ಸೋಮವಾರ, ಜೂನ್ 16, 2025
HomeNationalJapan : ಜಪಾನ್ ನಲ್ಲಿ ಮತ್ತೆ ಪ್ರಬಲ ಭೂಕಂಪ ; ರಿಕ್ಟರ್ ಮಾಪಕದಲ್ಲಿ 5.2...

Japan : ಜಪಾನ್ ನಲ್ಲಿ ಮತ್ತೆ ಪ್ರಬಲ ಭೂಕಂಪ ; ರಿಕ್ಟರ್ ಮಾಪಕದಲ್ಲಿ 5.2 ರಷ್ಟು ತೀವ್ರತೆ ದಾಖಲು

- Advertisement -

ಟೋಕಿಯೋ : ಜಪಾನ್‌ನಲ್ಲಿಂದು ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ 5.2 ರಷ್ಟು ತೀವ್ರತೆ ದಾಖಲಾಗಿದ್ದು, ನಷ್ಟ ಹಾಗೂ ಸಾವು ನೋವುಗಳ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಜಪಾನ್‌ ನಲ್ಲಿ ಭೂಕಂಪ ಸರ್ವೆ ಸಾಮಾನ್ಯ. ಅಲ್ಲಿನ ಜನರು ಭೂಕಂಪದ ಭಯದಲ್ಲಿಯೇ ಬದುಕುತ್ತಿದ್ದಾರೆ. ಇಂದು ಬೆಳಗ್ಗೆ 11.24 ರ ಸುಮಾರಿಗೆ ಜಪಾನ್ ನ ಫುಕುಶಿಮಾ ಪ್ರಿಫೆಕ್ಚರ್ ನಲ್ಲಿ ಭೂಕಂಪ ಸಂಭವಿಸಿದೆ. ಅಲ್ಲದೇ ಭೂಕಂಪನ ಸಂಭವಿಸುವ ಮೊದಲು ಯಾವುದೇ ರೀತಿಯ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಪಾನ್ ಹವಾಮಾನ ಸಂಸ್ಥೆ (ಜೆಎಂಎ) ಪ್ರಕಾರ, ಟೆಂಬ್ಲೋರ್ ಬೆಳಿಗ್ಗೆ 11.24 ಕ್ಕೆ ಭೂಕಂಪನ ಸಂಭವಿಸಿದ್ದು, ಕೇಂದ್ರಬಿಂದು ಉತ್ತರಕ್ಕೆ 37.6 ಡಿಗ್ರಿ ಅಕ್ಷಾಂಶ ಮತ್ತು ಪೂರ್ವಕ್ಕೆ 141.7 ಡಿಗ್ರಿ ರೇಖಾಂಶ ಮತ್ತು 60 ಕಿ.ಮೀ ಆಳದಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ.

ಜಪಾನ್ ನ ಪುಕುಶಿಮಾ ಪ್ರಿಫೆಕ್ಟರ್ ನಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 5.2 ರಷ್ಟು ತೀವ್ರತೆ ದಾಖಲಾಗಿದೆ ಎಂದು ವರದಿಯಾಗಿದೆ. ಈ ಭೂಕಂಪನದ ನಡುವಿನಲ್ಲೂ ಜೀವನವನ್ನು ಸಾಗಿಸುತ್ತಿರುವ ಜಪಾನಿನ ಜನರ ದೈರ್ಯಕ್ಕೆ ಮೆಚ್ಚಲೇಬೇಕು.

ಇದನ್ನೂ ಓದಿ : Afghanistan : 150 ಭಾರತೀಯರು ಸುರಕ್ಷಿತ : ಪಾಸ್‌ಪೋರ್ಟ್‌ ಪರಿಶೀಲಿಸಿದ ತಾಲಿಬಾನಿಗಳು

ಇದನ್ನೂ ಓದಿ : Taliban: ನಿರೂಪಕಿ ಮೇಲೆ ತಾಲಿಬಾನ್ ದೌರ್ಜನ್ಯ: ಮಹಿಳೆ ನೀನು ಮನೆಗೆ ತೆರಳು ಎಂದ ಅಧಿಕಾರಿಗಳು!

RELATED ARTICLES

Most Popular