ನವದೆಹಲಿ : ಮುಂದಿನ ಎರಡು ದಿನಗಳ ಕಾಲ ದೇಶದ ಈಶಾನ್ಯ ಭಾರತ, ಸಬ್-ಹಿಮಾಲಯನ್ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.
ಕಳೆದ ಕೆಲವು ದಿನಗಳಿಂದಲೂ ಕರ್ನಾಟಕ ರಾಜ್ಯದಲ್ಲಿ ಮಳೆಯಾಗುತ್ತಿದೆ. ಅಲ್ಲದೇ ಇನ್ನೆರಡು ದಿನಗಳ ಕಾಲ ಮಳೆ ಮುಂದುವರಿಯಲಿದೆ. ಅದ್ರಲ್ಲೂ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ.
ಬಿಹಾರ, ಪೂರ್ವ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಶುಕ್ರವಾರ (27 ಆಗಸ್ಟ್) ವರೆಗೂ ಬಿರುಸಿನ ಭಾರೀ ಮಳೆಯೊಂದಿಗೆ ವ್ಯಾಪಕ ಮಳೆಯಾಗಲಿದ್ದು,ಆಗಸ್ಟ್ 23 ರಿಂದ 25 ರವರೆಗೆ ಅಸ್ಸಾಂ ಮತ್ತು ಮೇಘಾಲಯ, ಅಲ್ಲದೇ ಆಗಸ್ಟ್ 23, 26 ಮತ್ತು 27 ರಂದು ತಮಿಳುನಾಡು, ಕೇರಳ ಮತ್ತು ಮಾಹೆಯಲ್ಲಿ ವ್ಯಾಪಕವಾದ ಮಳೆಯಿಂದಾಗಿ ವ್ಯಾಪಕ ಮಳೆ ಸುರಿಯಲಿದೆ. ಇನ್ನು ರಾಜಸ್ಥಾನದಲ್ಲಿ ಅಗಸ್ಟ್ 27ರ ವರಗೆ ಮಳೆಯಾಗಲಿದೆ ಎಂದು ಹೇಳಿದೆ.
ಇದನ್ನೂ ಓದಿ : ಕತ್ತಲ ರಾತ್ರಿ ಆ ಗ್ರಾಮಕ್ಕೆ ಹೋದವರು ಹಿಂತಿರುಗಿ ಬಂದ ಮಾತೇ ಇಲ್ಲಾ : ಕುಲಧರ ಗ್ರಾಮವೆಂದ್ರೆ ರಾಜಸ್ತಾನದ ಜನ ಬೆಚ್ಚಿ ಬೀಳೋದ್ಯಾಕೆ !
ಇದನ್ನೂ ಓದಿ : Video Viral : ಪಾನಿಪುರಿ ಪ್ರಿಯರೇ ಎಚ್ಚರ ! ಪಾನಿಗೆ ಮೂತ್ರ ಮಿಕ್ಸ್ ಮಾಡ್ತಾರೆ ಹುಷಾರ್ ; ವೈರಲ್ ಆಯ್ತು ವೀಡಿಯೋ