ಸೋಮವಾರ, ಏಪ್ರಿಲ್ 28, 2025
HomeNationalFlight Ticket : ಕೊರೊನಾ ನಡುವಲ್ಲೇ ಬಿಗ್‌ಶಾಕ್‌ : ಮತ್ತಷ್ಟು ದುಬಾರಿಯಾಯ್ತು ವಿಮಾನಗಳ ಟಿಕೆಟ್

Flight Ticket : ಕೊರೊನಾ ನಡುವಲ್ಲೇ ಬಿಗ್‌ಶಾಕ್‌ : ಮತ್ತಷ್ಟು ದುಬಾರಿಯಾಯ್ತು ವಿಮಾನಗಳ ಟಿಕೆಟ್

- Advertisement -

ನವದೆಹಲಿ : ವಿಶ್ವವೇ ಕೊರೋನಾ ಹಾವಳಿಯಿಂದ ತತ್ತರಿಸಿದೆ. ಜನರ ಸಮರ್ಪಕವಾಗಿ ವಿಮಾನಯಾನ ಸೇವೆ ಇಲ್ಲದೇ ತತ್ತರಿಸಿದ್ದಾರೆ. ಈ ನಡುವಲ್ಲೇ ಸರ್ಕಾರ, ವಿಮಾನದರವನ್ನು ಹೆಚ್ಚಿಸಿ ಪ್ರಯಾಣಿಕರಿಗೆ ಶಾಕ್ ನೀಡಿದೆ. ದೇಶೀಯ ವಿಮಾನಗಳ ಟಿಕೆಟ್​ ದರದಲ್ಲಿ ಶೇ.9.83ರಿಂದ 12.82ರಷ್ಟು ಏರಿಕೆ ಮಾಡಲಾಗಿದೆ. ಕೆಳದರ್ಜೆ ಮತ್ತು ಮೇಲ್ದರ್ಜೆ ವಿಮಾನಗಳ ಪ್ರಯಾಣ ದರವನ್ನು ಹೆಚ್ಚಿಸಿ ನಾಗರಿಕ ವಿಮಾನಯಾನ ಸಚಿವಾಲಯ ಅಧಿಕೃತವಾಗಿ ಆದೇಶ ಹೊರಡಿಸಿದೆ.

ವಿಮಾನಯಾನ ಸಚಿವಾಲಯ ಗುರುವಾರ ಹೊಸ ಆದೇಶವನ್ನು ಹೊರಡಿಸಿದ್ದು, ಶೇ.65ರಷ್ಟಿದ್ದ ಸಾಮರ್ಥ್ಯವನ್ನು ಶೇ. 72.5ಕ್ಕೆ ಹೆಚ್ಚಿಸಿದೆ. ಈ ನಿಯಮ ಮುಂದಿನ ಆದೇಶ ಹೊರಡಿಸುವ ತನಕ ಜಾರಿಯಲ್ಲಿರುತ್ತದೆ ಎಂದು ಸಚಿವಾಲಯ ಹೇಳಿದೆ. ಕೆಳದರ್ಜೆ ಮತ್ತು ಮೇಲ್ದರ್ಜೆ ವಿಮಾನಗಳ ಪ್ರಯಾಣ ದರವನ್ನು ಹೆಚ್ಚಿಸಿ ನಾಗರಿಕ ವಿಮಾನಯಾನ ಸಚಿವಾಲಯ ಅಧಿಕೃತವಾಗಿ ಆದೇಶ ಹೊರಡಿಸಿದೆ. ಟಿಕೆಟ್​ ದರದಲ್ಲಿ ಶೇ.9.83ರಿಂದ 12.82ರಷ್ಟು ಏರಿಕೆ ಮಾಡಲಾಗಿದೆ.

ಆದರೆ ಈಗ ಭಾರತೀಯ ವಿಮಾನಯಾನ ಸಂಸ್ಥೆಗಳು ವಿಮಾನಗಳ ಸಾಮರ್ಥ್ಯ ದರವನ್ನು ಶೇ.65ರ ಬದಲಿಗೆ ಶೇ.72.5ಕ್ಕೆ ಹೆಚ್ಚಿಸಿವೆ. ಸಚಿವಾಲಯದ ಅಧಿಕೃತ ಮಾಹಿತಿ ಪ್ರಕಾರ, ಜುಲೈ 5ರಿಂದ ಶೇ.65 ರಷ್ಟು ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿದ್ದವು. ಜೂನ್​ 1ರಂದು ಕೇಂದ್ರ ಸರ್ಕಾರವು ದರಗಳ ಮೇಲಿನ ಮಿತಿಯನ್ನು ಶೇ.15ರಷ್ಟು ಹೆಚ್ಚಿಸಿತ್ತು. ಇದರ ಜೊತೆಗೆ ಕನಿಷ್ಠ 2 ಬಾರಿ ಪ್ರಯಾಣ ದರ ಹೆಚ್ಚಾಗಿತ್ತು.

ಹೆಚ್ಚಿನ ಬೇಡಿಕೆ ಮತ್ತು ಸೀಮಿತ ವಿಮಾನಗಳ ಕಾರಣದಿಂದಾಗಿ ಅಸಹಜವಾಗಿ ಟಿಕೆಟ್​​ ದರವನ್ನು ಹೆಚ್ಚಿಸಲಾಗಿದೆ. ಕೆಳದರ್ಜೆ ಮತ್ತು ಮೇಲ್ದರ್ಜೆ ವಿಮಾನಗಳ ಪ್ರಯಾಣ ದರ ಹೆಚ್ಚಾಗಿದೆ. ಇದು ವಿಮಾನಯಾನ ಸಂಸ್ಥೆಗಳ ಮೇಲೆ ಹಾಕಲಾದ ತಾತ್ಕಾಲಿಕ ಮಿತಿಯಾಗಿದೆ ಎಂದು ಹಿಂದಿನ ವಿಮಾನಯಾನ ಸಚಿವ ಹರ್ದೀಪ್​ ಸಿಂಗ್​ ಪುರಿ ತಿಳಿಸಿದ್ದಾರೆ. ಈ ಬೆಲೆ ಹೆಚ್ಚಳದಿಂದಾಗಿ ದೆಹಲಿ-ಮುಂಬೈ ಮಾರ್ಗದ ಒಂದು ಕಡೆಯ ಪ್ರಯಾಣ ದರ 575ರೂ. ಹೆಚ್ಚಾಗಿದೆ. ಗರಿಷ್ಠ ವಿಮಾನ ದರ ಏರಿಕೆ 1625 ರೂಪಾಯಿಗಳಾಗಿವೆ. ಕೊರೋನಾ ಸಂದರ್ಭದಲ್ಲಿ ವಿಮಾನಗಳ ಮೇಲೆ ವಿಧಿಸಲಾಗಿದ್ದ ದರ ಮಿತಿಯ​ನ್ನು ತೆಗೆಯುವಂತೆ ವಿಮಾನಯಾನ ಸಂಸ್ಥೆಗಳು ಸರ್ಕಾರಕ್ಕೆ ಮನವಿ ಮಾಡಿದ್ದವು.

ವಿಮಾನಗಳ ಸಾಮರ್ಥ್ಯಕ್ಕನುಗುಣವಾಗಿ ಕೇಂದ್ರ ಸರ್ಕಾರ ಕಳೆದ ವರ್ಷ 2 ತಿಂಗಳ ನಂತರ ಮೇ 25ರಂದು ಮತ್ತೆ ದೇಶೀಯ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಿತ್ತು. ಆಗ ಸಚಿವಾಲಯವು ಶೇ.33ರಷ್ಟು ವಿಮಾನಗಳು ಮಾತ್ರ ಕಾರ್ಯಾರಂಭ ಮಾಡುವಂತೆ ಹೇಳಿತ್ತು. ಡಿಸೆಂಬರ್ ವೇಳಗೆ ಈ ಮಿತಿಯನ್ನು ಶೇ.80ಕ್ಕೆ ಹೆಚ್ಚಿಸಲಾಯಿತು. ಜೂನ್​ 1ರ ವರೆಗೆ ಶೇ.80ರಷ್ಟು ದರ ಮಿತಿ ಜಾರಿಯಲ್ಲಿತ್ತು. ಬಳಿಕ ಮೇ 28ರಂದು ಈ ನಿರ್ಧಾರವನ್ನು ಬದಲಿಸಿ, ದರ ಮಿತಿಯನ್ನು ಶೇ.80ರಿಂದ ಶೇ. 50ಕ್ಕೆ ಇಳಿಸಲಾಯಿತು. ದೇಶದಲ್ಲಿ ಏಕಾಏಕಿ ಕೋವಿಡ್​ ಪ್ರಕರಣಗಳು ಹೆಚ್ಚಾದ ಹಿನ್ನೆಲೆ, ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿದಿದ್ದರಿಂದ ಸರ್ಕಾರ ತ್ವರಿತವಾಗಿ ಈ ನಿರ್ಧಾರ ತೆಗೆದುಕೊಂಡಿತ್ತು.

ಇದನ್ನೂ ಓದಿ : Air India : ಸೌದಿ, ಕುವೈತ್‌ನಿಂದ ಭಾರತಕ್ಕೆ ವಿಮಾನ ಸೇವೆ : ಟಿಕೆಟ್ ಬುಕ್ಕಿಂಗ್ ಆರಂಭ

ಇದನ್ನೂ ಓದಿ : ವಿಮಾನಯಾನ ಪ್ರಯಾಣಿಕರಿಗೆ ಬಿಗ್ ಶಾಕ್ : ಶೆ. 15 ರಷ್ಟು ಏರಿಕೆಯಾಗಲಿದೆ ಪ್ರಯಾಣ ದರ

RELATED ARTICLES

Most Popular