ದೆಹಲಿ : big news : ದೇಶದಲ್ಲಿ ದಿನಬಳಕೆಯ ವಸ್ತುಗಳ ದರವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಪೆಟ್ರೋಲ್ – ಡೀಸೆಲ್ ದರ ಏರಿಕೆ, ಹಣ್ಣು – ತರಕಾರಿಗಳ ಬೆಲೆ ಏರಿಕೆ, ಗೃಹೋಪಯೋಗಿ ವಸ್ತುಗಳ ದರ ಏರಿಕೆ , ಹಾಲು ಉತ್ಪನ್ನಗಳು ಹೀಗೆ ಪ್ರತಿಯೊಂದರ ದರ ಏರಿಕೆಯಿಂದಾಗಿ ಶ್ರೀ ಸಾಮಾನ್ಯನ ಜೇಬಿಗೆ ಕತ್ತರಿ ಬೀಳುತ್ತಲೇ ಇದೆ. ಈಗಾಗಲೇ ಬೆಲೆ ಏರಿಕೆಯ ಬಿಸಿಯಿಂದಾಗಿ ಕಂಗೆಟ್ಟಿರುವ ಜನಸಾಮಾನ್ಯನಿಗೆ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಶಾಕ್ ನೀಡಲು ಮುಂದಾಗಿದೆ.ಹೌದು..! ಶೀಘ್ರದಲ್ಲಿಯೇ ದೇಶದ ಜನತೆ ಕರೆಂಟ್ಗೆ ಹೆಚ್ಚಿನ ದರ ಪಾವತಿ ಮಾಡಬೇಕು.
ದೇಶದಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಲು ಕಾರಣ ಕಲ್ಲಿದ್ದಲಿನ ಆಮದು. ಪ್ರಸಕ್ತ ವರ್ಷದಲ್ಲಿ ಕೇಂದ್ರ ಸರ್ಕಾರವು ಸರಿ ಸುಮಾರು 76 ಮಿಲಿಯನ್ ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವ ಯೋಜನೆಯಲ್ಲಿದೆ. ಆದರೆ ಆಮದು ಮಾಡಿಕೊಳ್ಳುವ ಕಲ್ಲಿದ್ದಲಿನ ದರ ಹೆಚ್ಚಿರುವ ಕಾರಣ ದೇಶದಲ್ಲಿ ವಿದ್ಯುತ್ ದರ ಏರಿಕೆಯಾಗುವುದು ಪಕ್ಕಾ ಎನ್ನಲಾಗಿದೆ . ಅದರಲ್ಲೂ ಯಾವ ರಾಜ್ಯಗಳು ಬಂದರಿನ ಪ್ರದೇಶದಿಂದ ಹೆಚ್ಚು ದೂರದಲ್ಲಿ ಇವೆಯೋ ಅಂತಹ ರಾಜ್ಯಗಳ ಜನತೆಗೆ ಕರೆಂಟ್ ದರ ಮತ್ತಷ್ಟು ಬರೆ ಎಳೆಯಲಿದೆ. ಉನ್ನತ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ಪ್ರತಿ ಯುನಿಟ್ 80 ಪೈಸೆಯಷ್ಟು ದರ ಏರಿಕೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ದೇಶದ ಅತೀದೊಡ್ಡ ವಿದ್ಯುತ್ ಉತ್ಪಾದಕ ಸಂಸ್ಥೆಗಳಾದ NTPC ಲಿಮಿಟೆಡ್ ಮತ್ತು ದಾಮೋದರ್ ವ್ಯಾಲಿ ಕಾರ್ಪೊರೇಷನ್ (DVC) ಸರಿ ಸುಮಾರು 23 ಟನ್ಗಳಷ್ಟು ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತವೆ. ಕೋಲ್ ಇಂಡಿಯಾ ಲಿಮಿಟೆಡ್ ವಿದ್ಯುತ್ ಉತ್ಪಾದನೆಗಾಗಿ 15 ಮಿಲಿಯನ್ ಟನ್ ಕಲ್ಲಿದ್ದಲಿನ ಆಮದನ್ನು ಪಡೆಯುತ್ತದೆ. ರಾಜ್ಯದ ವಿದ್ಯುತ್ ಉತ್ಪಾದನಾ ಕಂಪನಿ ಜೆನ್ಕೋಸ್ ಹಾಗೂ ಸ್ವತಂತ್ರ ವಿದ್ಯುತ್ ಉತ್ಪಾದಕರು 39 ಮಿಲಿಯನ್ ಟನ್ಗಳಷ್ಟು ಕಲ್ಲಿದ್ದಲು ಆಮದು ಮಾಡಿಕೊಳ್ತಾರೆ. ಈ ಎಲ್ಲಾ ಕಲ್ಲಿದ್ದಲಿನ ಆಮದಿನಿಂದಾಗಿ ವಿದ್ಯುತ್ ಕಂಪನಿಗಳ ಮೇಲೆ ಆರ್ಥಿಕ ಹೊರೆ ಅಧಿಕಗೊಳ್ಳುವ ಹಿನ್ನೆಲೆಯಲ್ಲಿ ದೇಶದ ಜನತೆಗೆ ವಿದ್ಯುತ್ಗೆ ಹೆಚ್ಚಿನ ದರ ಪಾವತಿ ಮಾಡಬೇಕಾಗಿ ಬರಲಿದೆ.
ದೇಶದಲ್ಲಿ ವಿದ್ಯುತ್ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜೂನ್ 9ರಂದು ವಿದ್ಯುತ್ ಬೇಡಿಕೆ ಬರೋಬ್ಬರಿ 211 GW ಆಗಿತ್ತು. ಆದರೆ ಈಗೀಗ ಈ ಬೇಡಿಕೆಯು ಕೊಂಚ ತಗ್ಗಿದ್ದು ಜುಲೈ 20ರಂದು ವಿದ್ಯುತ್ ಬೇಡಿಕೆಯು 185. 65GW ಆಗಿದೆ. ಆಗಸ್ಟ್ – ಸೆಪ್ಟೆಂಬರ್ ತಿಂಗಳಿನಿಂದ ವಿದ್ಯುತ್ ಬಿಲ್ಗಳಲ್ಲಿ ಏರಿಕೆ ಕಾಣಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನು ಓದಿ : Anganwadi workers : ಅಂಗನವಾಡಿ ಕಾರ್ಯಕರ್ತೆಯರ ಮೊಬೈಲ್ ಗೆ ಕರೆನ್ಸಿ ಇಲ್ಲ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಜವಾಬ್ದಾರಿಯಿಲ್ಲ
ಇದನ್ನೂ ಓದಿ : KL Rahul Health Report : ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆಡಲಿದ್ದಾರೆ ರಾಹುಲ್ ?
big news electricity price hiked by 80 paise by central government