ಬೀಜಿಂಗ್ : ಕೊರೊನಾ ವೈರಸ್ ಸೋಂಕು ಜಗತ್ತನ್ನೇ ನಡುಗಿಸಿದೆ. ಕೊರೊನಾ ಹುಟ್ಟಿಗೆ ಕಾರಣವಾಗಿದ್ದ ಚೀನಾದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ ಅಂತಾ ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತಿದೆ. ಆದ್ರೆ ಕೊರೊನಾದಿಂದ ಸಂಪೂರ್ಣ ಮುಕ್ತರಾಗೋ ಮೊದಲೇ ಆಘಾತದ ಸುದ್ದಿಯೊಂದು ಹೊರಬಿದ್ದಿದೆ.

ಚೀನಾದಲ್ಲಿ ನವೆಂಬರ್ ವೇಳೆಗೆ ಎರಡನೇ ಸುತ್ತಿನ ಕೊರೊನಾ ವೈರಸ್ ಸೋಂಕು ಹರಡುವ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ.

ವುಹಾನ್ ನಗರದಲ್ಲಿ ಕಾಣಸಿಕೊಂಡು ವಿಶ್ವದಾದ್ಯಂತ ಮರಣ ಮೃದಂಗವನ್ನೇ ಬಾರಿಸುತ್ತಿರೋ ಡೆಡ್ಲಿ ಕೊರೊನಾ ಮಹಾಮಾರಿಯ ನಿಯಂತ್ರಣಕ್ಕೆ ವಿಶ್ವವೇ ಹೋರಾಡುತ್ತಿದೆ. ಆದರೆ ಕೊರೊನಾಗೆ ಔಷಧ ಕಂಡು ಹಿಡಿಯೋದಕ್ಕೆ ಇಂದಿಗೂ ಸಾಧ್ಯವಾಗಿಲ್ಲ.

ಚೀನಾ ತಾನು ಕೊರೊನಾದಿಂದ ಸಂಪೂರ್ಣವಾಗಿ ಮುಕ್ತನಾಗಿದ್ದೇನೆ ಅಂತಾ ಹೇಳುತ್ತಿದೆ. ಆದರೆ ಚೀನಾದಲ್ಲಿ ನವೆಂಬರ್ ವೇಳೆಗೆ ಎರಡನೇ ಸುತ್ತಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳಲಿದೆಯಂತೆ ಎನ್ನುತ್ತಿದ್ದಾರೆ ಚೀನಾ ವೈದ್ಯಕೀಯ ತಜ್ಞರು.

ಶಾಂಘೈ ನಲ್ಲಿರುವ ಕೋವಿಡ್-19 ಕ್ಲಿನಿಕಲ್ ತಜ್ಞರ ತಂಡದಲ್ಲಿರುವ ಝಾಂಗ್ ವೆನ್ಹಾಂಗ್ ಮುಂದಿನ ದಿನಗಳಲ್ಲಿ ಎದುರಾಗಲಿರುವ ಕೊರೋನಾ ಸೋಂಕುಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾದ ವಿಧಾನಗಳ ಬಗ್ಗೆ ಮಾತನಾಡಿದ್ದಾರೆ.

ಚಳಿಗಾಲದಲ್ಲಿ ಕೊರೊನಾ ಸೋಂಕು ವ್ಯಾಪಿಸೋ ಸಾಧ್ಯತೆ ತೀರಾ ಹೆಚ್ಚಿದೆ. ಹೀಗಾಗಿ ಚೀನಾದಲ್ಲಿ ನವೆಂಬರ್ ತಿಂಗಳಿನಲ್ಲಿ ಚಳಿಗಾಲವಿರೋದ್ರಿಂದ ಎರಡನೇ ಸುತ್ತಿನ ಕೊರೋನಾ ಸೋಂಕು ಹರಡುವ ಸಾಧ್ಯತೆಗಳಿವೆ.

ಕೊರೋನಾ ವೈರಸ್ ನೊಂದಿಗಿನ ಚೀನಾದ ಅನುಭವದಿಂದ ಮುಂದಿನ ದಿನಗಳಲ್ಲಿ ವೈರಾಣು ಸೋಂಕನ್ನು ನಿಭಾಯಿಸಬಹುದು ಎಂದು ಝಾಂಗ್ ವೆನ್ಹಾಂಗ್ ಹೇಳಿದ್ದಾರೆ.