ಭಾನುವಾರ, ಜೂನ್ 15, 2025
HomeNationalChinook helicopters: ಭಾರತದ ವಾಯು ಸೇನೆಗೆ ಅಮೆರಿಕದ ‘ಚಿನೂಕ್’ ಚಿಂತೆ..?

Chinook helicopters: ಭಾರತದ ವಾಯು ಸೇನೆಗೆ ಅಮೆರಿಕದ ‘ಚಿನೂಕ್’ ಚಿಂತೆ..?

- Advertisement -

ವಾಷಿಂಗ್ಟನ್ : Chinook helicopters: ಸಾಲು ಸಾಲು ಅಗ್ನಿ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಅಮೆರಿಕ ಸೇನೆಯು ತನ್ನೆಲ್ಲ  ಶಕ್ತಿ ಶಾಲಿ ಚಿನೂಕ್ ಹೆಲಿಕಾಪ್ಟರ್ ಗಳ ಕಾರ್ಯಾಚರಣೆಯನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಅಮೆರಿಕ ಸೇನೆಯ ಹೆಲಿಕಾಪ್ಟರ್ ಕಾರ್ಯಾಚರಣೆ ನಿಂತಿರೋದು ಭಾರತದ ವಾಯುಸೇನೆಗೆ ತಲೆನೋವಾಗಿ ಪರಿಣಮಿಸುತ್ತಾ ಅನ್ನೋ ಪ್ರಶ್ನೆ ಹುಟ್ಟಿದೆ.

ಅಮೆರಿಕ ಸೇನೆಯಲ್ಲಿ 1960ರಿಂದಲೂ ಕಾರ್ಯ ನಿರ್ವಹಿಸುತ್ತಿರುವ ಚಿನೂಕ್ ಹೆಲಿಕಾಪ್ಟರ್ ಗಳು ಯುದ್ಧ ಭೂಮಿಯ ದೈತ್ಯ ಅಂತಾ ಕರೆಸಿಕೊಳ್ಳುತ್ತವೆ. ಆದ್ರೆ ಇತ್ತೀಚೆಗೆ ಈ ಚಿನೂಕ್ ಸರಣಿಯ ಹೆಲಿಕಾಪ್ಟರ್ ಗಳಲ್ಲಿ ಸರಣಿ ಅಗ್ನಿ ದುರಂತ ಸಂಭವಿಸ್ತಿದೆ. ಹೀಗಾಗಿ ಅಮೆರಿಕ ಸೇನೆ ಈ ಚಿನೂಕ್ ಹೆಲಿಕಾಪ್ಟರ್ ಗಳನ್ನ ಬಳಸದಂತೆ ಆದೇಶಿಸಿದೆ ಅಂತಾ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಭಾರತಕ್ಕೆ ಏಕೆ ಚಿಂತೆ: ಅಮೆರಿಕದಲ್ಲಿ ಚಿನೂಕ್ ಹೆಲಿಕಾಪ್ಟರ್ ಸೇವೆ ಸ್ಥಗಿತಗೊಳಿಸಿರೋ ವಿಚಾರ ಭಾರತಕ್ಕೆ ಒಂದು ರೀತಿ ಶಾಕ್ ನೀಡಿದೆ. ಯಾಕಂದ್ರೆ ಭಾರತೀಯ ವಾಯು ಸೇನೆಯಲ್ಲೂ ಅಮೆರಿಕ ನಿರ್ಮಾಣದ CH-47 ಸರಣಿಯ ಚಿನೂಕ್ ಹೆಲಿಕಾಪ್ಟರ್ ಗಳನ್ನ ಬಳಸಲಾಗುತ್ತಿದೆ. ಜಮ್ಮು ಕಾಶ್ಮೀರದ ಲಡಾಖ್ ಮತ್ತು ಸಿಯಾಚಿನ್ ನಂತಹ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ಸೇನಾ ಸಲಕರಣೆಗಳನ್ನ, ಯೋಧರನ್ನ, ಅತ್ಯಂತ ಭಾರವಾದ ವಸ್ತುಗಳನ್ನ ಏರ್ ಲಿಫ್ಟ್ ಮಾಡಲು ಈ ಚಿನೂಕ್ ಹೆಲಿಕಾಪ್ಟರ್ ಗಳನ್ನ ಬಳಸಲಾಗುತ್ತಿದೆ. 2019ರ ಫೆಬ್ರವರಿಯಲ್ಲಿ ಚಿನೂಕ್  ಹೆಲಿಕಾಪ್ಟರ್ ಗಳ ಮೊದಲ ಬ್ಯಾಚ್ ಅನ್ನ ಭಾರತೀಯ ವಾಯು ಸೇನೆಗೆ  ಪಡೆದುಕೊಂಡಿತ್ತು. 2020ರಲ್ಲಿ ಒಟ್ಟು 15 ಚಿನೂಕ್ ಹೆಲಿಕಾಪ್ಟರ್ ಗಳು ವಾಯುಸೇನೆಯಲ್ಲಿ ನಿಯುಕ್ತಿಗೊಂಡಿದ್ವು.

ಇದೀಗ ಅಮೆರಿಕದಲ್ಲೇ ಚಿನೂಕ್ ಹೆಲಿಕಾಪ್ಟರ್ ಗಳಲ್ಲಿ ಅಗ್ನಿ ಅನಾಹುತ ಸಂಭವಿಸ್ತಿರೋದ್ರಿಂದ ಅಲ್ಲಿನ ಸೇನೆ ಚಿನೂಕ್ ಕಾರ್ಯಾಚರಣೆಯನ್ನ ಸ್ಥಗಿತಗೊಳಿಸಿದೆ. ಅಮೆರಿಕ ಸೇನೆ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ಸದ್ಯ ಸಂಭವಿಸಿರುವ ಅಗ್ನಿ ಅನಾಹುತಗಳು ಸಣ್ಣ ಪ್ರಮಾಣದ್ದಾಗಿವೆ. ಮುಂಜಾಗ್ರತಾ ಕ್ರಮವಾಗಿ ನಾವು ಚಿನೂಕ್ ಹೆಲಿಕಾಪ್ಟರ್ ಗಳ ಸೇವೆಯನ್ನ ಬಂದ್ ಮಾಡಿದ್ದೇವೆ. ಸದ್ಯ 70 ಹೆಲಿಕಾಪ್ಟರ್ ಗಳಲ್ಲಿ ಈ ರೀತಿಯ ಸಮಸ್ಯೆ ಕಾಣಿಸಿಕೊಂಡಿದೆ ಎಂದಿದ್ದಾರೆ.

ಚಿನೂಕ್ ಹೆಲಿಕಾಪ್ಟರ್ ಗಳ ಸೇವೆ ಸ್ಥಗಿತವಾಗಿರೋದು ಅಮೆರಿಕ ಸೇನೆಗೆ ಮತ್ತೊಂದು ಸವಾಲಾಗಬಹುದು. ಯಾಕಂದ್ರೆ ಅಮೆರಿಕ ಸೇನೆಯಲ್ಲಿ 400ಕ್ಕೂ ಹೆಚ್ಚು ಚಿನೂಕ್ ಹೆಲಿಕಾಪ್ಟರ್ ಗಳು ಇವೆ. ಸೇನೆ ಹೆಚ್ಚಾಗಿ ಇದೇ ಹೆಲಿಕಾಪ್ಟರ್ ಗಳ ಮೇಲೆ ಅವಲಂಬನೆ ಆಗಿದ್ವು. ಹೀಗಾಗಿ ಇದು ಈಗ ಭಾರತಕ್ಕೂ ಸಮಸ್ಯೆ ಆಗುತ್ತಾ ಅನ್ನೋ ಪ್ರಶ್ನೆ ಮೂಡಿದೆ.

Chinook helicopters- The US Army has grounded its entire fleet of Chinook helicopters- Indian army

RELATED ARTICLES

Most Popular