ನವದೆಹಲಿ : ಕೇಂದ್ರ ಸರಕಾರ ಸರಕಾರಿ ನೌಕರರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಸಪ್ಟೆಂಬರ್ ತಿಂಗಳಲ್ಲಿ ತುಟ್ಟಿ ಭತ್ಯೆ ಬಿಡುಗಡೆ ಮಾಡಲು ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದೆ ಎಂದು ಕೇಂದ್ರ ಸರಕಾರಿ ನೌಕರರ ಸಂಘ ಹೇಳಿದೆ.
2020ರ ಜನವರಿ ಮತ್ತು ಜುಲೈ ಮತ್ತು 2021ರ ಜನವರಿ ತಿಂಗಳ ತುಟ್ಟಿಭತ್ಯೆಯ ಕಂತನ್ನು ಸೆಪ್ಟೆಂಬರ್ ತಿಂಗಳ ಒಳಗೆ ಈ ವರ್ಷದ ಜುಲೈ ಕಂತುಗಳೊಂದಿಗೆ ಸೇರಿಸುವ ಮೂಲಕ ಪಾವತಿಸಲು ಸರ್ಕಾರ ಒಪ್ಪಿಕೊಂಡಿದೆ. ಸರಕಾರಿ ನೌಕರರಿಗೆ ಸಂಬಂಧಿಸಿದಂತೆ ಸುಮಾರು 28 ಬೇಡಿಕೆಗಳಿಗೆ ಸರಕಾರ ಒಪ್ಪಿಗೆ ಸೂಚಿಸಿದೆ.
ಕಳೆದ ಒಂದೂವರೆ ವರ್ಷಗಳಿಂದ ಸರ್ಕಾರ ಸ್ಥಗಿತಗೊಳಿಸಿದ್ದ ತುಟ್ಟಿಭತ್ಯೆ ಪರಿಹಾರದ ಮೂರು ಕಂತುಗಳನ್ನು ಅಂದರೆ 2021ರ ಜನವರಿ 2020 ಮತ್ತು ಜನವರಿ 2021ರ ಮೂರು ಕಂತುಗಳನ್ನು 2021ರ ಜುಲೈ ಮತ್ತು ಆಗಸ್ಟ್ ಬಾಕಿ ಸೇರಿದಂತೆ 2021ರ ಸೆಪ್ಟೆಂಬರ್ ನಲ್ಲಿ ಪಾವತಿಸಲಾಗುವುದು ಎಂದು ಸಂಪುಟ ಕಾರ್ಯದರ್ಶಿ ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಕಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸರಕಾರ ಸ್ಥಗಿತಗೊಳಿಸಿದ್ದ ಪಿಂಚಣಿದಾರರಿಗೆ ತುಟ್ಟಿಭತ್ಯೆ ಮತ್ತು ತುಟ್ಟಿಪರಿಹಾರ ವಿಷಯವನ್ನು ಸಹ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು ಎಂದು ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಮಿಶ್ರಾ ತಿಳಿಸಿದ್ದಾರೆ.