ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಬಗ್ಗು ಬಡಿದು ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿದ ತೃಣಮೂಲ ಕಾಂಗ್ರೆಸ್ ಚುನಾವಣೆ ಬಳಿಕವೂ ಬಿಜೆಪಿಗೆ ಶಾಕ್ ಮೇಲೆ ಶಾಕ್ ನೀಡುತ್ತಲೇ ಬರ್ತಿದೆ. ಈಗಾಗಲೇ ಬಿಜೆಪಿಯ ಸಾಕಷ್ಟು ಶಾಸಕರು ಟಿಎಂಸಿಗೆ ಸೇರ್ಪಡೆಯಾಗುತ್ತಿದ್ದಾರೆ. ಅಲ್ಲದೇ ಗೋವಾ ಸೇರಿದಂತೆ ವಿವಿಧೆಡೆ ತೃಣಮೂಲ ಕಾಂಗ್ರೆಸ್ ಗಟ್ಟಿಯಾಗಿ ಬೇರೂರಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದೆ. ಈ ನಡುವೆಯೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಅದಾನಿ ಗ್ರೂಪ್ ಸಂಸ್ಥಾಪಕ ಹಾಗೂ ಚೇರ್ಮನ್ ಗೌತಮ್ ಅದಾನಿ (Gautam Adani) ಭೇಟಿಯು ಬಾರೀ ಕುತೂಹಲ ಮೂಡಿಸಿದೆ.
ಗೌತಮ್ ಅದಾನಿ ಹಾಗೂ ಪ್ರಧಾನಿ ಭಾಯಿ ಭಾಯಿ ಎಂದೇ ರಾಜಕೀಯ ವಲಯದಲ್ಲಿ ಮಾತನಾಡಲಾಗುತ್ತೆ. ಅಂತದ್ರಲ್ಲಿ ಬಿಜೆಪಿಯ ಕಡುವೈರಿ ಟಿಎಂಸಿ ನಾಯಕಿಯ ಜೊತೆ ಗೌತಮ್ ಅದಾನಿ ಕಾಣಿಸಿಕೊಂಡಿದ್ದು ರಾಜಕೀಯ ವಲಯದಲ್ಲಿ ಹೊಸದೊಂದು ಸಂಚಲನವನ್ನೇ ಸೃಷ್ಟಿಸಿದೆ. ಗುರುವಾರದಂದು ರಾಜ್ಯ ಸಚಿವಾಲಯದ ನಬನ್ನಾದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯನ್ನು ಭೇಟಿಯಾದ ಗೌತಮ್ ಅದಾನಿ ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ಭೇಟಿ ವೇಳೆ ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಕೂಡ ಹಾಜರಿದ್ದರು ಎನ್ನಲಾಗಿದೆ.
ಮುಂಬೈನಿಂದ ವಾಪಸ್ಸಾದ ಕೆಲವೇ ಗಂಟೆಗಳಲ್ಲಿ ಮಮತಾ ಬ್ಯಾನರ್ಜಿ ಅದಾನಿ ಭೇಟಿಗಾಗಿ ನಬನ್ನಾಗೆ ತೆರಳಿದ್ದರು ಎನ್ನಲಾಗಿದೆ. ಮಮತಾ ಬ್ಯಾನರ್ಜಿ ಭೇಟಿ ಬಳಿಕ ಟ್ವೀಟಾಯಿಸಿದ ಗೌತಮ್ ಅದಾನಿ ಗೌರವಾನ್ವಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಭೇಟಿಯಾಗಿದ್ದಕ್ಕೆ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.
ಅಲ್ಲದೇ ಪಶ್ಚಿಮ ಬಂಗಾಳದಲ್ಲಿ ಉದ್ಯಮ ಹೂಡಿಕೆ ಮಾಡುವುದರ ಬಗ್ಗೆ ಹಾಗೂ ಸಾಮರ್ಥ್ಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. 2022ರ ಏಪ್ರಿಲ್ನಲ್ಲಿ ಬಂಗಾಳ ಉದ್ಯಮ ಶೃಂಗಸಭೆ ಯಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಇದನ್ನು ಓದಿ : Piyush Goyal: ಕೇಂದ್ರ ಸಚಿವ ಪಿಯೂಷ್ ಗೋಯಲ್‌ಗೆ 30ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ
Gautam Adani meets Mamata Banerjee, discusses investment scenario in West Bengal