ಲಕ್ನೋ : (Fake Blood Platelets) ಡೆಂಗ್ಯೂ ರೋಗಿಗೆ ರಕ್ತದ ಪ್ಲಾಸ್ಮಾ ಬದಲು ಮೂಸಂಬಿ ಜ್ಯೂಸ್ ಕುಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರಕಾರ ತನಿಖೆಗೆ ಆದೇಶಿಸಿದ್ದು, ಆಸ್ಪತ್ರೆಯ ಆಡಳಿತ ಮಂಡಳಿಗೆ ಇದೀಗ ಬುಲ್ಡೋಜರ್ ಭಯ ಶುರುವಾಗಿದೆ.
ಪ್ರಯಾಗ್ ರಾಜ್ ನ ಆಸ್ಪತ್ರೆಯೊಂದರಲ್ಲಿ ಡೆಂಗ್ಯೂ ರೋಗಿಗೆ ರಕ್ತದ ಬದಲಿಗೆ ಮುಸುಂಬಿ ಜ್ಯೂಸ್(Fake Blood Platelets ) ಕುಡಿಸಿದ ಹಿನ್ನಲೆಯಲ್ಲಿ ಆ ವ್ಯಕ್ತಿ ಸಾವನ್ನಪ್ಪಿದ್ದಾರೆ . ಇದರ ಕುರಿತು ಮೃತ ವ್ಯಕ್ತಿಯ ಕುಟುಂಬಸ್ಥರ ಆರೋಪಸದ ಹಿನ್ನಲೆಯಲ್ಲಿ ಸರಕಾರ ತನಿಖೆಗೆ ಆದೇಶಿಸಿತ್ತು.ಈ ವಂಚನೆಯ ಕುರಿತಾಗಿ ಪ್ರತಿಯೊಬ್ಬರು ಆರೋಪಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲು ತನಿಖಾ ತಂಡವನ್ನು ರಚಿಸಲಾಗಿತ್ತು.ತನಿಖೆ ನಡೆಯುವ ವೇಳೆಯಲ್ಲಿ ಪ್ರಯಾಗ್‌ರಾಜ್ ನ ಈ ಖಾಸಗಿ ಆಸ್ಪತ್ರೆಯು ಅನಧೀಕೃತವಾಗಿ ನಿರ್ಮಿಸಲ್ಪಟ್ಟಿದೆ ಎಂಬ ವಿಚಾರ ತಿಳಿದು ಬಂದಿದೆ.
ಇದನ್ನೂ ಓದಿ : Congress President Mallikarjuna Kharge : ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ
ಇದನ್ನೂ ಓದಿ : Congress President Mallikarjuna Kharge : ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಇಂದು ಅಧಿಕಾರ ಸ್ವೀಕಾರ
ಕಳೆದ ವಾರ 32 ವರ್ಷದ ಡೆಂಗ್ಯೂ ರೋಗಿಯೊಬ್ಬರಿಗೆ ರಕ್ತದ ಬದಲಿಗೆ ಮುಸುಂಬಿ ಜ್ಯೂಸ್ ಕುಡಿಸಿ ಆ ವ್ಯಕ್ತಿ ಸಾವನ್ನಪ್ಪಿದ್ದರು . ಈ ಹಿನ್ನಲೆಯಲ್ಲಿ ಇದರ ಕುರಿತಾಗಿ ತನಿಖೆ ಆರಂಭವಾಗಿದ್ದು , 10 ಮಂದಿ ಆರೋಪಿಗಳನ್ನು ಬಂದಿಸಲಾಗಿತ್ತು. ಈ ಘಟನೆಯ ಬಳಿಕ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದ್ದು, ಅಲ್ಲಿ ಯಾವುದೇ ರೋಗಿಗಳು ಇಲ್ಲ. ಇದಾದ ಬಳಿಕ ತನಿಖಾ ತಂಡವನ್ನು ರಚಿಸಿದ್ದು, ತನಿಖೆಯ ಬಳಿಕ ಯಾವುದೇ ಅನುಮತಿಯನ್ನು ಪಡೆಯದೆ ಅನಧೀಕೃತವಾಗಿ ಆಸ್ಪತ್ರೆಯನ್ನು ನಿರ್ಮಿಸಿರುವುದು ತಿಳಿದು ಬಂದಿದೆ. ಈ ಘಟನಾ ಹಿನ್ನಲೆಯಲ್ಲಿ ಅನಧೀಕೃತವಾಗಿ ನಿರ್ಮಿಸಿದ ಖಾಸಗಿ ಆಸ್ಪತ್ರೆಯನ್ನು ನೆಲಸಮ ಮಾಡುವುದಾಗಿ ಸರ್ಕಾರ ನೋಟಿಸ್ ಕಳಿಸಿದೆ. ಅನುಮತಿ ಇಲ್ಲದೆ ನಿರ್ಮಿಸಿದ ಆಸ್ಪತ್ರೆಯನ್ನು ಶುಕ್ರವಾರದೊಳಗಾಗಿ ತೆರವು ಮಾಡಬೇಕು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.ಅನಧೀಕೃತವಾಗಿ ನಿರ್ಮಿಸಿದ ಆಸ್ಪತ್ರೆಗೆ ಇದೀಗ ಬುಲ್ಡೋಜರ್ ನ ಭಯ ಶುರುವಾಗಿದೆ
ಇದನ್ನೂ ಓದಿ : Mirracle Drink : ದೇಹದ ಹಲವು ಅರೋಗ್ಯ ಸಮಸ್ಯೆಗಳಿಗೆ ಕುಡಿಯಿರಿ ಮಿರಾಕಲ್ ಡ್ರಿಂಕ್
(Fake Blood Platelets) The Uttar Pradesh government has ordered an investigation into the case of drinking Moosambi juice instead of blood plasma to a dengue patient, and now the hospital’s management is afraid of a bulldozer.