ನವದೆಹಲಿ : ಇಂದಿನಿಂದ ವಿಶ್ವದ ಅತಿ ದೊಡ್ಡ ಸುರಂಗ ಮಾರ್ಗ ಹೊಂದಿರುವ ದೇಶ ಎನ್ನುವ ಸಾಲಿಗೆ ಭಾರತ ಸೇರಲಿದೆ.ಯಾಕಂದ್ರೆ ವಿಶ್ವದ ಅತಿದೊಡ್ಡ ಸುರಂಗ ಮಾರ್ಗವನ್ನು ಪ್ರಧಾನಿ ಇಂದು ಲೋಕಾರ್ಪಣೆ ಮಾಡಿದ್ರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯವರ ಕನಸಿನ ಕೂಸಾದ ಈ ಟನಲ್ ನನ್ನು ಪ್ರಧಾನಿ ನರೇಂದ್ರ ಮೋದಿ ಜನರ ಸೇವೆಗೆ ಅರ್ಪಿಸಿದ್ದಾರೆ.

ಆ ಬಳಿಕ ಮಾತನಾಡಿದ ಮೋದಿ ಇನ್ನು ಮುಂದೆ ಬೆಟ್ಟದ ಭಾರವನ್ನು ಈಟನಲ್ ಹೊರಲಿದೆ. ಇದರಿಂದ ಇಲ್ಲಿನ ಜನರ ಭಾರ ಕಡಿಮೆ ಯಾಗಲಿದೆ ಎಂದರು . ಈ ಸುರಂಗವು ಜನರ ಓಡಾಟಕ್ಕೆ ಅನುಕೂಲವಾಗಲಿದ್ದು. ಸಮಯದ ಉಳಿತಾಯವೂ ಸಾಧ್ಯ. ಇನ್ನು ಈ ಸುರಂಗ ಮಾರ್ಗವು ಲೇಹ್ ಲಡಾಕ್ ಜನರಿಗೆ ಹೊಸ ಜೀವನವನ್ನು ನೀಡಲಿದೆ . ಜೊತೆಗೆ ಲಡಾಕ್ ಜನರನ್ನು ದೇಶದ ಉಳಿದ ಭಾಗಗಳ ಜೊತೆ ಬೆಸೆಯಲಿದೆ ಎಂದರು.

ಇನ್ನು ಹಿಮಾಚಲ ಪ್ರದೇಶದ ಬಗ್ಗೆ ವಾಜಪೇಯಿಯವರ ಕನಸನ್ನು ಪ್ರಸ್ತಾಪಿಸಿದ ಮೋದಿ ಹಿಮಾಚಲ ಪ್ರದೇಶದ ಅಭಿವೃದ್ಧಿ ವಾಜಪೇಯಿ ಕನಸು. ಇದರ ಮೊದಲ ಭಾಗವೇ ಈ ಟನಲ್ . ಇನ್ನು ಮುಂದೆ ಇಲ್ಲಿಯ ಅಭಿವೃದ್ಧಿಯತ್ತ ಸರ್ಕಾರ ಹೆಚ್ಚಿನ ಗಮನ ನೀಡಲಿದೆ, ನಿರುದ್ಯೋಗ, ವಿದ್ಯುತ್ ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳು ಜನರಿಗೆ ಲಭ್ಯವಾಗಲಿದೆ ಎಂದ್ರು.

ಕಾಂಗ್ರೆಸ್ ಬಗ್ಗೆ ಹರಿಹಾಯ್ದ ಪ್ರಧಾನಿ ಕಾಂಗ್ರೆಸ್ ಗೆ ಕೃಷಿ ಮಸೂದೆ ಜಾರಿಗೊಳಿಸುವ ಮನಸ್ಸಿತ್ತು ದೈರ್ಯವಿರಲಿಲ್ಲ. ಚುನಾವಣೆ ಕೂಡಾ ಎದುರಿತ್ತು, ನಮಗೆ ದೇಶ ಹಾಗು ನಮ್ಮ ರೈತರೇ ಮುಖ್ಯ ಎಂದ್ರು