ಬೆಂಗಳೂರು : ಬಸವನಗುಡಿಯ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬ್ಯಾಂಕಿನಲ್ಲಿ ಕೇಂದ್ರ ಕಚೇರಿ ಸೇರಿದಂತೆ ನಗರದ ವಿವಿಧಡೆಗಳಲ್ಲಿ ದಾಳಿ ನಡೆದಿದೆ. ಬ್ಯಾಂಕಿನಲ್ಲಿ ಅವ್ಯವಹಾರದ ಕುರಿತು ಎಸಿಬಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.

ಈ ಹಿಂದೆ ಆರ್‌ಬಿಐ ನಿಯಮಗಳನ್ನ ಪಾಲನೆ ಮಾಡದ ಹಿನ್ನೆಲೆ ಬ್ಯಾಂಕ್‌ನನ್ನ ಸೂಪರ್ ಸೀಡ್ ಮಾಡಲಾಗಿತ್ತು. ಠೇವಣಿ ಹಣ ವಾಪಸ್ ನೀಡುವಂತೆ ಜನರು ಬ್ಯಾಂಕ್ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಬ್ಯಾಂಕ್‌ನಲ್ಲಿ ಗೋಲ್‌ಮಾಲ್ ಆಗಿರುವ ಬಗ್ಗೆ ಮಾಹಿತಿ ಪಡೆದ ಎಸಿಬಿ ಅಧಿಕಾರಿಗಳು ಬ್ಯಾಂಕ್‌ನ ಕೇಂದ್ರ ಕಚೇರಿ ಸೇರಿದಂತೆ ವಿವಿಧೆಡೆ ದಾಳಿ ನಡೆಸಿದ್ದಾರೆ. ಅಲ್ಲದೇ ನಿವೃತ್ತ ಸಿಇಒ ಡಾ.ಕೆ ರಾಮಕೃಷ್ಣ ಹಾಗು ಬ್ಯಾಂಕ್ ಅಧ್ಯಕ್ಷರ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲೇ ಸುಮಾರು 12 ಶಾಖೆ ಹೊಂದಿರುವ ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್, ಜನಕ್ಕೆ ಆಕರ್ಷಕ ಬಡ್ಡಿ ನೀಡುವುದಾಗಿ ಘೋಷಣೆ ಮಾಡಿತ್ತು. ಹೀಗಾಗಿ ಗ್ರಾಹಕರು ಸುಮಾರು 2400 ಕೋಟಿ ರೂಪಾಯಿ ಠೇವಣಿ ಇಟ್ಟಿದ್ದಾರೆ ಎನ್ನಲಾಗಿದೆ. ಈಗಾಗಲೇ ಸಹಕಾರಿ ಬ್ಯಾಂಕ್ 1700 ಕೋಟಿ ರೂಪಾಯಿ ಸಾಲ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಬ್ಯಾಂಕ್ ಅವ್ಯವಹಾರದ ಕುರಿತು ಈಗಾಗಲೇ ಕೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ. ಆರ್ ಬಿಐ ಬ್ಯಾಂಕ್‌ಗೆ ನೋಟಿಸ್ ನೀಡಿದ ದಿನದಿಂದ ಠೇವಣಿ ಹಣ ಸಿಗುತ್ತದೆಯೇ? ಇಲ್ಲವೇ? ಎಂದು ಜನರು ಆತಂಕಗೊಂಡಿದ್ದಾರೆ.