Aadhaar for future Schemes: ಆಧಾರ್ ಮಾಹಿತಿ ಸಂಚಿಕೆಗೆ ಒಪ್ಪಿಗೆ ಪಡೆಯಲು ಮುಂದಾಗಲಿದೆ ಸರ್ಕಾರ

ನವದೆಹಲಿ: ಭವಿಷ್ಯದಲ್ಲಿ ಜಾರಿಗೊಳ್ಳಲಿರುವ ಯೋಜನೆ(Future Schemes)ಗಳು ಮತ್ತು ಉಪಕ್ರಮಗಳಲ್ಲಿ ಜನರು ಪಾಲ್ಗೊಳ್ಳುವುದಕ್ಕೆ ಅನುಕೂಲವಾಗುವಂತೆ ಆಧಾರ್ ಸಂಖ್ಯೆ(Aadhar Number) ಜೋಡಿತ ಡೇಟಾ ಬೇಸ್‌ (Database)ನಿರೀಕ್ಷಿತ ಅಥವಾ ಹಂಚಿಕೆಗಾಗಿ ನಾಗರಿಕರ ಅನುಮತಿಯನ್ನು ಸರ್ಕಾರ ಕೋರಲು ಬಯಸಿದೆ. ನಾಗರಿಕರು ಈ ಒಪ್ಪಿಗೆಯನ್ನು ಒಮ್ಮೆ ನೀಡಿದರೆ ಸಾಕಾಗುತ್ತದೆ ಮತ್ತು ಈ ಒಪ್ಪಿಗೆಯನ್ನು ಅವರು ಯಾವಾಗ ಬೇಕಾದರೂ ಹಿಂಪಡೆಯಲು ಅವಕಾಶ ಕೂಡ ಇದೆ.

ಈ ಸಂಬಂಧವಾಗಿ ಸರ್ಕಾರ ಆಧಾರ್ ಸಂಖ್ಯೆ ಹೊಂದಿರುವವರಿಗೆ ಸರ್ಕಾರ ಇ-ಮೇಲ್, ಎಸ್ಎಂಎಸ್ ಅಥವಾ ಆಧಾರ್ ವೆಬ್‌ಸೈಟ್ ಮೂಲಕವೇ ಅನುಮತಿಯನ್ನು ಕೋರುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯುವವರ ಮಾಹಿತಿ ನೀಡುವಂತೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ಕ್ಕೆ ಸರ್ಕಾರದ ವಿವಿಧ ಸಚಿವಾಲಯ, ಇಲಾಖೆಗಳಿಂದ ಕೋಟ್ಯಂತರ ಮನವಿಗಳು ಬರುತ್ತಿರುವ ಈ ಹಿನ್ನೆಲೆಯಲ್ಲಿ ಪರಿಸ್ಕೃತ ನಿಯಮ ಜಾರಿಗೆ ಬರಲಿದೆ. ಈ ನಿರೀಕ್ಷಿತ ಮಾಹಿತಿ ಹಂಚಿಕೆಯ ನಮೂನೆಯನ್ನು ಯುಐಡಿಎಐ ಸಿದ್ಧಪಡಿಸಿ ಸರ್ಕಾರಕ್ಕೆ ರವಾನಿಸಿದೆ. ಇದನ್ನು ಭರ್ತಿ ಮಾಡುವ ಮೂಲಕ ಆಧಾರ್ ಜೋಡಿತ ಡೇಟಾಬೇಸ್ ರಚನೆಗೆ ಜನರು ಸಹಕರಿಸಬೇಕಾಗುತ್ತದೆ. ಈ ಮೂಲಕ ಭವಿಷ್ಯದ ಯೋಜನೆಗಳಿಗೆ ವೈಯಕ್ತಿಕ ಮಾಹಿತಿ ಬಳಸಲು ಅನುಮತಿ ನೀಡಲೇಬೇಕಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈ ಹಿಂದೆ ಪ್ರತಿಯೊಂದಕ್ಕೂ ಆಧಾರ್ ಸಂಖ್ಯೆ ಜೋಡಣೆ ಕೇಳಿಬಂದಾಗ ಖಾಸಗಿತನಕ್ಕೆ ಧಕ್ಕೆ ಆಗುತ್ತದೆ. ಆಧಾರ್ ಮಾಹಿತಿ ಪಡೆದರು ಅದನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಆಗಿತ್ತು. ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳು ಮಾತ್ರ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿದರೆ ಸಾಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಶಾಲಾ ಪ್ರವೇಶಾತಿ ಇನ್ನಿತರ ಸೇವೆ ಅಥವಾ ಸೌಲಭ್ಯಗಳಿಗೆ ಆಧಾರ್ ಜೋಡಣೆ ಕಡ್ಡಾಯವಲ್ಲ, ಐಚ್ಛಿಕ ಎಂದು ಸ್ಪಷ್ಟಪಡಿಸಿತ್ತು. ಇದಾದ ನಂತರ ಸರ್ಕಾರ ಆಧಾರ್ ತಿದ್ದುಪಡಿಯನ್ನು ಮಂಡಿಸಿ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಆಧಾರ್ ಕಡ್ಡಾಯ ಮಾಡಿತು.

ಇದನ್ನೂ ಓದಿ: How to Download Aadhar Card: ಆಧಾರ್ ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾಹಿತಿ

(Sharing of Aadhar for future Schemes)

Comments are closed.