ರಾಯ್‌ಪುರ : ಇತ್ತೀಚಿನ ವರ್ಷಗಳಲ್ಲಿ ಯಾವುದೇ ಕೆಲಸಕ್ಕೂ ಆಧಾರ್ ಕಡ್ಡಾಯಗೊಳಿಸಲಾಗುತ್ತಿದೆ. ಭಾರತೀಯರು ಆಧಾರ್ ಹೊಂದಿರಲೇ ಬೇಕು. ಮಕ್ಕಳ ಶಾಲಾ ದಾಖಲಾತಿಯಿಂದ ಹಿಡಿದು, ಸರಕಾರಿ ಸೌಲಭ್ಯ ಪಡೆಯುವ ವರೆಗೂ ಈ ಆಧಾರ್ ಕಾರ್ಡ್ (Aadhaar card ) ಬಳಕೆಯಲ್ಲಿದೆ. ಆದರೆ ಕೆಲವೊಮ್ಮೆ ಅಧಿಕಾರಿಗಳ ನಿರ್ಲಕ್ಷ್ಯ ಎಂತಹ ಎಡವಟ್ಟಿಗೆ ಕಾರಣವಾಗುತ್ತೆ ಅನ್ನೋದಕ್ಕೆ ಈ ಸ್ಟೋರಿನೇ ಬೆಸ್ಟ್ ಎಕ್ಸಾಂಪಲ್. ಮಗುವನ್ನು ಶಾಲೆಗೆ ದಾಖಲು ಮಾಡಲು ಪೋಷಕರು ಕರೆತಂದಿದ್ದಾರೆ. ಆದರೆ ಈ ವೇಳೆಯಲ್ಲಿ ಮಗುವಿನ ಆಧಾರ್ ಕಾರ್ಡ್ ನೋಡಿನ ಶಾಲಾ ಶಿಕ್ಷಕರು ಬೆಚ್ಚಿಬಿದ್ದಿದ್ದಾರೆ. ಅಷ್ಟೇ ಅಲ್ಲಾ ಸರಕಾರಿ ಶಾಲೆಯ ಶಿಕ್ಷಕರು ಇದೀಗ ಶಾಲಾ ಪ್ರವೇಶಾತಿಯನ್ನೇ ನಿರಾಕರಿಸಿದ್ದಾರೆ.

ಬಿಲ್ಸಿ ತಹಸಿಲ್‌ನ ರಾಯ್‌ಪುರ ಗ್ರಾಮದ ನಿವಾಸಿಯಾಗಿರುವ ದಿನೇಶ್ ಎಂಬವರು ತನ್ನ ಮಗಳು ಆರತಿಯನ್ನು ಶಾಲೆಗೆ ದಾಖಲು ಮಾಡಲು ಕರೆ ತಂದಿದ್ದರು. ಆದರೆ ಈ ವೇಳೆಯಲ್ಲಿ ಸರಕಾರಿ ಶಾಲೆಯ ಶಿಕ್ಷಕರು ಮಗುವಿನ ಪ್ರವೇಶವನ್ನು ನಿರಾಕರಿಸಿದ್ದಾರೆ. ಅಷ್ಟಕ್ಕೂ ಕಾರಣವಾಗಿರೋದು ಆಧಾರ್ ಕಾರ್ಡ್‌ನಲ್ಲಿದ್ದ ಆಕೆಯ ಹೆಸರು. ಆಧಾರ್ ಕಾರ್ಡ್‌ನಲ್ಲಿ ಆರತಿ ಹೆಸರಿನ ಬದಲು ಮಧು ಕಾ ಪಂಚವಾ ಬಚ್ಚಾ” ಮತ್ತು “ಬೇಬಿ ಫೈವ್ ಆಫ್ ಮಧು” ಎಂದು ಬರೆಯಲಾಗಿತ್ತಯ. ಅಸಮಾನ್ಯ ಹೆಸರಿನ ಕಾರಣಕ್ಕೆ ಪ್ರವೇಶ ನಿರಾಕರಿಸಲಾಗಿದೆ ಎಂದು ಶಾಲೆಯ ಶಿಕ್ಷಕರು ತಿಳಿಸಿದ್ದಾರೆ.

ಶಾಲೆಯಲ್ಲಿನ ಏಕ್ತಾ ವರ್ಷ್ನಿ ಎಂಬ ಶಿಕ್ಷಕಿ ಪ್ರವೇಶ ನಿರಾಕರಿಸಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಕಾರ್ಡ್‌ನಲ್ಲಿ ಆಧಾರ್ ಸಂಖ್ಯೆಯೂ ಇರಲಿಲ್ಲ. ಕಾರ್ಡ್ ಸರಿ ಪಡಿಸಿಕೊಂಡು ಶಾಲೆಗೆ ಬರುವಂತೆ ಶಾಲಾ ಶಿಕ್ಷಕರು ತಿಳಿಸಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ದೀಪಾ ರಂಜನ್ ಅವರು ಪ್ರತಿಕ್ರಿಯಿಸಿದ್ದಾರೆ. ಅಂಚೆ ಕಚೇರಿ ಹಾಗೂ ಬ್ಯಾಂಕ್‌ಗಳಲ್ಲಿ ಆಧಾರ್ ಕಾರ್ಡ್ ಸಿದ್ದಪಡಿಸಲಾಗುತ್ತಿದೆ. ಈ ವೇಳೆಯಲ್ಲಿ ಅಧಿಕಾರಿಗಳು, ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಇಂತಹ ನಿರ್ಲಕ್ಷ್ಯದಲ್ಲಿ ಭಾಗಿಯಾದವರ ವಿರುದ್ದ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಪೆಟ್ರೋಲ್, ಡಿಸೇಲ್ ಬಳಿಕ ಕರೆಂಟ್ ಶಾಕ್ : ಎಷ್ಟು ಹೆಚ್ಚಾಯ್ತು ವಿದ್ಯುತ್ ದರ
ಇದನ್ನೂ ಓದಿ : ಬ್ಯಾಂಕ್ ಗ್ರಾಹಕರೇ ಎಚ್ಚರ : ಚೆಕ್ ವಹಿವಾಟಿಗೆ ಹೊಸ ನಿಯಮ ಜಾರಿ
Child denied school admission over unusual name on Aadhaar card