ಸೋಮವಾರ, ಏಪ್ರಿಲ್ 28, 2025
HomeNationalFacebook India: ಫೇಸ್ ಬುಕ್ ಇಂಡಿಯಾ ಮುಖ್ಯಸ್ಥನ ಸ್ಥಾನ ತೊರೆದ ಅಜಿತ್ ಮೋಹನ್; ಇಲ್ಲಿದೆ ಅಸಲಿ...

Facebook India: ಫೇಸ್ ಬುಕ್ ಇಂಡಿಯಾ ಮುಖ್ಯಸ್ಥನ ಸ್ಥಾನ ತೊರೆದ ಅಜಿತ್ ಮೋಹನ್; ಇಲ್ಲಿದೆ ಅಸಲಿ ಕಾರಣ

- Advertisement -

ನವದೆಹಲಿ: Facebook India: ಟ್ವಿಟರ್ ಸಿಇಒ ಆಗಿದ್ದ, ಭಾರತ ಮೂಲದ ಪರಾಲ್ ಅಗ್ರವಾಲ್ ಅವರನ್ನು ವಜಾಗೊಳಿಸಿದ ಬೆನ್ನಲ್ಲೇ ಭಾರತದ ಮತ್ತೊಬ್ಬರು ಸ್ಥಾನ ತೊರೆದಿದ್ದಾರೆ. ಫೇಸ್ ಬುಕ್ ಇಂಡಿಯಾ(ಮೆಟಾ) ಮುಖ್ಯಸ್ಥ ಸ್ಥಾನಕ್ಕೆ ಅಜಿತ್ ಮೋಹನ್ ಅವರು ಏಕಾಏಕಿ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ: Realme 10 4G : ಸದ್ಯದಲ್ಲೇ ಬಿಡುಗಡೆಯಾಗಲಿದೆ ರಿಯಲ್‌ಮಿ 10 4G ಫೋನ್‌; ಒಂದೇ ಸಮಯದಲ್ಲಿ 18 ಅಪ್ಲಿಕೇಶನ್‌ ರನ್‌ ಮಾಡಬಹುದಂತೆ…

ಮೂಲಗಳ ಪ್ರಕಾರ, ಅಜಿತ್ ಮೋಹನ್ ಅವರು ಸಾಮಾಜಿಕ ಜಾಲತಾಣ ಸ್ನ್ಯಾಪ್ ಚಾಟ್ ಗೆ ಸೇರಲಿದ್ದಾರೆ ಎನ್ನಲಾಗಿದೆ. ಸ್ನ್ಯಾಪ್ ಚಾಟ್‍ನ ಎಪಿಎಸಿ ಬ್ಯುಸಿನೆಸ್ ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಜಿತ್ ಮೋಹನ್ ಅವರು ಮೆಟಾ ಇಂಡಿಯಾ ಮುಖ್ಯಸ್ಥ ಸ್ಥಾನ ತೊರೆಯಲು ನಿರ್ಧರಿಸಿದ್ದಾರೆ. ಕಂಪೆನಿ ಹೊರಗೆ ಅವರಿಗೆ ಮತ್ತೊಂದು ಅವಕಾಶ ಸಿಕ್ಕ ಕಾರಣ ರಾಜೀನಾಮೆ ನೀಡಿದ್ದಾರೆ ಎಂದು ಮೆಟಾ ಗ್ಲೋಬಲ್ ಬ್ಯುಸಿನೆಸ್ ಗ್ರೂಪ್ ಉಪಾಧ್ಯಕ್ಷ ನಿಕೋಲಾ ಮಂಡೇಲ್ ಸೋನ್ ತಿಳಿಸಿದ್ದಾರೆ.

ಕಳೆದ 4 ವರ್ಷಗಳಿಂದ ಅಜಿತ್ ಮೋಹನ್ ಅವರು ಮೆಟಾದಲ್ಲಿ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಹೀಗಾಗಿ ಮೆಟಾ ಭಾರತದ ಕೋಟ್ಯಂತರ ಜನರನ್ನು ತಲುಪಲು ಸಾಧ್ಯವಾಗಿದೆ. ಮೆಟಾ ಸಂಸ್ಥೆಗೆ ಅಜಿತ್ ಮೋಹನ್ ಅವರು ನೀಡಿರುವ ಕೊಡುಗೆ ಅಪಾರವಾದುದು. ಮುಂದಿನ ದಿನಗಳಲ್ಲಿ ಅವರಿಗೆ ಒಳಿತಾಗಲಿ ಎಂದು ನಿಕೋಲಾ ಮಂಡೇಲ್ ಸೋನ್ ಶುಭಹಾರೈಸಿದ್ದಾರೆ.

ಇದನ್ನೂ ಓದಿ: Meditation: ಪ್ರತಿದಿನ ವಿದ್ಯಾರ್ಥಿಗಳಿಂದ ಕಡ್ಡಾಯವಾಗಿ 10 ನಿಮಿಷ ಧ್ಯಾನ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳಿ: ಸಚಿವ ಬಿ.ಸಿ.ನಾಗೇಶ್

2019ರ ಜನವರಿಯಲ್ಲಿ ಅಜಿತ್ ಮೋಹನ್ ಅವರು ಮೆಟಾ ಇಂಡಿಯಾ ಸಂಸ್ಥೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಸೇರ್ಪಡೆಗೊಂಡಿದ್ದರು. ಅವರ ಅಧಿಕಾರವಧಿಯಲ್ಲಿ ಅಜಿತ್ ಅವರು ಫೇಸ್ ಬುಕ್ ಇಂಡಿಯಾಕ್ಕೆ ವಾಟ್ಸಪ್ ಮತ್ತು ಇನ್ಸ್ಟಾಗ್ರಾಮ್ ಎರಡನ್ನು ಕೊಡುಗೆಯನ್ನು ನೀಡಿದ್ದರು. ಇವುಗಳು 200 ಮಿಲಿಯನ್ ಬಳಕೆದಾರರನ್ನು ಹೊಂದಿವೆ. ಮೆಟಾ ಸೇರುವ ಮೊದಲು ಅಜಿತ್ ಮೋಹನ್ ಅವರು 4 ವರ್ಷಗಳ ಕಾಲ ಸ್ಟಾರ್ ಇಂಡಿಯಾದ ವಿಡಿಯೋ ಸ್ಕ್ರೀಮಿಂಗ್ ಸೇವೆ ಹಾಟ್ ಸ್ಟಾರ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆಯನ್ನು ಸಲ್ಲಿಸಿದ್ದರು.

Facebook Indiafacebook-india-facebook-india-head-ajit-mohan-quits-to-join-snap-chat

RELATED ARTICLES

Most Popular