ಭಾನುವಾರ, ಏಪ್ರಿಲ್ 27, 2025
Homeautomobileಓಲಾ ಎಲೆಕ್ಟ್ರಿಕಲ್ ಸ್ಕೂಟರ್ ಕಾರ್ಖಾನೆ ವಿಭಿನ್ನ ಸಾಧನೆ: ಸಂಪೂರ್ಣ ವ್ಯವಸ್ಥೆ ಮಹಿಳಾಮಯ

ಓಲಾ ಎಲೆಕ್ಟ್ರಿಕಲ್ ಸ್ಕೂಟರ್ ಕಾರ್ಖಾನೆ ವಿಭಿನ್ನ ಸಾಧನೆ: ಸಂಪೂರ್ಣ ವ್ಯವಸ್ಥೆ ಮಹಿಳಾಮಯ

- Advertisement -

ನವದೆಹಲಿ: ವಿದ್ಯುತ್ ಚಾಲಿತ ಸ್ಕೂಟರ್ ಮೂಲಕ ವಾಹನ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಲು ಸಿದ್ಧವಾಗಿರುವ ಓಲಾ ಕಂಪನಿ ತನ್ನ ಕಾರ್ಖಾನೆಯನ್ನು ಸಂಪೂರ್ಣ ಪ್ರಮೀಳಾ ರಾಜ್ಯವಾಗಿಸಲು ಸಿದ್ಧವಾಗಿದೆ.

ಓಲಾ ಕಂಪನಿಯ ವಿದ್ಯುತ್ ಚಾಲಿತ ಸ್ಕೂಟರ್ ಕಂಪನಿಯನ್ನು ಸಂಪೂರ್ಣವಾಗಿ ಮಹಿಳೆಯರ ಹೆಗಲಿಗೆ ಏರಿಸಲು ಓಲಾಕಂಪನಿ ಆಡಳಿತ ಮಂಡಳಿ ನಿರ್ಧರಿಸಿದೆ. ಇಂತಹದೊಂದು ವಿಭಿನ್ನ ಪ್ರಯತ್ನ ಮಾತ್ರವಲ್ಲ ಸಂಪೂರ್ಣ ಕಾರ್ಖಾರೆ ಆರಂಭವಾದ ಮೇಲೆ 10 ಸಾವಿರ ಮಹಿಳೆಯರಿಗೆ ಉದ್ಯೋಗ ನೀಡುವುದಾಗಿ ಓಲಾ ಸಹ ಸಂಸ್ಥಾಪಕ ಭವೀಶ್ ಅರ್ಗವಾಲ್ ಹೇಳಿದ್ದಾರೆ.

ಆತ್ಮನಿರ್ಭರ ಭಾರತಕ್ಕೆ ಆತ್ಮನಿರ್ಭರ ಮಹಿಳೆಯರ ಅಗತ್ಯವಿದೆ. ಓಲಾ ಕಂಪನಿಯನ್ನು ಸಂಪೂರ್ಣವಾಗಿ ಮಹಿಳೆಯರೇ ಮುನ್ನಡೆಸಲಿದ್ದಾರೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಇದು ಮಹಿಳೆಯರೇ ನಡೆಸುವ ಜಗತ್ತಿನ ಅತಿದೊಡ್ಡ ಕಾರ್ಖಾನೆಯಾಗಲಿದೆ ಎಂದು ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ಅಷ್ಟೇ ಅಲ್ಲ ಸದ್ಯ ಕಾರ್ಯಾರಂಭ ಮಾಡಿರುವ ತಮ್ಮ ಓಲಾ ವಿದ್ಯುತ್ ಚಾಲಿತ ಸ್ಕೂಟರ್ ಕಾರ್ಖಾನೆಯ ಮೊದಲ ಮಹಿಳಾ ಬ್ಯಾಚ್ ನ ವಿಡಿಯೋವನ್ನು ಭವೀಶ್ ಅರ್ಗವಾಲ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಭಾರತದ ಉತ್ಪಾದನಾ ವಲಯದಲ್ಲಿ ಕೇವಲ 12 ಶೇಕಡಾದಷ್ಟು ಮಾತ್ರ ಮಹಿಳಾ ಕಾರ್ಮಿಕರು ಇದ್ದಾರೆ. ದೇಶವು ತಯಾರಿಕಾ ವಲಯದ ಪ್ರಮುಖ ರಾಷ್ಟ್ರವಾಗಬೇಕಾದರೇ, ಮಹಿಳೆಯರಿಗೆ ತರಬೇತಿ ನೀಡುವುದು ಹಾಗೂ ಅವರಿಗಾಗಿ ಉದ್ಯೋಗ ಸೃಷ್ಟಿಸುವುದು ಕೂಡ ಆದ್ಯತೆಯ ಕೆಲಸವಾಗಬೇಕು ಎಂದಿದ್ದಾರೆ.

ಇದನ್ನೂ ಓದಿ : ಎಲೆಕ್ಟ್ರಿಕ್ ಕಾರು ಖರೀದಿಸೋ ಪ್ಲಾನ್‌ ಇದ್ರೆ ಈ ಕಾರುಗಳನ್ನು ಖರೀದಿಸೋದು ಬೆಸ್ಟ್‌

ಇದನ್ನೂ ಓದಿ : Renault Kwid ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ : ಹೊಸ ಕಾರಿನ ಬೆಲೆ, ಫೀಚರ್ಸ್‌ ನೀವು ತಿಳಿದುಕೊಳ್ಳಲೇ ಬೇಕು

(OLA ELECTRIC EMPLOYS ALL-WOMEN WORKFORCE AT ITS FUTUREFACTORY, TO HAVE OVER 10,000 WORKERS AT FULL CAPACITY )

RELATED ARTICLES

Most Popular