Fetus in fetu: ಅತ್ಯಂತ ವಿಚಿತ್ರ ಪ್ರಕರಣವೊಂದರಲ್ಲಿ ಬಿಹಾರದ ಮೋತಿಹಾರಿ ಎಂಬ ಪ್ರದೇಶದಲ್ಲಿ 40 ದಿನಗಳ ಪ್ರಾಯದ ಪುಟ್ಟ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆಯಾಗಿದ್ದು ಅಚ್ಚರಿಗೆ ಕಾರಣವಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಮೋತಿಹಾರದಲ್ಲಿರುವ ರಮಾನಿಯಾ ಮೆಡಿಕಲ್ ಸೆಂಟರ್ಗೆ 40 ದಿನಗಳ ಮಗುವನ್ನು ಚಿಕಿತ್ಸೆಗೆಂದು ಕರೆ ತರಲಾಗಿತ್ತು. ಮಗುವಿನ ಮೂತ್ರಪಿಂಡ ಇರುವ ಸ್ಥಳದಲ್ಲಿ ಊದಿಕೊಂಡಿದೆ ಎಂದು ಪೋಷಕರು ಹೇಳಿದ್ದರು. ಈ ಸಮಸ್ಯೆಯಿಂದಾಗಿ ಮಗುವಿಗೆ ಸರಿಯಾಗಿ ಮೂತ್ರ ವಿಸರ್ಜನೆ ಮಾಡಲು ಆಗುತ್ತಿರಲಿಲ್ಲ. ಹೀಗಾಗಿ ಮೂತ್ರಪಿಂಡದ ಭಾಗ ಏಕೆ ಊದಿಕೊಂಡಿದೆ ಎಂದು ವೈದ್ಯರು ಪರೀಕ್ಷೆಗೆ ಮುಂದಾಗಿದ್ದರು.
ಆದರೆ ವೈದ್ಯರು ನಡೆಸಿದ ಪರೀಕ್ಷೆಯಲ್ಲಿ ಬೆಚ್ಚಿ ಬೀಳಿಸುವಂತಹ ಫಲಿತಾಂಶ ಹೊರಬಿದ್ದಿದೆ. ಗಂಡು ಮಗು ತಾಯಿಯ ಗರ್ಭದಲ್ಲಿ ಇದ್ದಾಗಲೇ ಮಗುವಿನ ಹೊಟ್ಟೆಯಲ್ಲಿ ಭ್ರೂಣವು ಬೆಳೆದುಕೊಂಡಿದೆ ಎಂದು ತಿಳಿದುಬಂದಿದೆ. ಈ ವಿಚಿತ್ರ ಪ್ರಕರಣದ ಬಗ್ಗೆ ಮಾತನಾಡಿದ ರಮಾನಿಯಾ ವೈದ್ಯಕೀಯ ಕೇಂದ್ರದ ವೈದ್ಯ ಓಮರ್ ಟಬ್ರೇಜ್, ಇದನ್ನು ವೈದ್ಯಕೀಯ ಭಾಷೆಯಲ್ಲಿ ಭ್ರೂಣದಲ್ಲಿನ ಭ್ರೂಣ ಎಂದು ಕರೆಯಲಾಗುತ್ತದೆ. ತಾಯಿಯ ಗರ್ಭದಲ್ಲಿರುವಾಗಲೇ ಮಗುವಿನ ಹೊಟ್ಟೆಯಲ್ಲಿಯೂ ಭ್ರೂಣ ಇರುವ ವಿಚಿತ್ರ ವೈದ್ಯಕೀಯ ಸ್ಥಿತಿ ಇದಾಗಿದೆ. 10 ಲಕ್ಷ ಮಂದಿಯಲ್ಲಿ ಐವರಿಗೆ ಈ ರೀತಿ ಆಗುತ್ತದೆ ಎಂದು ಹೇಳಿದ್ದಾರೆ.
ಮಗುವಿನ ಆರೋಗ್ಯ ಕ್ಷೀಣಿಸುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಯ ಬಳಿಕ ಮಗುವಿನ ಹೊಟ್ಟೆಯಿಂದ ಭ್ರೂಣವನ್ನು ತೆಗೆದು ಹಾಕಲಾಗಿದೆ . ಅಲ್ಲದೇ ಇದಾದ ಬಳಿಕ ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : Tilak Varma : IPL ಮೂಲಕ ಕನಸು ಬೆನ್ನತ್ತಿರುವ ಯುವ ಆಟಗಾರ ತಿಲಕ್ ವರ್ಮ
ಇದನ್ನೂ ಓದಿ : Katte Gopalakrishna : ಕುಂದಾಪುರ ಚಿನ್ಮಯಿ ಆಸ್ಪತ್ರೆ ಮಾಲೀಕ ಕಟ್ಟೆ ಬೋಜಣ್ಣ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
Fetus in fetu: Child develops inside stomach of 40-day-old infant in Motihari