ದುಬೈ : ದುಬೈ ಎಕ್ಸ್‌ಪೋ 2020 ಸಿದ್ದತೆ ಭರದಿಂದ ಸಾಗುತ್ತಿದೆ. ಆದರೆ ಎಕ್ಸ್‌ಪೋ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಮೂವರು ಕಾರ್ಮಿಕರು ಸಾವನ್ನಪ್ಪಿ, 70 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ.
ಯುಎಇ (United Arab Emirates )ನಲ್ಲಿ ದುಬೈ ಎಕ್ಸ್‌ಪೋ 2020 ಬೃಹತ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಎಕ್ಸ್ ಪೋದಲ್ಲಿ ಬೃಹತ್ ಮೊನಾಕೊ ನಿರ್ಮಾಣವಾಗುತ್ತಿದ್ದು, ನೂರಾರು ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಈ ನಿರ್ಮಾಣ ಕಾರ್ಯದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಕಾರ್ಮಿಕರು ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಆದೆ ನಿರ್ಮಾಣ ಕಾರ್ಯದ ವೇಳೆಯಲ್ಲಿ ನಡೆದ ಅವಘಡದಿಂದಾಗಿ ಮೂವರು ಸಾವನ್ನಪ್ಪಿದ್ದು, 72 ಮಂದಿ ಗಾಯಗೊಂಡಿರುವ ಕುರಿತು ದುಬೈ ಎಕ್ಸ್‌ಪೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ದುಬೈ ಎಕ್ಸ್‌ಪೋ ನಡೆಯುತ್ತಿರುವ ಸ್ಥಳದಲ್ಲಿ ಸುಮಾರು 247 ಗಂಟೆಗಳ ಕಾಲ ಕೆಲಸವನ್ನು ಪೂರ್ಣಗೊಳಿಸಲಾಗಿದೆ. ಇನ್ನೊಂದೆಡೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಮಾನವಹಕ್ಕುಗಳ ಕುರಿತ ದಾಖಲೆ ಹಾಗೂ ವಲಸೆ ಕಾರ್ಮಿಕರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಕುರಿತು ಯುರೋಪಿಯನ್ ಪಾರ್ಲಿಮೆಂಟ್ ಟೀಕಿಸಿದೆ. ಅಲ್ಲದೇ ಆರು ತಿಂಗಳ ವಿಶ್ವಮಟ್ಟದ ದುಬೈ ಮೇಳವನ್ನು ಬಹಿಷ್ಕರಿಸುವಂತೆಯೂ ಕರೆ ನೀಡಿದೆ.
ಇದನ್ನೂ ಓದಿ : ಯುಕೆ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ : ನೆಗೆಟಿವ್ ರಿಪೋರ್ಟ್ ಕಡ್ಡಾಯ, 10 ದಿನ ಕ್ವಾರಂಟೈನ್
ಇದೀಗ ದುಬೈ ಎಕ್ಸ್‌ಪೋ ಕಾಮಗಾರಿಯ ವೇಳೆಯಲ್ಲಿ ಕಾರ್ಮಿಕರ ಸಾವಿನ ಪ್ರಕರಣ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಆದರೆ ದುಬೈ ಎಕ್ಸ್‌ಪೋ ಈ ದುರಂತ ಬ್ರಿಟನ್‌ಗಿಂತಲೂ ಕಡಿಮೆಯಾಗಿದೆ ಎಂದು ಹೇಳಿದೆ.
ಇದನ್ನೂ ಓದಿ : ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣ : ನಟ ವಿವೇಕ್, ಮಹೇಶ್ ಪತ್ತೆ ವಿಚಾರಣೆ
(3 workers Died Building Dubai Expo More than 72 Injuries )