ನವದೆಹಲಿ : ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಗಾಂಧಿ ಅವರ ಆಪ್ತ, ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ.

ರಾಜ್ಯಸಭಾ ಸದಸ್ಯರಾಗಿರುವ ಅಹ್ಮದ್ ಪಟೇಲ್ ಅವರ ವಿರುದ್ದ ಸಂದೇಶರ ಬಹುಕೋಟಿ ಹಗರಣದಲ್ಲಿ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ನವದೆಹಲಿಯ ನಿವಾಸದ ಮೇಲೆ ದಾಳಿಯನ್ನು ನಡೆಸಿದ್ದಾರೆ. ಸಂದೇಶರ ಹಗರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಅಹ್ಮದ್ ಪಟೇಲ್ ಅವರ ಆಪ್ತರಾಗಿರುವ ಚೇತನ್ ಮತ್ತು ನಿತಿನ್ ಸಂದೇಸಾರಾಗೆ ಸೇರಿದ ಸಂದೇಸಾರಾ ಗ್ರೂಪ್ ಅಕ್ರಮವಾಗಿ ಸುಮಾರು 5,383 ಕೋಟಿ ರೂಪಾಯಿ ಹಣ ವರ್ಗಾವಣೆಯನ್ನು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಡಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದೆ. ಸಂದೇಸರಾ ಗ್ರೂಪ್ ಮಾಲೀಕರು ಸುಮಾರು 300ಕ್ಕೂ ಅಧಿಕ ಬೇನಾಮಿ ಆಸ್ತಿಗಳನ್ನು ಹೊಂದಿದ್ದರು ಎಂದು ಅಂದಾಜಿಸಲಾ