ಮಂಗಳೂರು : ಕರಾವಳಿಯಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಜನ ಕೊರೊನಾ ಆರ್ಭಟಕ್ಕೆ ತತ್ತರಿಸಿದ್ದರೆ, ಇದೀಗ ಮನೆ ಮನೆಗೆ ತೆರಳಿ ಮೀನು ವ್ಯಾಪಾರ ಮಾಡುತ್ತಿದ್ದಾತನಿಗೆ ಕೊರೊನಾ ಸೊಂಕು ದೃಢಪಟ್ಟಿದೆ.

ಮಂಗಳೂರಿನ ಬಂದರಿನಿಂದ ನಿತ್ಯವೂ ಮೀನನ್ನು ಖರೀದಿಸಿ ಮನೆ ಮನೆಗೆ ತೆರಳಿ ಮಾರಾಟ ಮಾಡುತ್ತಿದ್ದ ಎಕ್ಕೂರಿನ 27 ವರ್ಷದ ಯುವನಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಮೀನು ಮಾರಾಟ ಮಾಡುತ್ತಿದ್ದ ಯುವಕನಿಗೆ ಶೀತದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಯುವಕನ ಗಂಟಲು ದ್ರವದ ಪರೀಕ್ಷೆಯನ್ನು ನಡೆಸಿದಾಗ ಕೊರೊನಾ ಸೊಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮೀನು ವ್ಯಾಪಾರಿಯ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚುವ ಕಾರ್ಯವನ್ನು ಜಿಲ್ಲಾ ಆರೋಗ್ಯ ಇಲಾಖೆ ಮಾಡುತ್ತಿದೆ.

ಇದೀಗ ಯುವಕನಿಂದ ಮೀನು ಖರೀದಿ ಮಾಡಿರುವವರನ್ನೂ ಕೂಡ ಜಿಲ್ಲಾಡಳಿತ ಕ್ವಾರಂಟೈನ್ ಗೆ ಒಳಪಡಿಸುವ ಸಾಧ್ಯತೆಯಿದೆ. ಆದ್ರೆ ಮೀನು ವ್ಯಾಪಾರಿಯ ಟ್ರಾವೆಲ್ ಹಿಸ್ಟರಿಯನ್ನು ಕಲೆ ಹಾಕುವ ಕಾರ್ಯವನ್ನು ಮಾಡಲಾಗುತ್ತಿದೆ.