ನವದೆಹಲಿ : ದಸರಾ ಕಳೆಯುತ್ತಿದ್ದಂತೆಯೇ ದೀಪಾವಳಿಯ ಸಂಭ್ರಮ ಆರಂಭವಾಗುತ್ತದೆ. ಈಗ ಸರಕಾರಿ ನೌಕರರಿಗೆ (Government Employee) ಸರಕಾರ ದೀಪಾವಳಿ ಬೋನಸ್ ಯಾವಾಗ ದೊರೆಯಲಿದೆ ಅನ್ನೂ ಚರ್ಚೆ ಶುರುವಾಗಿದೆ. ಈ ನಡುವಲ್ಲೇ ಕೇಂದ್ರ ಸರಕಾರ ದೀಪಾವಳಿಗೆ (Diwali) ಭರ್ಜರಿ ಆಫರ್ ಘೋಷಣೆ ಮಾಡಿದೆ. ಇದರಿಂದಾಗಿ ನೌಕರರಿಗೆ ಡಿಎ ಹೆಚ್ಚಳದ ಜೊತೆಗೆ ದೀಪಾವಳಿ ಬೋನಸ್ ಸಿಗಲಿದೆ.
ಈ ಬಾರಿಯ ದೀಪಾವಳಿ ಬೋನಸ್ (Diwali Bonus) ನಿಂದಾಗಿ ಉದ್ಯೋಗಿಗಳು ಕರಿಷ್ಠ 7000 ರೂಪಾಯಿ ವರೆಗೆ ಬೋನಸ್ ಮಾಡಬಹುದಾಗಿದೆ. ಈ ಬೋನಸ್ ಗ್ರೂಪ್ ಸಿ ಹಾಗೂ ನಾನ್ – ಗಜೆಟೆಡ್ ಉದ್ಯೋಗಿಗಳಿಗೆ ಕೇಂದ್ರ ಸರಕಾರದಿಂದ ( Central Government)ಭರ್ಜರಿ ದೀಪಾವಳಿ ಬೋನಸ್ ಪಡೆಯಲಿದ್ದಾರೆ.

ಕೇಂದ್ರ ಸರ್ಕಾರ ನೌಕರರಿಗೆ ದೀಪಾವಳಿ ಬೋನಸ್ ನೀಡಿದೆ. ಉದ್ಯೋಗಿಗಳು ಗರಿಷ್ಠ ರೂ 7000 ವರೆಗೆ ಬೋನಸ್ ಪಡೆಯುತ್ತಾರೆ. ಗ್ರೂಪ್ ಸಿ ಮತ್ತು ನಾನ್-ಗೆಜೆಟೆಡ್ ಗ್ರೂಪ್ ಬಿ ಬ್ಯಾಂಕ್ ಉದ್ಯೋಗಿಗಳು ಕೇಂದ್ರ ಸರ್ಕಾರದಿಂದ ದೀಪಾವಳಿ ಬೋನಸ್ ಪಡೆಯುತ್ತಾರೆ. ಇದರಿಂದಾಗಿ ನೌಕರರಿಗೆ ಹಬ್ಬದ ಸಂಭ್ರಮ ಹೆಚ್ಚಲಿದೆ.
ಆದರೆ ಎಲ್ಲಾ ನೌಕರರಿಗೂ ಈ ಬೋನಸ್ ಲಭ್ಯವಾಗುವುದಿಲ್ಲ. ಕೇಂದ್ರ ಹಣಕಾಸು ಇಲಾಖೆ ( Central Finance department) ಬೋನಸ್ ಪ್ರಕಟಿಸಿದ್ದು, 31ನೇ ಮಾರ್ಚ್ 2021 ರಿಂದ ಕರ್ತವ್ಯ ನಿರ್ವಹಿಸುತ್ತಿರುವ ನೌಕರರರು ಮಾತ್ರವೇ ದೀಪಾವಳಿ ಬೋನಸ್‌ಗೆ ಅರ್ಹರಾಗಿದ್ದಾರೆ. ಅದ್ರಲ್ಲಿ ಡಿ ಗ್ರೂಪ್ ಮತ್ತು ಗುತ್ತಿಗೆ ನೌಕರರಿಗೂ ಕೂಡ ಬೋನಸ್ ದೊರೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರಗ್ರೂಪ್ ಸಿ, ಡಿ ಮತ್ತು ಗುತ್ತಿಗೆ ನೌಕರರಿಗೆ ಪ್ರತೀ ವರ್ಷವೂ ದೀಪಾವಳಿ ಬೋನಸ್ ( Diwali Bonus) ಪ್ರಕಟಿಸುತ್ತಿದೆ. ಇದರ ಬೆನ್ನಲ್ಲೇ ಕೇಂದ್ರ ಸರಕಾರ ಶೀಘ್ರದಲ್ಲಿಯೇ ಗ್ಯಾಚ್ಯುಟಿ ಭತ್ಯೆಯನ್ನು ಪ್ರಕಟಿಸುವ ಸಾಧ್ಯತೆಯಿದೆ. ಜೊತೆಗೆ ವರ್ಷಂಪ್ರತಿ ಸರಕಾರಿ ನೌಕರರು ತುಟ್ಟುಭತ್ಯೆಯನ್ನು ಪಡೆಯುತ್ತಿದ್ದಾರೆ.

ಕೇಂದ್ರ ಸರಕಾರಿ ನೌಕರರಿಗೆ ಗುಡ್‌ನ್ಯೂಸ್ ಶೇ.4 ತುಟ್ಟಿಭತ್ಯೆ ಹೆಚ್ಚಳ
ಕೇಂದ್ರ ಸರಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ (ಡಿಎ) ( Dearness Allowance) ಮತ್ತು ಡಿಯರ್‌ನೆಸ್ ರಿಲೀಫ್ (ಡಿಆರ್) ಶೇ 4 ರಷ್ಟು ಹೆಚ್ಚಳ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆಯನು ನೀಡಿದೆ. ಇದರಿಂದಾಗಿ ಸರಕಾರಿ ನೌಕರರಿಗೆ ೭ನೇ ವೇತನ ಆಯೋಗದ ಅನ್ವಯ ಡಿಎ ಹೆಚ್ಚಳವಾಗಲಿದೆ.
ಕೇಂದ್ರ ಸರಕಾರ ಡಿಎ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಹಾಲಿ ಇರುವ ಡಿಎ ಶೇ.42ರಿಂದ ಶೇ.46ಕ್ಕೆ ಏರಿಕೆಯಾಗಲಿದೆ. ಡಿಎ ಹೆಚ್ಚಳದಿಂದಾಗಿ ಸರಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಅನುಕೂಲವಾಗಲಿದೆ.ಸುಮಾರು 47 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ.
ಸದ್ಯ ಡಿಎ ಹೆಚ್ಚಳವು ಜುಲೈ 1, 2023 ರಿಂದ ಜಾರಿಗೆ ಬರಲಿದೆ. ಇದರಿಂದಾಗಿ ಕೇಂದ್ರ ಸರಕಾರಿ ನೌಕರರು ಜುಲೈನಿಂದ ಅಕ್ಟೋಬರ್ ತಿಂಗಳ ನಡುವಿನ ಬಾಕಿಯನ್ನು ಪಡೆಯಲಿದ್ದಾರೆ. ಅಲ್ಲದೇ ನವೆಂಬರ್ ತಿಂಗಳಿನಿಂದ ಹೆಚ್ಚಳದ ವೇತನವನ್ನು ಪಡೆಯಲಿದ್ದಾರೆ. ಸದ್ಯ ೭ನೇ ವೇತನ ಆಯೋಗದ ಶಿಫಾರಸ್ಸಿನ ಮೇರೆಗೆ ಡಿಎ ಹೆಚ್ಚಳವನ್ನು ಮಾಡಲಾಗಿದೆ.
ಕೇಂದ್ರ ಸರಕಾರಿ ನೌಕರರ ಬೇಡಿಕೆಯನ್ನು ಕೇಂದ್ರ ಸರಕಾರ ಈಡೇರಿಕೆ ಮಾಡಿದೆ. ಕೇಂದ್ರ ಸರಕಾರದ ಜೊತೆ ಜೊತೆಗೆ ಕೆಲವು ರಾಜ್ಯ ಸರಕಾರಗಳು ಕೂಡ ದಸರಾ ಹಬ್ಬದ ಹೊತ್ತಲ್ಲೇ ತುಟ್ಟಿಭತ್ಯೆ ಹೆಚ್ಚಳ ಮಾಡುವ ಮೂಲಕ ಹಬ್ಬದ ಗಿಫ್ಟ್ ಕೊಟ್ಟಿವೆ.