ಸೋಮವಾರ, ಏಪ್ರಿಲ್ 28, 2025
HomeNationalUP elections :ಉತ್ತರ ಪ್ರದೇಶ ಚುನಾವಣೆ ಮುಂದೂಡಿಕೆಯಾಗೋದಿಲ್ಲ: ಕೇಂದ್ರ ಚುನಾವಣಾ ಆಯೋಗ ಮಾಹಿತಿ

UP elections :ಉತ್ತರ ಪ್ರದೇಶ ಚುನಾವಣೆ ಮುಂದೂಡಿಕೆಯಾಗೋದಿಲ್ಲ: ಕೇಂದ್ರ ಚುನಾವಣಾ ಆಯೋಗ ಮಾಹಿತಿ

- Advertisement -

UP elections :ಉತ್ತರ ಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡ ಹಾಗೂ ಪಂಜಾಬ್​ ರಾಜ್ಯಗಳಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್​ ಚಂದ್ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಕುರಿತಂತೆ ಮಹತ್ವದ ಮಾಹಿತಿ ನೀಡಿದ್ದಾರೆ.


ಉತ್ತರ ಪ್ರದೇಶದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಚುನಾವಣಾ ಸಮಿತಿಯನ್ನು ಭೇಟಿಯಾಗಿದ್ದು ಕೋವಿಡ್​ ಪ್ರೊಟೋಕಾಲ್​ನ ಜೊತೆಯಲ್ಲೇ ನಿಗದಿತ ದಿನಾಂಕದಂತೆ ಚುನಾವಣೆ ನಡೆಸುವಂತೆ ಕೇಳಿದ್ದಾರೆ. ಚುನಾವಣೆಯನ್ನು ಮುಂದೂಡುವಂತೆ ಯಾರೊಬ್ಬರೂ ಹೇಳಿಲ್ಲ. 2022ರ ಚುನಾವಣೆಯನ್ನು ನಾವು ಮುಂದೂಡುವುದಿಲ್ಲ. ಎಲ್ಲಾ ರೀತಿಯ ಕೋವಿಡ್​ ಮಾರ್ಗಸೂಚಿಗಳ ಜೊತೆಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಸುಶೀಲ್​ ಚಂದ್ರ ಹೇಳಿದರು.


ಉತ್ತರ ಪ್ರದೇಶದಲ್ಲಿ ನ್ಯಾಯಯುತ ಹಾಗೂ ಪಾರದರ್ಶಕ ಮಾದರಿಯಲ್ಲಿ ಚುನಾವಣೆ ನಡೆಯಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಮೂರು ದಿನಗಳ ಕಾಲ ಯುಪಿ ಪ್ರವಾಸ ಕೈಗೊಂಡಿದೆ.
ಇನ್ನು 80 ವರ್ಷ ಮೇಲ್ಪಟ್ಟ ವೃದ್ಧರು, ಅಂಗವಿಕಲರು, ಮಧುಮೇಹದಂತಹ ಕಾಯಿಲೆ ಉಳ್ಳವರು ಹಾಗೂ ಕೋವಿಡ್​ ಸೋಂಕು ತಗುಲಿದವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ.. ಮತಗಟ್ಟೆಗಳನ್ನು ತಲುಪಲು ಆಗದವರ ಮನೆ ಬಾಗಿಲಿಗೇ ಚುನಾವಣಾ ಆಯೋಗ ಬಂದು ತಲುಪಲಿದೆ ಎಂದು ಅವರು ಹೇಳಿದರು.


ಮುಂದಿನ ವರ್ಷ ವಿಧಾನಸಭಾ ಚುನಾವಣೆಯನ್ನು ಎದುರಿಸಲಿರುವ ಗೋವಾ, ಪಂಜಾಬ್​ ಹಾಗೂ ಉತ್ತರಾಖಂಡ್​ಗೆ ಈಗಾಗಲೇ ಭೇಟಿ ನೀಡಿರುವ ಚುನಾವಣಾ ಆಯೋಗದ ನಿಗಮವು ಇದೀಗ ಉತ್ತರ ಪ್ರದೇಶದಲ್ಲಿರೂ ಮೂರು ದಿನಗಳ ಪ್ರವಾಸ ಕೈಗೊಂಡಿದೆ. ಈ ಮೂರು ದಿನಗಳ ಭೇಟಿಯಲ್ಲಿ ಚುನಾವಣಾ ಆಯೋಗವು ಜಿಲ್ಲಾಧಿಕಾರಿಗಳು , ಕಮಿಷನರ್​​, ಐಜಿ – ಡಿಐಜಿ ಸೇರಿದಂತೆ ವಿವಿಧ ಮುಖ್ಯ ಅಧಿಕಾರಿಗಳನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದೆ.

ಮೂರು ದಿನಗಳ ಪ್ರವಾಸದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಶೀಲ್​ ಚಂದ್ರ ವಿಧಾನಸಭಾ ಚುನಾವಣೆಯು ಮುಂದೂಡಿಕೆಯಾಗೋದಿಲ್ಲ. ಕೋವಿಡ್​ ಮಾರ್ಗಸೂಚಿಗಳನ್ನು ಅನುಸರಿಸಿ ಚುನಾವಣೆಯನ್ನು ನಡೆಸುತ್ತೇವೆ, ಅಂತಿಮ ಮತದಾರರ ಪಟ್ಟಿಯನ್ನು ಜನವರಿ 5ರಂದು ಬಿಡುಗಡೆ ಮಾಡಲಾಗುತ್ತದೆ.ಎಲ್ಲಾ ಮತಗಟ್ಟೆಗಳಲ್ಲಿ ವಿವಿಪ್ಯಾಟ್​ಗಳನ್ನು ಅಳವಡಿಸುತ್ತೇವೆ .ಅಲ್ಲದೇ ಲೈವ್​ ವೆಬ್​ಕಾಸ್ಟಿಂಗ್​ ಕೂಡ ಮಾಡಲಾಗುತ್ತದೆ ಎಂದು ಹೇಳಿದರು.

‘All parties said UP elections should be held on time’, says Chief Election Commissioner Sushil Chandra

ಇದನ್ನು ಓದಿ : Akash Ambani : ರಿಲಯನ್ಸ್​ ಕಂಪನಿಗೆ ಶೀಘ್ರದಲ್ಲೇ ಹೊಸ ಮುಖ್ಯಸ್ಥ: ಮಹತ್ವದ ಸುಳಿವು ನೀಡಿದ ಮುಕೇಶ್​ ಅಂಬಾನಿ

ಇದನ್ನೂ ಓದಿ : Raghaveshwara Swamiji Big Relief : ರಾಘವೇಶ್ವರ ಸ್ವಾಮೀಜಿಗೆ ಬಿಗ್‌ ರಿಲೀಫ್‌ : ಆರೋಪ ಮುಕ್ತಗೊಳಿಸಿದ ಹೈಕೋರ್ಟ್‌

RELATED ARTICLES

Most Popular