ಮುಂಬೈ : ಇತ್ತೀಚಿನ ದಿನಗಳಲ್ಲಿ ಯುವಕರು ಪಬ್‌ಜೀನತ್ತ ಆಕರ್ಷಿತರಾಗುತ್ತಿದ್ದಾರೆ. ಇದೀಗ ಪಬ್ ಗೀಳಿಗೆ ಬಿದ್ದ ಬಾಲಕನೋರ್ವ ತನ್ನ ತಾಯಿಯ ಖಾತೆಯಿಂದ ಬರೋಬ್ಬರಿ 10 ಲಕ್ಷ ರೂಪಾಯಿ ವ್ಯಯಿಸಿದ್ದಾನೆ. ಮನೆಯವರಿಗೆ ವಿಷಯ ತಿಳಿಯುತ್ತಲೇ ಯಾರಿಗೂ ಹೇಳದ ನಾಪತ್ತೆಯಾಗಿದ್ದಾನೆ.
16 ವರ್ಷದ ಬಾಲಕನೋರ್ವ ಮುಂಬೈನ ಅಂದೇರಿಯಿಂದ ನಾಪತ್ತೆಯಾಗಿದ್ದ. ಈ ಕುರಿತು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ವಿಚಾರಣೆಯಲ್ಲಿ ಬಾಲಕ ಪಬ್ ಜೀ ಗೀಳು ಹತ್ತಿಸಿಕೊಂಡಿದ್ದಾನೆ ಅನ್ನೋದು ಬಯಲಾಗಿತ್ತು.
ಬಾಲಕ ಹಲವು ಸಮಯಗಳಿಂದಲೂ ಪಬ್ ಆಟವಾಡುತ್ತಿದ್ದ. ಮಾತ್ರವಲ್ಲ ತಾಯಿಯ ಬ್ಯಾಂಕ್ ಖಾತೆಯಲ್ಲಿದ್ದ ಬರೋಬ್ಬರಿ 10 ಲಕ್ಷಕ್ಕೂ ಅಧಿಕ ಹಣವನ್ನು ಪಬ್ ಜೀ ಆಟದಲ್ಲಿ ಕಳೆದಿದ್ದಾನೆ. ಈ ವಿಷಯ ಮನೆಯವರಿಗೆ ತಿಳಿಯುತ್ತಲೇ ಬಾಲಕನಿಗೆ ಗದರಿಸಿದ್ದಾರೆ. ಇಷ್ಟಕ್ಕೆ ಬೇಸರ ಮಾಡಿಕೊಂಡ ಬಾಲಕ ಮನೆ ಬಿಟ್ಟು ಪರಾರಿಯಾಗಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿದ್ದ ಎಂಐಡಿಸಿ ಠಾಣೆಯ ಪೊಲೀಸರು ಕೊನೆಗೂ ಬಾಲಕನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಬಾಲಕನಿಗೆ ಬುದ್ದಿ ಮಾತು ಹೇಳಿ ಪೋಷಕರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ : ಕಾರನ್ನು ನಾಲೆಗೆ ಹಾರಿಸಿ ಆತ್ಮಹತ್ಯೆಗೆ ಯತ್ನ : ಇಬ್ಬರು ನಾಪತ್ತೆ, ತಾಯಿ, ಮಗು ಸೇಫ್
ಇದನ್ನೂ ಓದಿ : ಪ್ರೀತಿಗೆ ನಿರಾಕರಿಸಿದ ವಿದ್ಯಾರ್ಥಿನಿ : ಕಾಡಿಗೆ ಕರೆದೊಯ್ದು ಯುವಕ ಮಾಡಿದ್ದ ಘೋರ ಕೃತ್ಯ