ಸೋಮವಾರ, ಏಪ್ರಿಲ್ 28, 2025
HomeNationalಹಿಜಬ್​ ಪರ ದನಿಯೆತ್ತಿದ ಮಲಾಲಾ ವಿರುದ್ಧ ಕೌಂಟರ್​ ಮೇಲೆ ಕೌಂಟರ್​ ಕೊಟ್ಟ ಬಿಜೆಪಿ ನಾಯಕರು

ಹಿಜಬ್​ ಪರ ದನಿಯೆತ್ತಿದ ಮಲಾಲಾ ವಿರುದ್ಧ ಕೌಂಟರ್​ ಮೇಲೆ ಕೌಂಟರ್​ ಕೊಟ್ಟ ಬಿಜೆಪಿ ನಾಯಕರು

- Advertisement -

ರಾಜ್ಯದಲ್ಲಿ ನಡೆಯುತ್ತಿರುವ ಹಿಜಬ್​ ವಿವಾದದ (hijab row) ಕುರಿತು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನಿ ಕಾರ್ಯಕರ್ತೆ ಮಲಾಲಾ ಯುಸೂಫ್​ಜಾಯ್​​​ ವಿರುದ್ಧ ಬಿಜೆಪಿ ನಾಯಕರಾದ ಕಪಿಲ್​ ಮಿಶ್ರಾ ಹಾಗೂ ಮಜಿಂದರ್​ ಸಿಂಗ್​ ಸಿರ್ಸಾ ಕಿಡಿಕಾರಿದ್ದಾರೆ. ಮಲಾಲಾ ಯುಸೂಫ್​ಜಾಯ್​​ ಟ್ವಿಟರ್​ನಲ್ಲಿ ಹಿಜಬ್ ವಿವಾದವನ್ನು ಖಂಡಿಸಿದ್ದರು.


ಬಿಜೆಪಿ ನಾಯಕ ಕಪಿಲ್​ ಮಿಶ್ರಾ ಕೂಡ ಟ್ವಿಟರ್​ ಮೂಲಕವೇ ಮಲಾಲಾ ಯುಸೂಫ್​ ಜಾಯ್​​ ಕಮೆಂಟ್​ಗಳಿಗೆ ಕೌಂಟರ್​ ನೀಡಿದ್ದಾರೆ. ಹಿಜಬ್​ ಧರಿಸುತ್ತಿಲ್ಲ ಎಂಬ ಕಾರಣಕ್ಕೆ ಅಪ್ಘಾನಿಸ್ತಾನ, ಇರಾನ್​ ಹಾಗೂ ಪಾಕಿಸ್ತಾನಗಳಲ್ಲಿ ಮುಸ್ಲಿಂ ಮಹಿಳೆಯರನ್ನು ಕೊಲ್ಲಲಾಗುತ್ತಿದೆ. ಹಿಂದೂ ಎಂಬ ಕಾರಣಕ್ಕೆ ಪಾಕಿಸ್ತಾನದಲ್ಲಿ ಹಿಂದೂ, ಸಿಖ್​​ ಯುವತಿಯರನ್ನು ಹತ್ಯೆಗೈಯಲಾಗುತ್ತಿದೆ. ಆದರೆ ಮಲಾಲಾ ಇಂತಹ ವಿಚಾರಗಳ ಬಗ್ಗೆ ಎಂದಿಗೂ ಧ್ವನಿ ಎತ್ತಲೇ ಇಲ್ಲ ಎಂದು ಕುಟುಕಿದ್ದಾರೆ.


ಮತ್ತೊಬ್ಬ ಬಿಜೆಪಿ ನಾಯಕ ಮಜಿಂದರ್​ ಸಿಂಗ್​ ಸಿರ್ಸಾ ಕೂಡ ಈ ವಿಚಾರವಾಗಿ ಟ್ವೀಟ್​ ಮಾಡಿದ್ದು ವಿಚಿತ್ರ..! ಮಲಾಲಾ ಎಂದಿಗೂ ಪಾಕಿಸ್ತಾನದಲ್ಲಿ ಹಿಂದೂ ಸಿಖ್​ ಹುಡುಗಿಯರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದರ ಬಗ್ಗೆ ಎಂದಿಗೂ ಮಾತನಾಡಲೇ ಇಲ್ಲ. ಆದರೆ ಇಂದು ಈಕೆ ನಿಜ ವಿಷಯ ಅರ್ಥ ಮಾಡಿಕೊಳ್ಳದೇ ಟ್ವೀಟ್​ ಮಾಡುತ್ತಿದ್ದಾಳೆ ಎಂದು ಕಿಡಿಕಾರಿದ್ದಾರೆ.


ನಿನ್ನೆ ರಾಜ್ಯದಲ್ಲಿ ನಡೆಯುತ್ತಿರುವ ಸಮವಸ್ತ್ರ ವಿವಾದ ವಿಚಾರವಾಗಿ ಟ್ವೀಟ್​ ಮಾಡಿದ ಮಲಾಲಾ ಯುಸೂಫ್​ಜಾಯ್​, ಹುಡುಗಿಯರಿಗೆ ಹಿಜಬ್​ ಧರಿಸದೇ ಶಾಲೆಗೆ ಬನ್ನಿ ಎಂದು ಹೇಳುತ್ತಿರುವುದು ನಿಜಕ್ಕೂ ಭಯಾನಕವಾಗಿದೆ. ಭಾರತೀಯ ನಾಯಕರು ಮುಸ್ಲಿಂ ಮಹಿಳೆಯರನ್ನು ಕಡೆಗಳಿಸುವುದನ್ನು ನಿಲ್ಲಿಸಬೇಕಿದೆ ಎಂದು ಟ್ವೀಟಾಯಿಸಿದ್ದರು.

Malala running radical jihadi agenda: BJP’s Kapil Mishra, Manjinder Sirsa on activist’s tweet on hijab row

ಇದನ್ನು ಓದಿ : ಸಮವಸ್ತ್ರ ವಿವಾದ ಪ್ರಕರಣ ಏಕಸದಸ್ಯ ಪೀಠದಿಂದ ವಿಸ್ತ್ರತ ಪೀಠಕ್ಕೆ ವರ್ಗಾವಣೆ : ಸದ್ಯಕ್ಕೆ ಹಿಜಬ್​ ಬೇಡ ಎಂದ ಕೋರ್ಟ್​

ಇದನ್ನೂ ಓದಿ :ಮಹಿಳೆಯರ ಬಟ್ಟೆಯಿಂದ್ಲೇ ಪುರುಷರು ಉದ್ರೇಕಿತರಾಗ್ತಾರೇ ! ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ

RELATED ARTICLES

Most Popular