ಹೊಟೇಲ್ ನಲ್ಲಿ ನಾವು ದುಡ್ಡು ಕೊಟ್ಟು ನಮಗೆ ಬೇಕಾದ ತಿಂಡಿ, ಊಟ ತಿನ್ನೋದು ವಾಡಿಕೆ. ಆದರೆ ಇಲ್ಲೊಂದು ಹೊಟೇಲ್ ಮಾತ್ರ ತಿಂಡಿಯನ್ನು ಉಚಿತವಾಗಿ ಕೊಡ್ತಿರೋದಲ್ಲದೇ ತಿಂದು ಮುಗಿಸಿದ್ರೇ ನಿಮಗೆ ಮೇಲಿಂದ ಬಹುಮಾನ ರೂಪದಲ್ಲಿ ಹಣವನ್ನು ಕೊಡೋದಾಗಿ ಘೋಷಿಸಿದೆ. ಇದ್ಯಾಕೆ ಇಂಥ ಆಫರ್ ಅಂದ್ರಾ ! ಹೌದು, ಹೊಟೇಲ್ ವೊಂದು ಸ್ಪರ್ಧೆಯ ರೂಪದಲ್ಲಿ ಗ್ರಾಹಕರಿಗೆ ಇಂತಹದೊಂದು ಅವಕಾಶ ನೀಡಿದೆ. ದೋಸೆ ತಿನ್ನಿ ಬಹುಮಾನ ಗೆಲ್ಲಿ (Masala Dosa offer ) ಅಂತಿರೋ ಆಫರ್ ನ ಡಿಟೇಲ್ಸ್ ಇಲ್ಲಿದೆ.
ಗ್ರಾಹಕರನ್ನು ತನ್ನತ್ತ ಸೆಳೆಯೋ ಸಲುವಾಗಿಯೇ ದೆಹಲಿಯ ಹೊಟೇಲ್ ವೊಂದು ಮಸಾಲೆ ದೋಸೆ ತಿನ್ನುವ ಭರ್ಜರಿ ಆಫರ್ ನೀಡಿದೆ. ಈ ಹೊಟೇಲ್ ನಲ್ಲಿ ನೀವು ಮಸಾಲೆ ದೋಸೆ ತಿಂದು ಬರೋಬ್ಬರಿ 71 ಸಾವಿರ ರೂಪಾಯಿ ಕೂಡಾ ಗೆಲ್ಲಬಹುದು. ಅಯ್ಯೋ ಮಸಾಲೆ ದೋಸೆ ತಿನ್ನೋದು ಯಾವ ದೊಡ್ಡ ಸವಾಲು, ದೋಸೆ ತಿಂದ್ರೆ 71 ಸಾವಿರ ರೂಪಾಯಿ ನನ್ನದೇ ಅಂತ ತಿಳಿದುಕೊಂಡಿರುವವರು ಹೊಟೇಲ್ ಗೆ ಎಂಟ್ರಿಕೊಡೋ ಮೊದಲು ಪೂರ್ತಿ ತಿಳಿದುಕೊಳ್ಳಿ.
ಈ ಹೊಟೇಲ್ ಆಫರ್ ಮಾಡ್ತಿರೋದು ಸಾದಾ ಸೀದಾ ದೋಸೆಯಲ್ಲ. ಬದಲಾಗಿ 10 ಅಡಿ ಉದ್ದದ ಮಸಾಲೆ ದೋಸೆ. ದೆಹಲಿಯ ಉತ್ತಮ ನಗರದಲ್ಲಿರೋ ಶಕ್ತಿಸಾಗರ ಹೊಟೇಲ್ ಗ್ರಾಹಕರಿಗೆ ಇಂತಹದೊಂದು ಅತಿದೊಡ್ಡ ಮಸಾಲೆ ದೋಸೆ ತಿನ್ನೋ ಸ್ಪರ್ಧೆ ಏರ್ಪಡಿಸಿದೆ. ಬಹುತೇಕ ಗ್ರಾಹಕರು ಈ ಅಪರೂಪದ ಮಸಾಲೆ ದೋಸೆಯನ್ನು ತಿನ್ನಲು ಮುಗಿಬಿದ್ದಿದ್ದಾರಂತೆ. ಡೆಲ್ಲಿ ಟಮ್ಮಿ ಅನ್ನೋ ಟ್ವೀಟರ್ ಖಾತೆ ಈ ಉದ್ದನೆಯ ಮಸಾಲೆ ದೋಸೆ ಯನ್ನು ಶೇರ್ ಮಾಡಿದ್ದು ಈ ದೋಸೆ ತಿಂದು ಹಣ ಗೆಲ್ಲಬಹುದು ನೋಡಿ ಎಂದಿದೆ.
ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಗಿಟ್ಟಿಸಲು ಈಗೀಗ ಹೊಟೇಲ್, ರೆಸ್ಟೋರೆಂಟ್ ಗಳು ಇಂತಹ ಟೆಕ್ನಿಕ್ ಅನುಸರಿಸೋದು ಕಾಮನ್ ಆಗಿದ್ದು ದೋಸೆ ತಿಂದು ಪ್ರೈಸ್ಜ್ ಗೆದ್ದಿದ್ದು ಯಾರು ಅನ್ನೋದು ಮಾತ್ರ ಇನ್ನು ಅಪ್ಡೇಟ್ ಆಗಿಲ್ಲ. ನಿಮಗೆನಾದ್ರೂ ಈ ದೋಸೆ ತಿನ್ನೋ ಆಸೆಯಿದ್ರೆ ಹೋಟೆಲ್‌ಗೆ ಒಮ್ಮೆ ಎಂಟ್ರಿ ಕೊಡಿ.
ಇದನ್ನೂ ಓದಿ : ಒಬ್ಬಂಟಿಯಾಗಿರುವ ವ್ಯಕ್ತಿಗಳಿಗೆ ಬೇಗ ಹಲ್ಲು ಉದುರುವುದಂತೆ !; ಅಧ್ಯಯನದಲ್ಲಿ ಬಹಿರಂಗ
ಇದನ್ನೂ ಓದಿ : ಅರ್ಚಕರು ನೀಡುವ ಪ್ರಸಾದವನ್ನಷ್ಟೇ ತಿನ್ನುವ ಸಸ್ಯಾಹಾರಿ ಮೊಸಳೆ ಕುರಿತು ಕೇಳಿದ್ದೀರಾ!
( Delhi Hotel Offering Eatery is You Rs 71,000 For Eating a 10 foot long Masala Dosa)