ವಂಚನೆಯನ್ನು ತಪ್ಪಿಸುವ ಸಲುವಾಗಿ ಎಟಿಎಂಗಳಲ್ಲಿ ಕಾರ್ಡ್ ರಹಿತ ನಗದು ಹಿಂಪಡೆಯುವಿಕೆಯನ್ನು(Cardless cash) ಪರಿಚಯಿಸುವ ಬಗ್ಗೆ ಎಲ್ಲಾ ಬ್ಯಾಂಕುಗಳಿಗೆ ಹಸಿರು ನಿಶಾನೆ ತೋರಲು ಭಾರತೀಯ ರಿಸರ್ವ್ ಬ್ಯಾಂಕ್ ಇಂದು ನಿರ್ಧಾರ ಕೈಗೊಂಡಿದೆ. ಪ್ರಸ್ತುತ ಈ ವಿಶೇಷ ಸೌಲಭ್ಯವು ಬೆರಳಣಿಕೆಯಷ್ಟು ಬ್ಯಾಂಕುಗಳಿಗೆ ಮಾತ್ರ ಮೀಸಲಿಡಲಾಗಿದೆ.
ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ನ್ನು ಬಳಕೆ ಮಾಡಿಕೊಂಡು ಗ್ರಾಹಕರ ಧೃಡೀಕರಣ ಮಾಡಲಾಗುತ್ತದೆ. ಯುಪಿಐಗಳನ್ನು ಬಳಸಿಕೊಂಡು ಎಲ್ಲಾ ಬ್ಯಾಂಕುಗಳು ಹಾಗೂ ಎಟಿಎಂ ನೆಟ್ವರ್ಕ್ಗಳಲ್ಲಿ ಕಾರ್ಡ್ ರಹಿತ ನಗದು ವ್ಯವಾಹರ ಬಗ್ಗೆ ಪ್ರಸ್ತಾಪಿಸಲಾಗಿದೆ.
ಈ ರೀತಿಯ ವ್ಯವಹಾರದಿಂದ ಭೌತಿಕ ಕಾರ್ಡುಗಳ ಅವಶ್ಯಕತೆ ಇರುವುದಿಲ್ಲ. ಎಟಿಎಂ ನೆಟ್ವರ್ಕ್ಗಳ ಮೂಲಕವೇ ಈ ವ್ಯವಹಾರಗಳು ನಡೆಯುವುದರಿಂದ ಕಾರ್ಡ್ ಸ್ಕಿಮ್ಮಿಂಗ್, ಕ್ಲೋನಿಂಗ್ ಸೇರಿದಂತೆ ವಂಚನೆಗಳು ತಹಬಧಿಗೆ ಬರುತ್ತದೆ. ಅಲ್ಲದೇ ಇದರಿಂದ ಹಣದ ವ್ಯವಹಾರ ಕೂಡ ಸುಲಭವಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ಶಕ್ತಿಕಾಂತ್ ದಾಸ್ ವಿಶ್ವಾಸ ವ್ಯಕ್ತಪಡಿಸಿದರು.
ಎನ್ಸಿಪಿಐ, ಎಟಿಎಂ ನೆಟ್ವರ್ಕ್ಗಳು ಹಾಗೂ ಬ್ಯಾಂಕುಗಳಿಗೆ ಈ ಬಗ್ಗೆ ತ್ವರಿತವಾಗಿ ಪ್ರತ್ಯೇಕ ಸೂಚನೆಗಳನ್ನು ನೀಡುತ್ತೇವೆ ಎಂದು ಆರ್ಬಿಐ ಹೇಳಿದೆ.
ಇದನ್ನು ಓದಿ : Sri Lanka : ಶ್ರೀಲಂಕಾದಲ್ಲಿ 36 ಗಂಟೆಗಳ ಕರ್ಫ್ಯೂ : ಟ್ವೀಟರ್, ಫೇಸ್‌ಬುಕ್, ವಾಟ್ಸಾಪ್ ಬ್ಯಾನ್
ಇದನ್ನೂ ಓದಿ : Shashi Tharoor : ಸಂಸತ್ತಿನಲ್ಲಿ ಸುಪ್ರಿಯಾ ಸುಳೆ ಜೊತೆಗಿನ ಸಂಭಾಷಣೆಗೆ ತರೂರ್ ಸ್ಪಷ್ಟನೆ
Cardless cash withdrawal facility across all banks’ ATM network soon, says RBI