ಮಂಗಳವಾರ, ಏಪ್ರಿಲ್ 29, 2025
HomeNationalDroupadi Murmu takes oath : ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣ ವಚನ

Droupadi Murmu takes oath : ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣ ವಚನ

- Advertisement -

ದೆಹಲಿ : Droupadi Murmu takes oath :ಬುಡಕಟ್ಟು ಸಮುದಾಯದ ಮಹಿಳೆ ದ್ರೌಪದಿ ಮುರ್ಮು ಇಂದು ದೇಶದ 15ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ರಾಷ್ಟ್ರಪತಿ ಮುರ್ಮುರನ್ನು ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೆಂಟ್ರಲ್​ ಹಾಲ್​ಗೆ ಬರಮಾಡಿಕೊಮಡರು. ಸುಪ್ರೀಂ ಕೋರ್ಟ್ ಮುಖ್ಯ ನಾಯಮೂರ್ತಿ ಎನ್​.ವಿ ರಮಣ ದ್ರೌಪದಿ ಮುರ್ಮುರಿಗೆ ಪ್ರಮಾಣ ವಚನ ಭೋದಿಸಿದರು.


ಪ್ರಮಾಣ ವಚನ ಬೋಧನೆ ಸಂದರ್ಭದಲ್ಲಿ 21 ಬಂದೂಕುಗಳ ಗೌರವ ವಂದನೆಯನ್ನು ಸಲ್ಲಿಸಲಾಯ್ತು. ಪ್ರಮಾಣ ವಚನ ಬೋಧನೆ ಸಂದರ್ಭದಲ್ಲಿ ದ್ರೌಪದಿ ಮುರ್ಮು ದೇಶದಲ್ಲಿ ಅಂತರ್ಗತ ಹಾಗೂ ತ್ವರಿತ ಬೆಳವಣಿಗೆಗಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಭಾರತವು ತನ್ನ 75ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ ಅಮೃತ ಕಾಲವನ್ನು ಆಚರಿಸುತ್ತಿದೆ. ಪ್ರಸ್ತುತ ಭಾರತದವು ಹೊಸ ಚಿಂತನೆಗಳನ್ನು ಹೊಂದಿದೆ. ನಾವು ಏಕ ಭಾರತ್​ – ಶ್ರೇಷ್ಢ ಭಾರತ್​ ನಿರ್ಮಾಣ ಮಾಡುತ್ತಿದ್ದೇವೆ ಎಂದು ಹೇಳಿದರು.


ರಾಷ್ಟ್ರಪತಿ ಚುನಾವಣೆಯಲ್ಲಿ ಮುರ್ಮು 6,76,803 ಮೌಲ್ಯದೊಂದಿಗೆ 2,824 ಮತಗಳನ್ನು ಪಡೆದರೆ, ವಿಪಕ್ಷದ ಅಭ್ಯರ್ಥಿ ಹಾಗೂ ಎದುರಾಳಿ ಯಶವಂತ್ ಸಿನ್ಹಾ 3,80,177 ಮೌಲ್ಯದೊಂದಿಗೆ 1,877 ಮತಗಳನ್ನು ಪಡೆದರು. ಜುಲೈ 18 ರಂದು ನಡೆದ ಮತದಾನದಲ್ಲಿ ಒಟ್ಟು 4,809 ಸಂಸದರು ಮತ್ತು ಶಾಸಕರು ಮತ ಚಲಾಯಿಸಿದ್ದರು.


ದ್ರೌಪದಿ ಮುರ್ಮು ಹಿನ್ನೆಲೆ :
ಜೂನ್ 30, 1958 ರಂದು ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಉಪರಬೇಡ ಗ್ರಾಮದಲ್ಲಿ ಸಂತಾಲಿ ಬುಡಕಟ್ಟು ಕುಟುಂಬದಲ್ಲಿ ಜನಿಸಿದ ಮುರ್ಮು ಭುವನೇಶ್ವರದಲ್ಲಿ ಶಿಕ್ಷಣ ಪಡೆದರು ಹಾಗೂ 1979 ರಿಂದ 1983 ರವರೆಗೆ ರಾಜ್ಯ ನೀರಾವರಿ ಮತ್ತು ವಿದ್ಯುತ್ ಇಲಾಖೆಯಲ್ಲಿ ಕಿರಿಯ ಸಹಾಯಕರಾಗಿ ಕೆಲಸ ಮಾಡಿದರು. ಈ ಅಲ್ಪಾವಧಿಯಲ್ಲಿ ಗುಮಾಸ್ತರಾಗಿ, ಅವರು 1997 ರವರೆಗೆ ರೈರಂಗಪುರದ ಶ್ರೀ ಅರಬಿಂದೋ ಸಮಗ್ರ ಶಿಕ್ಷಣ ಕೇಂದ್ರದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು.


ಮುರ್ಮು ಒಡಿಶಾದ ಬಿಜೆಪಿ ಮತ್ತು ಬಿಜು ಜನತಾ ದಳದ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಗಳ ಪರಿಷತ್ತಿನ ಸದಸ್ಯರಾದರು, ಮೊದಲು ಮಾರ್ಚ್ 2000 ರಿಂದ ಆಗಸ್ಟ್ 2022 ರವರೆಗೆ ವಾಣಿಜ್ಯ ಮತ್ತು ಸಾರಿಗೆಯ ಸ್ವತಂತ್ರ ಉಸ್ತುವಾರಿಯೊಂದಿಗೆ ರಾಜ್ಯ ಸಚಿವರಾದರು ಮತ್ತು ನಂತರ ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲ ಅಭಿವೃದ್ಧಿ ಸಚಿವೆಯಾದರು. ಆಗಸ್ಟ್ 2002 ರಿಂದ ಮೇ 2004. 2000 ಮತ್ತು 2004 ರಲ್ಲಿ ರಾಯರಂಗಪುರ ವಿಧಾನಸಭಾ ಕ್ಷೇತ್ರದ ಶಾಸಕಿ, ಮತ್ತು 2007 ರಲ್ಲಿ ಒಡಿಶಾ ವಿಧಾನಸಭೆಯಿಂದ ಅತ್ಯುತ್ತಮ ಶಾಸಕಿ ನೀಲಕಂಠ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ .


2015 ರಲ್ಲಿ, ಮುರ್ಮು ಜಾರ್ಖಂಡ್‌ನ ಮೊದಲ ಮಹಿಳಾ ಗವರ್ನರ್ ಆದರು. ಒಡಿಶಾದಿಂದ ರಾಜ್ಯವೊಂದರ ಗವರ್ನರ್ ಆಗಿ ನೇಮಕಗೊಂಡ ಮೊದಲ ಮಹಿಳಾ ಬುಡಕಟ್ಟು ನಾಯಕಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಮುರ್ಮು 2017ರಲ್ಲಿಯೂ ರಾಷ್ಟ್ರಪತಿ ಸ್ಥಾನಕ್ಕೆ ಶಾರ್ಟ್​ಲಿಸ್ಟ್​ ಆಗಿದ್ದರು ಎಂದು ವರದಿಗಳು ಹೇಳಿವೆ. ಆದರೆ ಈ ಬಾರಿ ಅವರು ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.


ರಾಜಕೀಯ ಪ್ರಯಾಣದ ನಡುವೆಯೇ ಮುರ್ಮು ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಕಂಡಿದ್ದಾರೆ. ಮುರ್ಮು ಪತಿ ಶ್ಯಾಮ್​​ ಚರಣ್​ ಮುರ್ಮು 2014ರಲ್ಲಿ ನಿಧನರಾದರು. ಕೇವಲ 4 ವರ್ಷಗಳ ಅವಧಿಯಲ್ಲಿ ಅವರು ತಮ್ಮ ಇಬ್ಬರು ಪುತ್ರರನ್ನು ಕಳೆದುಕೊಂಡಿದ್ದಾರೆ.


ಮುರ್ಮು ತಮ್ಮ ಸಂಪೂರ್ಣ ಜೀವನವನ್ನು ಸಮಾಜಸೇವೆಗೆ ಮುಡಿಪಾಗಿ ಇಟ್ಟಿದ್ದಾರೆ. ದೀನ ದಲಿತರು, ಬಡವರು ಹಾಗೂ ಹಿಂದೂಳಿದ ವರ್ಗಗಳನ್ನು ಸಬಲೀಕರಣಗೊಳಿಸಿದ್ದಾರೆ.ಬುಡಕಟ್ಟು ಜನಾಂಗದವರಲ್ಲಿ ಶಿಕ್ಷಣ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ಇದನ್ನು ಓದಿ : Bus Accident 8 Killed : ಡಬ್ಬಲ್‌ ಡೆಕ್ಕರ್‌ ಬಸ್‌ ಮುಖಾಮುಖಿ ಢಿಕ್ಕಿ : 8 ಮಂದಿ ಸಾವು, ಹಲವರು ಗಂಭೀರ

ಇದನ್ನೂ ಓದಿ : terrorist arrested : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶಂಕಿತ ಉಗ್ರ ಅರೆಸ್ಟ್​

Droupadi Murmu takes oath as India’s 15th President

RELATED ARTICLES

Most Popular