ವಡೋದರಾ : Communal clash : ಗಣೇಶನ ಮೂರ್ತಿಯನ್ನು ಹೊತ್ತು ಸೂಕ್ಷ್ಮ ಪ್ರದೇಶದಲ್ಲಿ ಮೆರವಣಿಗೆ ಮಾಡುತ್ತಿದ್ದ ಸಂದರ್ಭದಲ್ಲಿ ಎರಡು ಸಮುದಾಯಗಳ ಸದಸ್ಯರ ನಡುವೆ ಪರಸ್ಪರ ಕೋಮು ಘರ್ಷಣೆ ಸಂಭವಿಸಿದ್ದು ಪರಸ್ಪರ ಕಲ್ಲು ಎಸೆದುಕೊಂಡು ಹಲ್ಲೆ ನಡೆಸಿದ ಘಟನೆಯು ಗುಜರಾತ್ನ ವಡೋದರಾ ಮೈದಾನದಲ್ಲಿ ಸಂಭವಿಸಿದೆ. ಈ ಸಂಬಂಧ ಪೊಲೀಸರು ಅಧಿಕೃತ ಮಾಹಿತಿ ನೀಡಿದ್ದಾರೆ.
ಸೋಮವಾರ ತಡರಾತ್ರಿ ಈ ಗಲಭೆ ಸಂಭವಿಸಿದ್ದು ಈ ಸಂಬಂಧ ಪೊಲೀಸರು ಈವರೆಗೆ 13 ಮಂದಿಯನ್ನು ಬಂಧಿಸಿದ್ದಾರೆ. ಕಲ್ಲು ತೂರಾಟದಲ್ಲಿ ಯಾವುದೇ ವ್ಯಕ್ತಿಗೆ ಗಾಯಗಳು ಉಂಟಾಗಿಲ್ಲ. ಗಲಭೆ ಹಾಗೂ ಕಾನೂನುಬಾಹಿರ ಸಭೆ ಆರೋಪದ ಅಡಿಯಲ್ಲಿ ಎರಡೂ ಸಮುದಾಯಕ್ಕೆ ಸೇರಿದ ಸದಸ್ಯರ ವಿರುದ್ಧ ವಡೋದರಾ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾತ್ರಿ 11:15ರ ಸುಮಾರಿಗೆ ಕೋಮು ಸೂಕ್ಷ್ಮ ಪ್ರದೇಶವಾದ ಮಾಂಡವಿಯ ಪಾಣಿಗೇಟ್ ದರ್ವಾಜಾ ಮೂಲಕ ಗಣೇಶ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ. ಇದಾದ ಬಳಿಕ ಎರಡು ಸಮುದಾಯದ ಸದಸ್ಯರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ ಎಂದು ನಗರ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಎರಡು ಸಮುದಾಯಗಳ ಜನರು ಪರಸ್ಪರ ಜಗಳವಾಡಲು ಆರಂಭಿಸಿದರು. ಎರಡೂ ಗುಂಪಿನ ಸದಸ್ಯರು ಪರಸ್ಪರ ಕಲ್ಲು ತೂರಾಟ ನಡೆಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಈ ಘಟನೆ ವೇಳೆ ಮಸೀದಿಯ ಮುಖ್ಯ ದ್ವಾರದ ಗಾಜಿಗೆ ಹಾನಿ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ : Shashi Tharoor : ಕಾಂಗ್ರೆಸ್ ಅಧ್ಯಕ್ಷ ಗದ್ದುಗೆ ಮೇಲೆ ಶಶಿ ಕಣ್ಣು..?
ಇದನ್ನೂ ಓದಿ : Fishing boat : ಭಟ್ಕಳ, ಮಂಗಳೂರಿನಲ್ಲಿ ಮೀನುಗಾರಿಕಾ ದೋಣಿ ಪಲ್ಟಿ: ಓರ್ವ ನಾಪತ್ತೆ
Communal clash in Vadodara during Ganesh procession; no one injured