಬಂದಂತಹ ಡ್ರೆಸ್​ಗಳನ್ನು ಧರಿಸಲು ನಿಷೇಧ ಹೇರಿದ್ದರೆ ಖಂಡಿತವಾಗಿಯೂ ನೀವು ಈ ಸ್ಟೋರಿಯನ್ನು ಓದಲೇಬೇಕು. ಏಕೆಂದರೆ ಜಾರ್ಖಂಡ್​​ನ ಜಮ್ತಾರಾ ಎಂಬಲ್ಲಿ ಮದುವೆಯಾದ ಬಳಿಕ ಜೀನ್ಸ್​ ಧರಿಸುವಂತಿಲ್ಲ ಎಂದು ಪತಿಯು ಷರತ್ತು ವಿಧಿಸಿದ್ದಕ್ಕೆ ಕೋಪಗೊಂಡ ಮಹಿಳೆಯು ತನ್ನ ಪತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಜಮ್ತಾರಾ ಪೊಲೀಸ್ ಠಾಣಾ ವ್ಯಾಪ್ತಿಯ ಜೋರ್ಭಿತ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ರಾತ್ರಿ ವೇಳೆ ಪುಷ್ಪಾ ಹೆಂಬ್ರೋಮ್​​ ಎಂಬಾಕೆ ಜೀನ್ಸ್​ ಧರಿಸಿ ಗೋಪಾಲಪುರ ಎಂಬ ಗ್ರಾಮದಲ್ಲಿ ನಡೆಯುತ್ತಿದ್ದ ಜಾತ್ರೆಯನ್ನು ವೀಕ್ಷಿಸಲು ತೆರಳಿದ್ದಳು. ಆಕೆ ಜಾತ್ರೆ ಮುಗಿಸಿ ಮನೆಗೆ ವಾಪಸ್ಸಾದ ಸಂದರ್ಭದಲ್ಲಿ ಆಕೆಯ ಪತಿ ಆಕೆ ಧರಿಸಿದ್ದ ಉಡುಪಿನ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮದುವೆ ನಂತರ ನಿನಗೆ ಜೀನ್ಸ್​ ಧರಿಸಲು ಅವಕಾಶ ಕೊಟ್ಟಿದ್ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

ಪತಿಯಿಂದ ಆಕ್ಷೇಪಗಳನ್ನು ಕೇಳಿದ ಬಳಿಕ ಇದೇ ಜೀನ್ಸ್ ವಿಚಾರ ಪತಿ – ಪತ್ನಿ ನಡುವೆ ದೊಡ್ಡ ಕಲಹಕ್ಕೆ ನಾಂದಿ ಹಾಡಿದೆ. ಪತಿಯ ಮೇಲೆ ಕೋಪಗೊಂಡ ಪುಷ್ಪಾ ಅಡುಗೆ ಮನೆಯಲ್ಲಿದ್ದ ಚಾಕುವನ್ನು ತಂದು ಪತಿಯ ಮೇಲೆ ಹಲ್ಲೆ ನಡೆಸಿದ್ದಾಳೆ. ಚಾಕುವಿನಿಂದ ದಾಳಿಗೊಳಗಾದ ಪತಿಗೆ ತೀವ್ರ ರಕ್ತಸ್ರಾವ ಉಂಟಾಗಿದೆ.

ಕೂಡಲೇ ಪತಿಯನ್ನು ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಮೃತ ವ್ಯಕ್ತಿಯ ತಂದೆ ಕರ್ಣೇಶ್ವರ, ಜೀನ್ಸ್​ ಪ್ಯಾಂಟ್​ ಧರಿಸುವ ವಿಚಾರಕ್ಕೆ ಮಗ ಹಾಗೂ ಸೊಸೆ ನಡುವೆ ಜಗಳವಾಗಿತ್ತು. ಜಗಳ ನಡುವೆ ಸೊಸೆಯು ನಮ್ಮ ಪುತ್ರನಿಗೆ ಚಾಕು ಇರಿದು ಕೊಲೆ ಮಾಡಿದ್ದಾಳೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : ಮಕ್ಕಳ ಕೈಗೆ ಚಾಕಲೇಟ್‌ ನೀಡುವ ಮುನ್ನ ಹುಷಾರ್‌ : ಬೈಂದೂರಲ್ಲಿ ಚಾಕಲೇಟ್ ನುಂಗಿ ಉಸಿರುಗಟ್ಟಿ ಶಾಲಾ ಬಾಲಕಿ ಸಾವು

ಇದನ್ನೂ ಓದಿ : Ambulance hits Shiroor toll : ಶಿರೂರು ಟೋಲ್‌ ಕಂಬಕ್ಕೆ ಅಂಬ್ಯುಲೆನ್ಸ್‌ ಢಿಕ್ಕಿ : ಸಿಸಿ ಕ್ಯಾಮರಾದಲ್ಲಿ ಭೀಕರ ದೃಶ್ಯ ಸೆರೆ

ಇದನ್ನೂ ಓದಿ : Woman Gangraped : ರೈಲ್ವೆ ನಿಲ್ದಾಣದ ಸಿಬ್ಬಂದಿಯಿಂದಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ : ನಾಲ್ವರ ಬಂಧನ

Accident Police Staff Bangalore Died in Chittoor near Andhra Pradesh

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular