ನವದೆಹಲಿ : ಕೊರೊನಾ ಬಿಕ್ಕಟ್ಟಿನ ಮಧ್ಯೆ, ಜಿಡಿಪಿ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಮೊದಲ ಬಾರಿಗೆ ಶುಭ ಸುದ್ದಿ ಬಂದಿದೆ. ಭಾರತೀಯ ಆರ್ಥಿಕತೆಯ ಮತ್ತೆ ಏರು ಹಾದಿಯಲ್ಲಿದ್ದು, 2021-22ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಉತ್ತಮ ಜಿಡಿಪಿ ಅಂಕಿಅಂಶಗಳು ಹೊರಬಂದಿವೆ.
ವಾಸ್ತವವಾಗಿ, ಕೇಂದ್ರ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಜಿಡಿಪಿ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಮೊದಲ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನ (GDP) ಬೆಳವಣಿಗೆ ದರವು 20.1 ಶೇಕಡಾ ದಾಖಲೆಯಾಗಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ, 23.9 ಶೇಕಡಾ ಬೆಳವಣಿಗೆ ದರ ಋಣಾತ್ಮಕವಾಗಿತ್ತು. ಯಾವುದೇ ದೇಶದ ಆರ್ಥಿಕ ಆರೋಗ್ಯವನ್ನು ಅಳೆಯಲು ಜಿಡಿಪಿ ಅತ್ಯಂತ ನಿಖರವಾದ ಅಳತೆಯಾಗಿದೆ.
ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್ ಕೊಟ್ಟ ಪ್ರಧಾನಿ ಮೋದಿ : ಅನ್ನದಾತರ ಖಾತೆಗಳಿಗೆ 19 ಸಾವಿರ ಕೋಟಿ
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ.18.5 ರ ದರದಲ್ಲಿ ಏರಿಕೆ ಕಂಡಿದೆ ಎಂದು ಈ ಮೊದಲು ಎಸ್‌ಬಿಐನ ಇಕೋವರ್ಪ್ ಸಂಶೋಧನಾ ವರದಿ ಅಂದಾಜಿಸಿತ್ತು. ಅದೇ ಸಮಯದಲ್ಲಿ, ಆರ್ಬಿಐ 2021 ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯನ್ನು 21.4 ಶೇಕಡ ಅಂದಾಜಿಸಿದೆ. ಜಿಡಿಪಿಯಲ್ಲಿ ತೀವ್ರ ಚೇತರಿಕೆಯೊಂದಿಗೆ, ಆರ್ಥಿಕತೆಯು ಮತ್ತೆ ಹಳಿಗೆ ಬರುವ ಲಕ್ಷಣಗಳಿವೆ.
(India's economy: GDP rises 20.1%)