ಸೋಮವಾರ, ಏಪ್ರಿಲ್ 28, 2025
HomeNationalHeeraben Modi :ಪ್ರಧಾನಿ ಮೋದಿ ತಾಯಿ ಹೀರಾಬೆನ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

Heeraben Modi :ಪ್ರಧಾನಿ ಮೋದಿ ತಾಯಿ ಹೀರಾಬೆನ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

- Advertisement -

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ (Heeraben Modi) ಅವರ ಆರೋಗ್ಯದಲ್ಲಿ ಬುಧವಾರ ಏರುಪೇರು ಕಂಡಿದ್ದು, ಅವರನ್ನು ಅಹಮದಾಬಾದ್‌ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಮೈಸೂರು ಬಳಿ ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿ ಮತ್ತು ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಗಾಯಗೊಂಡ ಒಂದು ದಿನದ ನಂತರ ಹೀರಾಬೆನ್‌ ಮೋದಿ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಮೂಲಗಳ ಪ್ರಕಾರ, ಚಾಲಕನನ್ನು ಹೊರತುಪಡಿಸಿ, ಪ್ರಹ್ಲಾದ್, ಅವರ ಮಗ, ಸೊಸೆ ಮತ್ತು ಮಗು ಕಾರಿನಲ್ಲಿದ್ದರು. ಕೆಲವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಜೆಎಸ್‌ಎಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿ ಆಗಿದೆ.

ಕಳೆದ ಜೂನ್ 18 ರಂದು ಹೀರಾಬೆನ್ ಮೋದಿ 100 ನೇ ವಸಂತಕ್ಕೆ ಕಾಲಿಟ್ಟರು. ಅವರ ಜನ್ಮದಿನದ ಸಂದರ್ಭದಲ್ಲಿ, ವಡ್ನಗರದ ಹಟಕೇಶ್ವರ ದೇವಸ್ಥಾನದಲ್ಲಿ ಪೂಜೆ ನಡೆಯಿತು.
ಡಿಸೆಂಬರ್ 4 ರಂದು ಗುಜರಾತ್ ವಿಧಾನಸಭೆಯ ಎರಡನೇ ಮತ್ತು ಅಂತಿಮ ಹಂತದ ಚುನಾವಣೆಗೆ ಮುಂಚಿತವಾಗಿ, ಪ್ರಧಾನಿ ತಮ್ಮ ತಾಯಿ ಹೀರಾಬೆನ್ ಮೋದಿ ಅವರನ್ನು ಗಾಂಧಿನಗರದ ರೈಸನ್ ಪ್ರದೇಶದಲ್ಲಿ ಅವರ ನಿವಾಸದಲ್ಲಿ ಭೇಟಿಯಾದರು.

ಸದ್ಯ ಮೋದಿ ಅವರ ತಾಯಿ ಹೀರಾಬೆನ್‌ ಮೋದಿಯವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಬಂದಿಲ್ಲ.ಕೆ. ಕೈಲಾಸನಾಥನ್ – ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯ್ ಪಟೇಲ್ ಅವರ ಮುಖ್ಯ ಪ್ರಧಾನ ಕಾರ್ಯದರ್ಶಿ ಅಪೋಲೋ ಆಸ್ಪತ್ರೆಗೆ ತಲುಪಿದ್ದಾರೆ.

ಇದನ್ನೂ ಓದಿ : Tourist bus collision: ಪ್ರವಾಸಕ್ಕೆ ತೆರಳುತ್ತಿದ್ದ ಸಾರಿಗೆ ಬಸ್‌ ಗೆ ಮಿನಿ‌ ಬಸ್ ಮುಖಾಮುಖಿ ಢಿಕ್ಕಿ : 12 ವಿದ್ಯಾರ್ಥಿಗಳಿಗೆ ಗಾಯ

ಇದನ್ನೂ ಓದಿ : ಲಕ್ನೋದಲ್ಲೊಂದು ದುರಂತ ಘಟನೆ: ಮಗುವಾಗಿಲ್ಲ ಎಂಬ ಕಾರಣಕ್ಕೆ ಪತ್ನಿಯ ಖಾಸಗಿ ಅಂಗಕ್ಕೆ ಗಾಯಗೊಳಿಸಿದ ಪತಿ

ಇದನ್ನೂ ಓದಿ : Ice collapse-3 died: ವಾಷಿಂಗ್ಟನ್‌ ಸರೋವರದಲ್ಲಿ ಮಂಜುಗಡ್ಡೆ ಕುಸಿತ : ಮೂವರು ಭಾರತೀಯರು ಸಾವು

ನಿನ್ನೆ ರಾತ್ರಿ ಹೀರಾಬೆನ್‌ ಮೋದಿ ಆರೋಗ್ಯ ಹದಗೆಟ್ಟಿದೆ. ಯುಎನ್ ಮೆಹ್ತಾ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ರಿಸರ್ಚ್ ಸೆಂಟರ್, “ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ಅವರನ್ನು ಅಹಮದಾಬಾದ್‌ನಲ್ಲಿರುವ ಯುಎನ್ ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ರಿಸರ್ಚ್ ಸೆಂಟರ್‌ಗೆ ದಾಖಲಿಸಲಾಗಿದೆ ಮತ್ತು ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ” ಎಂದು ಆಸ್ಪತ್ರೆ ತಿಳಿಸಿದೆ. ಹೀರಾಬೆನ್-ಪ್ರಧಾನಿ ಮೋದಿಯವರ ತಾಯಿಗೆ ಅಧಿಕ ರಕ್ತದೊತ್ತಡವಿತ್ತು, ಆದರೆ ಈಗ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

Heeraben Modi : PM Modi’s mother Heeraben’s health deteriorated: admitted to hospital

RELATED ARTICLES

Most Popular