ಅಸ್ಸಾಂ : ಆಟೋ ರಿಕ್ಷಾ ಮತ್ತು ಟ್ರಕ್ ನಡುವೆ ಭೀಕರ ರಸ್ತೆ ಅಪಘಾತದಲ್ಲಿ ಒಂಬತ್ತು ಮಂಡಿ ಸಾವನ್ನಪ್ಪಿರುವ ಭೀಕರ ಘಟನೆ ಅಸ್ಸಾಂನ ಕರೀಂಗಜ್ ಜಿಲ್ಲೆಯಲ್ಲಿ ನಡೆದಿದೆ. ಅಪಘಾತ ನಡೆಯುತ್ತಲೇ ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸಂತಾಪ ಸೂಚಿಸಿದ್ದಾರೆ.
ದುಜಾ ಬಾಯಿ ಪಣಿಕಾ, ಸಾಲು ಬಾಯಿ ಪಣಿಕಾ, ಗರುವ್ ದಾಸ್ ಪಣಿಕಾ, ಶಂಭು ದಾಸ್ ಪಣಿಕಾ, ಲಾಲೋನ್ ಗುಸ್ವಾಮಿ, ಪೂಜಾ ಗೋರ್ಹ್, ದೇಬ್ ಗೋರ್ಹ್, ಸಾನು ರೀ, ಮಾಂಗ್ಲೇ ಕರ್ಮಾಕರ್ ಮತ್ತು ತೂಪು ಕರ್ಮಾಕರ್ ಎಂಬವರೇ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಒಟ್ಟು ಮೂವರು ಅಪ್ರಾಪ್ತರು ಸಾವನ್ನಪ್ಪಿದ್ದಾರೆ.
ಛಠ್ ಪೂಜಾ ವಿಧಿವಿಧಾನವನ್ನು ಪೂರೈಸಿ ಬೆಳಿಗ್ಗೆ 7.30ರ ಸುಮಾರಿಗೆ ಆಟೋದಲ್ಲಿ ತಮ್ಮ ಮನೆಗೆ ವಾಪಾಸಾಗುತ್ತಿದ್ದರು. ಕರೀಂಗಂಜ್‍ನ ಅಸ್ಸಾಂ-ತ್ರಿಪುರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 8 ರಲ್ಲಿ ವೇಗವಾಗಿ ಬಂದ ಸಿಮೆಂಟ್ ಸಾಗಿಸುವ ಟ್ರಕ್ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಒಂಬತ್ತು ಮಂದಿಯೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
I deeply mourn tragic death of 9 persons in an accident at Baitakhal, Patharkhandi this morning. One injured is admitted to hospital.@assampolice is trying to trace driver of the truck who had fled the scene after hitting the auto deceased were travelling in.
— Himanta Biswa Sarma (@himantabiswa) November 11, 2021
Condolences.
ಘಟನೆಗೆ ಸಂಬಂಧಿಸಿದಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸಂತಾಪ ಸೂಚಿಸಿದ್ದಾರೆ. ನಾಪತ್ತೆಯಾಗಿರುವ ಟ್ರಕ್ ಚಾಲಕನನ್ನು ಕೂಡಲೇ ಪತ್ತೆ ಹೆಚ್ಚುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ : Flights Canceled : ತಮಿಳುನಾಡಲ್ಲಿ ಭಾರೀ ಮಳೆ : 8 ವಿಮಾನಗಳ ಹಾರಾಟ ರದ್ದು
ಇದನ್ನೂ ಓದಿ : ರಸ್ತೆ ಮಧ್ಯದಲ್ಲಿ ಹೊತ್ತಿ ಉರಿದ ಬಸ್ : 12 ಪ್ರಯಾಣಿಕರು ಸಜೀವ ದಹನ
(Auto and Truck Accident 9 killed in Karimganj Assam )