Rahul Gandhi hits out at Modi govt :ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತವು ವಿವಿಧ ರಾಜ್ಯಗಳ ಒಕ್ಕೂಟವಾಗಿದ್ದು ಇದನ್ನು ಒಂದು ಸಾಮ್ರಾಜ್ಯದಂತೆ ಆಳ್ವಿಕೆ ನಡೆಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರದ ಕೇಂದ್ರಿಕರಣದ ಬಗ್ಗೆ ರಾಹುಲ್ ಗಾಂಧಿ ಟಾಂಗ್ ನೀಡಿದ್ದಾರೆ.
ಸಂವಿಧಾನದ ಅಡಿಯಲ್ಲಿ ಭಾರತವನ್ನು ವಿವಿಧ ರಾಜ್ಯಗಳ ಒಕ್ಕೂಟ ಎಂದು ಅರ್ಥೈಸಿಸಲಾಗಿದೆ. ಇದೊಂದು ಸಾಮ್ರಾಜ್ಯವಲ್ಲ. ಹಾಗಾಗಿ ಇದನ್ನು ಕೇವಲ ಒಬ್ಬ ರಾಜನಿಂದ ಆಳ್ವಿಕೆ ನಡೆಸಲು ಸಾಧ್ಯವಿಲ್ಲ. ಭಾರತದಲ್ಲಿ ಒಬ್ಬ ರಾಜ್ಯನ ಆಳ್ವಿಕೆಯು ನಡೆಯುವುದಿಲ್ಲ. ವಿವಿಧ ಭಾಷೆಗಳು ಹಾಗೂ ಸಂಸ್ಕೃತಿಗಳನ್ನು ಹತ್ತಿಕ್ಕಲು ಸಾಧ್ಯವೇ ಇಲ್ಲ. ಇದೊಂದು ಪಾಲುದಾರಿಕೆ ಹೊರತಾಗಿ ಸಾಮ್ರಾಜ್ಯವಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಸಂವಹನ ಹಾಗೂ ಸಂಧಾನವು ಕಳೆದ ಅನೇಕ ವರ್ಷಗಳಿಂದ ಭಾರತವನ್ನು ಆಳಿದ ಏಕೈಕ ಮಾರ್ಗವಾಗಿದೆ. ರಾಜ ಹಾಗೂ ಸಾಮ್ರಾಜ್ಯ ವ್ಯವಸ್ಥೆಗೆ 1947ರಲ್ಲೇ ಕಾಂಗ್ರೆಸ್ ಅಂತ್ಯ ಹಾಡಿದೆ. ಅಂದಿನಿಂದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳೆಂಬ ವ್ಯವಸ್ಥೆಯು ದೇಶದಲ್ಲಿದೆ. ಆದರೆ ಇದೀಗ ಮತ್ತೆ ಸಾಮ್ರಾಜ್ಯ ವ್ಯವಸ್ಥೆಯು ಮರುಕಳಿಸುವಂತಹ ಹುನ್ನಾರಗಳು ಕೆಂದ್ರದಿಂದ ಮತ್ತೆ ನಡೆಯುತ್ತಿದೆ. ಆದರೆ ಪ್ರತಿ ಬಾರಿಯೂ ಇಂತಹ ಹುನ್ನಾರಗಳು ದೇಶದಲ್ಲಿ ನಡೆದಾಗ ಅದನ್ನು ಮುರಿಯಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದನ್ನು ಓದಿ : Garbage Cess : ನಿಮ್ಮ ಜೇಬಿಗೆ ಕತ್ತರಿ ಹಾಕಲಿದೆ ನಿಮ್ಮ ಮನೆ ಕಸ: ಬೆಂಗಳೂರಿನಲ್ಲಿ ಸದ್ಯದಲ್ಲೇ ಗಾರ್ಬೇಜ್ ಸೆಸ್
ಇದನ್ನೂ ಓದಿ : BBMP Renovation : ಬಿಬಿಎಂಪಿ ಚುನಾವಣೆಗೆ ಭರದ ಸಿದ್ಧತೆ: ಕಟ್ಟಡ ನವೀಕರಣಕ್ಕೆ ಪ್ಲ್ಯಾನ್ ಫೈನಲ್
‘India cannot be ruled as a kingdom’: Rahul Gandhi hits out at Modi govt