ಅಹಮದಾಬಾದ್ : ದೆಹಲಿ ಬೆನ್ನಲ್ಲೇ ಇದೀಗ ಗುಜರಾತ್ ನಲ್ಲಿ ಭೂಕಂಪನ ಸಂಭವಿಸಿದೆ. ಕಛ್ ಜಿಲ್ಲೆಯಲ್ಲಿ ಭೂಕಂಪನ ಸಂಭವಿ ಸಿದ್ದು 3.9 ತೀವ್ರತೆ ದಾಖಲಾಗಿದೆ ಎಂದು ವರದಿಯಾಗಿದೆ.
ಬೆಳಗ್ಗೆ ಸುಮಾರು 7.40 ರ ಸುಮಾರಿಗೆ ಭೂಕಂಪನ ಸಂಭವಿಸಿದೆ ಎನ್ನಲಾಗುತ್ತಿದೆ. ಕಛ್ ಜಿಲ್ಲೆಯ ದುಧೈ ಈಶಾನ್ಯ ದಿಕ್ಕಿನಲ್ಲಿ 19 ಕಿ.ಮೀ ದೂರದಲ್ಲಿ, 11.8 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ವನ್ನು ಗುರುತಿಸ ಲಾಗಿದೆ. ಜಿಲ್ಲೆಯ ಹಲವುಗಳಲ್ಲಿಯೂ ಭೂಕಂಪನ ಸಂಭವಿಸಿದೆ ಎನ್ನಲಾಗುತ್ತಿದೆ.
ರಿಕ್ಟರ್ ಮಾಪಕದಲ್ಲಿ 3.7 ತೀವ್ರತೆ ದಾಖಲಾಗಿದೆ ಎಂದು ಗಾಂಧಿನಗರ ದ ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ದೃಢಪಡಿಸಿದೆ. ಅದೃಷ್ಟವ ಶಾತ್ ಈ ಭೂಕಂಪದಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. ಇನ್ನು ಕಛ್ ಜಿಲ್ಲೆ ಅತೀ ಹೆಚ್ಚು ಭೂಕಂಪನದ ವಲಯವಾಗಿದ್ದು, ಈ ಹಿಂದೆ 6.9 ತೀವ್ರತೆಯ ಭೂಕಂಪನ ಸಂಭವಿಸಿತ್ತು.