ಸೋಮವಾರ, ಏಪ್ರಿಲ್ 28, 2025
Homekarnatakaಬೈಕ್‌ ಹಿಂಬದಿ ಪ್ರಯಾಣಕ್ಕೆ ಹೊಸ ರೂಲ್ಸ್‌ : ಸವಾರನ ಜೊತೆ ಮಾತಾಡಿದ್ರೆ ದಂಡ

ಬೈಕ್‌ ಹಿಂಬದಿ ಪ್ರಯಾಣಕ್ಕೆ ಹೊಸ ರೂಲ್ಸ್‌ : ಸವಾರನ ಜೊತೆ ಮಾತಾಡಿದ್ರೆ ದಂಡ

- Advertisement -

New Rules for Bike Riders : ದೂರ ಪ್ರಯಾಣಕ್ಕೆ ಹೆಚ್ಚಿನವರಿಗೆ ಬೈಕ್‌ ಮೊದಲ ಆದ್ಯತೆಯಾಗಿರುತ್ತದೆ. ಜಾಲಿರೈಡ್‌ (Jolly raid) ಎಂಜಾಯ್ ಮಾಡುತ್ತಿದ್ದವರಿಗೆ ಇನ್ಮುಂದೆ ಅದಕ್ಕೆ ಅವಕಾಶವಿಲ್ಲ. ಬೈಕ್‌ನ ಹಿಂಬದಿಯಲ್ಲಿ ಕುಳಿತು ಪ್ರಯಾಣ ಮಾಡುವವರಿಗೆ ಇನ್ಮುಂದೆ ಸರಕಾರದ ಹೊಸ ನಿಯಮ (New Rules ) ವನ್ನು ಪಾಲನೆ ಮಾಡಬೇಕು. ಒಂದೊಮ್ಮೆ ಯಾಮಾರಿದ್ರೆ ನೀವು ದಂಡದ ಜೊತೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

Bike Riders New Rules
Image Credit to Original Source

ಬೈಕ್‌ನ ಹಿಂಬದಿಯಲ್ಲಿ ಕುಳಿತ ಪ್ರಯಾಣಿಕರು ಸವಾರರ ಜೊತೆಗೆ ಮಾತನಾಡುತ್ತಾ ಪ್ರಯಾಣಿಸೋದು ಸರ್ವೇ ಸಾಮಾನ್ಯ. ಆದರೆ ಇನ್ಮುಂದೆ ಬೈಕ್‌ ಹಿಂಬದಿ ಪ್ರಯಾಣಿಕರು ಸವಾರರ ಜೊತೆಗೆ ಯಾವುದೇ ಕಾರಣಕ್ಕೂ ಮಾತನಾಡುವಂತಿಲ್ಲ. ಬೈಕ್‌ನಲ್ಲಿ ತೆರಳುವ ವೇಳೆಯಲ್ಲಿ ಹಿಂಬದಿ ಸವಾರರ, ಬೈಕ್‌ ಸವಾರನ ಜೊತೆಗೆ ಮಾತಾಡಿದ್ದು ಕಂಡು ಬಂದ್ರೆ ದಂಡ ಬೀಳವುದು ಖಚಿತ.

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಹಿಂಬದಿ ಸವಾರರು ಬೈಕ್‌ನಲ್ಲಿ ಪ್ರಯಾಣಿಸುವ ವೇಳೆಯಲ್ಲಿ ಬೈಕ್‌ ಸವಾರನ ಗಮನವನ್ನು ಬೇರೆಡೆಗೆ ಸೆಳೆಯುತ್ತಾರೆ. ಜೊತೆಗೆ ಬೈಕ್‌ನಲ್ಲಿ ಜಾಲಿ ರೈಡ್‌ ಮಾಡುವ ವೇಳೆಯಲ್ಲಿ ಸಂಭವಿಸುವ ಪ್ರಕರಣಗಳ ಸಂಖ್ಯೆಯಲ್ಲಿ ಬಾರೀ ಏರಿಕೆಯಾಗುತ್ತಿದೆ. ಇದೇ ಕಾರಣದಿಂದಲೇ ಇಂತಹದ್ದೊಂದು ಹೊಸ ರೂಲ್ಸ್‌ ಜಾರಿಯಾಗಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ ಹಣ ಯಾವಾಗ ಬಿಡುಗಡೆ ಆಗುತ್ತೆ ? ಇಲ್ಲಿದೆ ಮಹತ್ವದ ಸುದ್ದಿ

ಸದ್ಯ ಕೇರಳದಲ್ಲಿ ಈ ಆದೇಶ ಜಾರಿಯಾಗಿದ್ದು, ಕೇರಳದ ಮೋಟಾರು ವಾಹನ ಇಲಾಖೆ ಈ ಆದೇಶವನ್ನು ಹೊರಡಿಸಿದೆ. ಕೇರಳದ ಆರ್‌ಟಿಓ ಇಲಾಖೆ ತಮ್ಮ ಹೊಸ ಆದೇಶ ಯಾವ ಕಾರಣಕ್ಕೆ ಜಾರಿ ಮಾಡಲಾಗಿದೆ ಎನ್ನವುದಕ್ಕೆ ಸ್ಪಷ್ಟನೆ ಕೊಟ್ಟಿದೆ. ಬೈಕ್‌ನ ಹಿಂಬದಿ ಸವಾರ ಬೈಕ್ ಪ್ರಯಾಣ ವೇಳೆಯಲ್ಲಿ ಸವಾರನ ಜೊತೆಗೆ ಮಾತನಾಡಿದ್ರೆ ದಂಡ ಬೀಳುತ್ತೆ.

Bike Riders New Rules
Image Credit to Original Source

ರಸ್ತೆ ಅಪಘಾತಗಳ ಪೈಕಿ ದ್ವಿಚಕ್ರ ವಾಹನಗಳೇ ಹೆಚ್ಚಾಗಿ ಅಪಘಾತಕ್ಕೆ ಬಲಿಯಾಗುತ್ತಿವೆ. ಇಂತಹ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವ ಸಲುವಾಗಿ ಕೇರಳದಲ್ಲಿ ಇಂತಹದ್ದೊಂದು ಹೊಸ ಕ್ರಮ ಜಾರಿಗೆ ಬಂದಿದೆ. ಆದರೆ ಕೇರಳ ಪೊಲೀಸರು ಈ ಹೊಸ ಆದೇಶವನ್ನು ಎಷ್ಟು ಪರಿಣಾಮಕಾರಿಯಾಗಿ ಜಾರಿ ಮಾಡ್ತಾರೆ ಅನ್ನೋದನ್ನು ಕಾಡು ನೋಡಬೇಕಾಗಿದೆ.

ಇದನ್ನೂ ಓದಿ : ಬಿಪಿಎಲ್‌ ಕಾರ್ಡ್‌ ಹೊಂದಿದವರಿಗೆ ಸಿಗಲಿದೆ 5 ಲಕ್ಷ ರೂ. ಯೋಜನೆ : ಅರ್ಜಿ ಸಲ್ಲಿಸುವುದು ಹೇಗೆ ?

ಇನ್ಮುಂದೆ ಬೈಕಿನಲ್ಲಿ ಪ್ರಯಾಣಿಸುವ ವೇಳೆಯಲ್ಲಿ ಸವಾರನ ಜೊತೆಗೆ ಮಾತನಾಡದೆ ಮೌನವಾಗಿರಿ. ಕೇರಳದಲ್ಲಿ ಜಾರಿಯಾಗಿರುವ ಈ ಹೊಸ ರೂಲ್ಸ್‌ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಜಾರಿಯಾದ್ರೂ ಕೂಡ ಅಚ್ಚರಿಯಿಲ್ಲ. ಯಾವುದಕ್ಕೂ ನೀವು ಹುಷಾರಾಗಿರುವುದು ಒಳಿತು.

ಇದನ್ನೂ ಓದಿ : 300 ಯೂನಿಟ್‌ ಉಚಿತ ವಿದ್ಯುತ್‌ : ಪ್ರಧಾನಿ ನರೇಂದ್ರ ಮೋದಿ ಸರಕಾರದಿಂದ ಸೂರ್ಯಘರ್‌ ಯೋಜನೆ ಘೋಷಣೆ

New rules for Bike Riders traveling on the back of a bike: If you talk to the rider, fine and the jail sentence is fixed

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular