ಬೆಂಗಳೂರು :amit shah cancelled a high level meeting : ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯ ನಾಯಕರನ್ನು ಚಾರ್ಜ್ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದಾರೆ. ರಾಜ್ಯದಲ್ಲಿ ಮುಂದಿನ ವರ್ಷವೂ ಅಧಿಕಾರದ ಗದ್ದುಗೆ ಏರುವುದು, ನಾಯಕತ್ವ ಬದಲಾವಣೆ, ಸಂಪುಟ ವಿಸ್ತರಣೆ ಸೇರಿದಂತೆ ಸಾಕಷ್ಟು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಕರೆಯಲಾಗಿದ್ದ ಮಹತ್ವದ ಸಭೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ರದ್ದುಪಡಿಸುವ ಮೂಲಕ ಅಚ್ಚರಿಯ ನಿರ್ಧಾರ ಕೈಗೊಂಡಿದ್ದಾರೆ.
ಇಂದು ಸಂಜೆ 4 ಗಂಟೆ ಸುಮಾರಿಗೆ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಈ ಸಭೆಯನ್ನು ಕರೆಯಲಾಗಿತ್ತು. ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವ ಸಂಬಂಧ ಕರೆಯಲಾದ ಈ ಸಭೆಯಲ್ಲಿ 30 ಮಂದಿ ಪದಾಧಿಕಾರಿಗಳು, ನಾಲ್ವರು ವಿಭಾಗವಾರು ಪ್ರತಿನಿಧಿಗಳು ಹಾಗೂ 16 ಮಂದಿ ಸದಸ್ಯರು ಸೇರಿದಂತೆ 50 ಮಂದಿ ಪ್ರಮುಖರು ಭಾಗಿಯಾಗುವವರಿದ್ದರು.
ಈ ಸಭೆಯಲ್ಲಿ ಅಮಿತ್ ಶಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಸರ್ಕಾರ ಕೈಗೊಳ್ಳಬೇಕಾದ ನೀತಿ, ವಿವಾದಗಳಿಂದ ದೂರ ಉಳಿಯುವ ಬಗ್ಗೆ , ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಅಮಿತ್ ಶಾ ಮಾತನಾಡುವವರಿದ್ದರು. ಆದರೆ ಅಚ್ಚರಿಯ ನಡೆ ಎಂಬಂತೆ ಅಮಿತ್ ಶಾ ಈ ಸಭೆಯನ್ನು ರದ್ದುಗೊಳಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ನಿವಾಸದಲ್ಲಿ ಮೊದಲೇ ನಿಗದಿಯಾಗಿದ್ದ ಭೋಜನ ಕೂಟಕ್ಕೆ ಅಮಿತ್ ಶಾ ಭಾಗಿಯಾಗಿದ್ದಾರೆ.
ಇದನ್ನು ಓದಿ : Amit Shah ಆಗಮನದ ಹೊತ್ತಲ್ಲೇ ಅಶ್ವತ್ಥ ನಾರಾಯಣ್ ಗೆ ಶಾಕ್ : ಭ್ರಷ್ಟಾಚಾರದ ಆರೋಪ ಕೆಂಡಾಮಂಡಲ
ಇದನ್ನೂ ಓದಿ : BJP Secret Meeting : ಸಿಎಂ ಬೊಮ್ಮಾಯಿ ಬದಲಾವಣೆ ? ಕುತೂಹಲ ಮೂಡಿಸಿದೆ ಬಿಜೆಪಿ ತ್ರಿಮೂರ್ತಿಗಳ ಸಭೆ
amit shah cancelled a high level meeting to be held in taj west end