ನವದೆಹಲಿ : ಭವಿಷ್ಯ ನಿಧಿ ನಿಮಯದಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಭವಿಷ್ಯ ನಿಧಿ (ಪಿಎಫ್) ಖಾತೆಯಲ್ಲಿ ನಿಮ್ಮ ಯುಎಎನ್ (ಸಾರ್ವತ್ರಿಕ ಖಾತೆ ಸಂಖ್ಯೆ) ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿದ್ದರೆ ಮಾತ್ರ ಹಣವನ್ನು ಕ್ರೆಡಿಟ್ ಮಾಡಲು ಸಾಧ್ಯವಾಗುತ್ತದೆ. ಸೆಪ್ಟೆಂಬರ್ 1 ರಿಂದ, EPFO ಭವಿಷ್ಯ ನಿಧಿ ನಿಯಂತ್ರಣದಲ್ಲಿ ಕೆಲವು ನಿಯಮಗಳು ಜಾರಿಗೆ ಬಂದಿದೆ.
ಫಿಎಫ್ ಗ್ರಾಹಕರು ತಮ್ಮ ನಿವೃತ್ತಿ ನಿಧಿಯ ವಿವಿಧ ಪ್ರಯೋಜನಗಳನ್ನು ಪಡೆಯಲು ನಿಮ್ಮ ಆಧಾರ್ ಕಾರ್ಡ್ ಅನ್ನು ಭವಿಷ್ಯನಿಧಿ ಖಾತೆಯೊಂದಿಗೆ ಲಿಂಕ್ ಮಾಡುವುದು ಕಡ್ಡಾಯ ವಾಗಿದೆ. ಹೊಸ ನಿಯಮವನ್ನು ಜಾರಿಗೆ ತರಲು, ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (EPFO) ಸಾಮಾಜಿಕ ಭದ್ರತೆ ಕೋಡ್ 2020 ರ ಸೆಕ್ಷನ್ 142 ಅನ್ನು ಪರಿಷ್ಕರಿಸಿದೆ.
ಆದ್ದರಿಂದ, ಚಂದಾದಾರರು ನಿವೃತ್ತಿ ನಿಧಿಯ ಪ್ರಯೋಜನಗಳನ್ನು ಪಡೆದುಕೊಳ್ಳಲು, ಪಿಎಫ್ ಖಾತೆಯೊಂದಿಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇಪಿಎಫ್‌ಒನ ಮಾರ್ಗಸೂಚಿಗಳ ಪ್ರಕಾರ, ಆಧಾರ್ ಮತ್ತು ಯುಎಎನ್ ಅನ್ನು ಲಿಂಕ್ ಮಾಡದಿದ್ದರೆ, ಉದ್ಯೋಗದಾತರು ಉದ್ಯೋಗಿ ಮತ್ತು ಉದ್ಯೋಗದಾತರ ಕೊಡುಗೆಯನ್ನು ನಿಧಿಯಲ್ಲಿ ಜಮಾ ಮಾಡಲು ಸಾಧ್ಯವಿಲ್ಲ ಎಂದಿದೆ.
ಇದನ್ನೂ ಓದಿ : Two Child Policy : 2ಕ್ಕಿಂತ ಹೆಚ್ಚು ಮಕ್ಕಳಿದ್ರೆ ಸಿಗಲ್ಲ ಸರಕಾರಿ ಕೆಲಸ ..!! ಒಂದೇ ಮಗುವಿದ್ರೆ ಇಲ್ಲಿದೆ ಭರ್ಜರಿ ಆಫರ್
ಇದನ್ನೂ ಓದಿ : ಎನ್ ಪಿಎಸ್ ರದ್ದು ಮಾಡಿ ಆರ್ಥಿಕ ಸಂಕಷ್ಟದಿಂದ ಪಾರಾಗಲಿ : ಯೋಜನೆ ರದ್ದು ಮಾಡದಿದ್ರೆ ಉಗ್ರ ಹೋರಾಟದ ಎಚ್ಚರಿಕೆ
( New PF rule from today. here is an important update for you )