ನವದೆಹಲಿ : ಕೊರೊನಾ ವೈರಸ್ ಸೋಂಕಿನ ಲಸಿಕೆಗಾಗಿ ಹಲವು ಸಂಶೋಧನೆಗಳು ನಡೆಯುತ್ತಿವೆ. ದೇಶಕ್ಕೆ ಇನ್ನೂ ಆರು ಕೊರೊನಾ ಲಸಿಕೆಗಳು ಬರುವ ಸಾಧ್ಯತೆಯಿದೆ. ಅದ್ರಲ್ಲೂ ದೇಶದಲ್ಲಿ ಕೊರೊನಾ ಲಸಿಕೆ ಸಂಶೋಧನೆ ಮಾಡಿದ ವಿಜ್ಣಾನಿಗಳಿಗೆ ಮೋದಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಕೋವಿಶೀಲ್ಡ್, ಕೋವ್ಯಾಕ್ಸಿನ್ ಕೋವಿಡ್ -19 ಲಸಿಕೆಯ ಬಗ್ಗೆ ಭಾರತದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಈ ವರ್ಷಾಂತ್ಯದ ವೇಳೆಗೆ ಭಾರತದಲ್ಲಿ ಸುಮಾರು ಅರ್ಧ ಡಜನ್ ಲಸಿಕೆಗಳು ಬರುವ ಸಾಧ್ಯತೆ ಇದೆ. ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಆಕ್ಸ್‌ಫರ್ಡ್ ಆಯಸ್ಟ್ರಾಜೆನಿಕಾ ಲಸಿಕೆಯನ್ನು ಕೋವಿ ಶೀಲ್ಡ್’ ತಯಾರಿಸುತ್ತಿದ್ದು, ಇದೀಗ ಕೋವೋವ್ಯಾಕ್ಸ್ ಲಸಿಕೆಯನ್ನು ಅಭಿವೃದ್ದಿ ಪಡಿಸುತ್ತಿದೆ. ಪ್ರೋಟೀನ್ ಆಧಾರಿತ ಕೋವಿಡ್ -19 ಲಸಿಕೆ ‘ಕೋವೋವ್ಯಾಕ್ಸ್’ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಉತ್ಪಾದಿಸುತ್ತಿದೆ.
ಇನ್ನು ಪುಣೆ ಮೂಲದ HGC019 ಕಂಪನಿ ಜೆನ್ನೋವಾ ಬಯೋ ಫಾರ್ಮಾಸಿಟಿಕಲ್ಸ್ ಭಾರತದ ಮೊದಲ mRNA ಕೋವಿಡ್ -19 ಲಸಿಕೆಯನ್ನು HGC019 ಹೆಸರಿನಲ್ಲಿ ಅಭಿವೃದ್ಧಿಪಡಿಸಿದೆ. ಈ ಲಸಿಕೆಯ ಮೊದಲ ಹಂತದ ಪ್ರಯೋಗಗಳು ಕಳೆದ ತಿಂಗಳು ಪ್ರಾರಂಭವಾಗಿದೆ. ಗುಜರಾತ್‌ನ ಝೈಡಸ್ ಕ್ಯಾಡಿಲಾ ಕಂಪನಿ ZyCoV-D ಎಂಬ ಇಂಟ್ರಾಡರ್ಮಲ್ ಪ್ರಸ್ತಾವಿತ ಕೋವಿಡ್ -19 ಲಸಿಕೆಯನ್ನು ಉತ್ಪಾದಿ ಸುತ್ತಿದೆ. ಇದನ್ನು ಮಕ್ಕಳ ಮೇಲೆ ಪ್ರಯೋಗಿಸಲಾಗುತ್ತಿದೆ. ಹೈದರಾ ಬಾದ್ ಮೂಲದ ಬಯೋಲಾಜಿಕಲ್ ಇ ಕಾರ್ಬೆವಾಕ್ಸ್ ಎಂಬ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.
ಬಯೋಲಾಜಿಕಲ್ ಇ ಜಾನ್ಸನ್ ಅಂಡ್ ಜಾನ್ಸನ್‌ನ ಕೋವಿಡ್ -19 ಲಸಿಕೆಯನ್ನು ಭಾರತಕ್ಕೆ ತರುತ್ತಿದೆ. ಭಾರತೀಯ ಕಂಪನಿಯು ಜಾನ್ಸೆನ್ ಎಂಬ ಹೆಸರಿನ ಲಸಿಕೆಯನ್ನು ಸುಮಾರು 600 ಮಿಲಿಯನ್ ಡೋಸ್ ಉತ್ಪಾದಿಸುವ ಒಪ್ಪಂದವನ್ನು ಮಾಡಿಕೊಂಡಿದ್ದರೆ, ಕೆನಡಾದ ಕಂಪೆನಿ ಯ ಎಂಆರ್‌ಎನ್‌ಎ ಕೋವಿಡ್ -19 ಲಸಿಕೆಯನ್ನು ಭಾರತದಲ್ಲಿ ತಯಾರಿಸಲು ಕಂಪನಿಯು ಪ್ರಾವಿಡೆನ್ಸ್ ಥೆರಪೂಟಿಕ್ಸ್ ಹೋಲ್ಡಿಂಗ್ಸ್ ನೊಂದಿಗೆ ಪರವಾನಗಿ ಒಪ್ಪಂದ ಮಾಡಿಕೊಂಡಿದೆ. ಇಷ್ಟೇ ಅಲ್ಲದೇ ಇನ್ನಷ್ಟು ಕಂಪೆನಿಗಳು ಭಾರತಕ್ಕೆ ಲಸಿಕೆ ಒದಗಿಸಲು ಉತ್ಸಾಹ ತೋರಿಸಿವೆ.